Arrest: ತಮಿಳುನಾಡಿನ ಕೊಯಮತ್ತೂರಿನ ಪೋಲ್ಲಾಚಿ ಬಳಿ ಪತ್ನಿಯೊಂದಿಗಿನ ಗಲಾಟೆಯಲ್ಲಿ ಅಡ್ಡ ಬಂದ ಅತ್ತೆಯ ಕೈಯನ್ನು ಅಳಿಯ ಕತ್ತರಿಸಿದ್ದು, ಆರೋಪಿ ಅಳಿಯನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಶನಿವಾರ(ಆಗಸ್ಟ್ 23) ವರದಿಯಾಗಿದೆ.
ಆರೋಪಿ ರವಿ ಅತ್ತೆ ಕೈ ಕತ್ತರಿಸಿದ ಅಳಿಯ. ಪೊಲ್ಲಾಚಿ ಬಳಿ ನೆಡುಂಪರೈ ಎಂಬ ಹಳ್ಳಿಯವ. ಅದೇ ಹಳ್ಳಿಯ ನಂದಿನಿಯನ್ನು ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದನು ಎನ್ನಲಾಗಿದೆ. ನಂದಿನಿಗೆ ಇದು 2ನೇ ಮದುವೆ. ಮೊದಲ ಪತಿಯಿಂದ ಬೇರ್ಪಟ್ಟು ನಂತರ ರವಿಯನ್ನು ಮದುವೆಯಾಗಿ ಸಂಸಾರ ನಡೆಸುತ್ತಿದ್ದಳು.
ಈ ನಡುವೆ ಪತಿ ರವಿ ಮತ್ತು ನಂದಿನಿ ನಡುವೆ ಕೌಟುಂಬಿಕ ಕಲಹ ಉಂಟಾಗಿತ್ತು. ಇದರಿಂದಾಗಿ ವಾರದ ಹಿಂದೆ ಪತಿ ಮೇಲೆ ಕೋಪಗೊಂಡು ಕೊಯಮತ್ತೂರಿನ ಸುಂದರಪುರಂ ಪ್ರದೇಶದಲ್ಲಿರುವ ತನ್ನ ಪೋಷಕರಾದ ಸೆಂಥಿಲ್‌ಕುಮಾರ್ ಮತ್ತು ತಂಗಮಣಿ ಅವರ ಮನೆಗೆ ಹೋಗಿ ಉಳಿದುಕೊಂಡಿದ್ದಾಳೆ.
ನಿನ್ನೆ ರಾತ್ರಿ ನಂದಿನಿ ತನ್ನ ಬಟ್ಟೆಯನ್ನು ಮತ್ತು ಸಾಮಾನುಗಳನ್ನು ಒಯ್ಯಲು ತಾಯಿ ತಂಗಮಣಿಯನ್ನು ನೆಡುಂಬರೈನಲ್ಲಿರುವ ತನ್ನ ಪತಿ ರವಿಯ ಮನೆಗೆ ಕರೆ ತಂದಿದ್ದಾಳೆ. ಈ ವೇಳೆ ಪತಿ ಮನೆಯಲ್ಲಿರಲಿಲ್ಲ ಎನ್ನಲಾಗಿದೆ. ಫೋನ್ ಮೂಲಕ ತನ್ನ ಪತಿ ಸಂಪರ್ಕಿಸಿ ಕರೆಸಿದ್ದಾಳೆ. ಈ ವೇಳೆ ಬಂದ ಪತಿ ಇನ್ನು ಮುಂದೆ ಜಗಳ ಆಡೋದು ಬೇಡ ಇಬ್ಬರು ಒಟ್ಟಿಗೆ ವಾಸಿಸೋಣ ಎಂದು ಹೇಳಿದ್ದಾನೆ. ಈ ವೇಳೆ ಮತ್ತೊಮ್ಮೆ ಜಗಳ ನಡೆದಿದೆ.
ನಂದಿನಿ ತಾಯಿ ಮನೆಯ ಬಾಗಿಲಿಗೆ ಒಂದು ಕೈ ಅಡ್ಡವಿಟ್ಟಿರುವುದನ್ನು ನೋಡಿ ಕೋಪದಿಂದ ಹತ್ತಿರವಿದ್ದ ಮಚ್ಚು ತೆಗೆದುಕೊಂಡು ಬಲಗೈಯನ್ನು ಕತ್ತರಿಸಿದ್ದಾನೆ. ತಕ್ಷಣ ರಕ್ತಸ್ರಾವವಾಗುತ್ತಿ ತಂಗಮಣಿಯನ್ನು ರಕ್ಷಿಸಿ ಸ್ಥಳೀಯರು ಪೊಲ್ಲಾಚಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೊಯಮತ್ತೂರು ಜಿಲ್ಲಾಸ್ಪತ್ರೆಗೆ ದಾಖಲಿಸಾಗಿದೆ. (ಏಜೆನ್ಸೀಸ್)