ನ್ಯೂಸ್

ನನ್ನ ‘ಎಕ್ಸ್​​’ ಖಾತೆ ಹ್ಯಾಕ್​ ಆಗಿದೆ.. ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ; ಅರ್ಜುನ್ ರಾಂಪಾಲ್

ಮುಂಬೈ: ನಟ ಅರ್ಜುನ್ ರಾಂಪಾಲ್ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅಭಿಮಾನಿಗಳಿಗೆ ಸಂದೇಶ ಕಳುಹಿಸಿದ್ದಾರೆ. ತಮ್ಮ ಎಕ್ಸ್ ಖಾತೆ (ಹಿಂದಿನ ಟ್ವಿಟರ್) ಹ್ಯಾಕ್ ಆಗಿದೆ ಎಂದು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ತಮ್ಮ ಎಕ್ಸ್​ ಖಾತೆಯಿಂದ ಬರುವ ಯಾವುದೇ ಟ್ವೀಟ್ ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸದಂತೆ ಎಚ್ಚರಿಸಿದ್ದಾರೆ.

ಇದು ಒಳ್ಳೆಯ ಸುದ್ದಿಯಲ್ಲ. ನನ್ನ ಎಕ್ಸ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಯಾವುದೇ ಸಂದೇಶ ಅಥವಾ ಟ್ವೀಟ್‌ಗೆ ಪ್ರತ್ಯುತ್ತರಿಸಬೇಡಿ ಎಂದು ನಟ ಅರ್ಜುನ್ ರಾಂಪಾಲ್ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​ ಖಾತೆಯಿಂದ ಪೋಸ್ಟ್​​ ಹಂಚಿಕೊಂಡಿದ್ದು, ಫ್ಯಾನ್ಸ್​​ಗೆ ಜಾಗರೂಕರಾಗಿರಿ ಎಂದು ಸೂಚಿಸಿದ್ದಾರೆ.

ಅಭಿಮಾನಿಗಳ ಜತೆಗೆ, ಗೇಬ್ರಿಯೆಲಾ ಡಿಮೆಟ್ರಿಡ್ಸ್ ಕೂಡ ಪೋಸ್ಟ್​​ಗೆ ಆಶ್ಚರ್ಯಕರ ಎಮೋಜಿಯನ್ನು ಕಳುಹಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಈ ಸಂದೇಶಕ್ಕೆ ಒಬ್ಬರು ನೀವು ಹಣವನ್ನುಯಾಕೆ ಕೇಳುತ್ತಿದ್ದೀರಿ ಎಂದು ತಮಾಷೆ ಮಾಡಿದ್ದಾರೆ. ಕೆಲವರು ನಟನಿಗೆ ಜಾಗರೂಕರಾಗಿರುವಂತೆ ಹೇಳಿ ಕಾಮೆಂಟ್​ ಮಾಡಿದ್ದಾರೆ.

ಸೆಲಿಬ್ರಿಟಿಗಳ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳು ಹ್ಯಾಕ್​ ಆಗುವುದು ಇದೇ ಮೊದಲೆನಲ್ಲ. ಈ ಮೊದಲು ಅಮಿತಾಬ್ ಬಚ್ಚನ್ ಅವರ ಎಕ್ಸ್ ಅಕೌಂಟ್ ಕೂಡ ಹ್ಯಾಕ್ ಆಗಿದೆ.ಇವರಲ್ಲದೆ, ದೀಪಿಕಾ ಪಡುಕೋಣೆ, ಕರಣ್ ಜೋಹರ್ ಮತ್ತು ನೋರಾ ಫತೇಹಿ ಅವರ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ. ನಟ ಅರ್ಜುನ್ ರಾಂಪಾಲ್ ಕೊನೆಯದಾಗಿ 'ಕ್ರ್ಯಾಕ್ - ಜೀತೇಗಾ ಟು ಜೀಗಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. (ಏಜೆನ್ಸೀಸ್​​)