ನ್ಯೂಸ್

ನರಿಗಳನ್ನು ಕುತಂತ್ರಿಗಳೆಂದು ಏಕೆ ಕರೆಯುತ್ತಾರೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಉತ್ತರ...Foxes

Foxes : ಈ ಭೂಮಂಡಲದಲ್ಲಿ ವಾಸಿಸುವ ಪ್ರತಿಯೊಂದು ಜೀವಿಗಳಿಗೂ ಒಂದು ರೀತಿಯ ವಿಶೇಷ ಗುಣಗಳಿರುತ್ತವೆ. ನಾವು ಸಿಂಹ ಮತ್ತು ಹುಲಿಗಳನ್ನು ತುಂಬಾ ಧೈರ್ಯಶಾಲಿ ಎಂದು ಕರೆಯುತ್ತೇವೆ. ಅವುಗಳನ್ನು ನೋಡಿದಾಗ, ಕಾಡಿನಲ್ಲಿರುವ ಎಲ್ಲಾ ಪ್ರಾಣಿಗಳು ಕೂಡ ಭಯಪಡುತ್ತವೆ ಮತ್ತು ಆ ಜಾಗದಿಂದ ಕಾಲ್ಕಿಳುತ್ತವೆ. ಅದೇ ರೀತಿ, ನರಿಯನ್ನು ಬುದ್ಧಿವಂತ ಪ್ರಾಣಿ ಎಂದು ಕರೆಯಲಾಗುತ್ತದೆ.

ನರಿ ತುಂಬಾ ಬುದ್ಧಿವಂತ ಪ್ರಾಣಿ ಏನೋ ಸರಿ ಆದರೆ, ಹೆಚ್ಚಾಗಿ ಅದನ್ನು ಕುತಂತ್ರಿ ಕರೆಯುತ್ತಾರೆ. ಅಷ್ಟಕ್ಕೂ ನರಿಯನ್ನು ಏಕೆ ಕುತಂತ್ರಿ ಎಂದು ಕರೆಯುತ್ತೇವೆ? ನರಿಯ ಬಗ್ಗೆ ನಿಮಗೆ ನಿಜವಾಗಿಯೂ ಏನು ಗೊತ್ತು? ನರಿಯ ವಿಶೇಷ ಲಕ್ಷಣಗಳನ್ನು ಬಗ್ಗೆ ತಿಳಿದರೆ, ನೀವು ಆಶ್ಚರ್ಯ ಪಡುವುದರಲ್ಲಿ ಸಂದೇಹವೇ ಇಲ್ಲ. ನರಿಯ ಮೇಲೆ ಕುತಂತ್ರದ ಆರೋಪ ಏಕೆ ಇದೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ!

ಕಾಡಿನಲ್ಲಿ ವಾಸಿಸುವ ಎಲ್ಲಾ ಪ್ರಾಣಿಗಳಲ್ಲಿ ನರಿ ಅತ್ಯಂತ ಬುದ್ಧಿವಂತ ಪ್ರಾಣಿ. ತನ್ನ ಬುದ್ಧಿಶಕ್ತಿಯಿಂದ, ಅದು ಯಾವುದೇ ಅಪಾಯಕ್ಕೆ ಸಿಲುಕದೇ, ಹೆಚ್ಚು ಶ್ರಮವಿಲ್ಲದೆ ಮತ್ತು ಇತರ ಪ್ರಾಣಿಗಳ ದಾಳಿಗೆ ಒಳಗಾಗದೆ ಆರಾಮಾಗಿ ಬದುಕಬಲ್ಲದು. ಯಾವುದನ್ನೇ ಆಗಲಿ ನರಿ ಬೇಗನೆ ಕಲಿಯುತ್ತದೆ.

ಬೇಟೆಯಾಡುವುದು ಹೇಗೆಂದು ಅದಕ್ಕೆ ತಿಳಿದಿದೆ ಮತ್ತು ಬೇಟೆಯಿಂದ ತಪ್ಪಿಸಿಕೊಳ್ಳುವುದು ಹೇಗೆಂದು ಅದಕ್ಕೆ ಚೆನ್ನಾಗಿ ತಿಳಿದಿದೆ. ತನ್ನ ಕೌಶಲ್ಯದಿಂದ, ಅದು ದೊಡ್ಡ ಪ್ರಾಣಿಗಳಿಂದಲೂ ಸುಲಭವಾಗಿ ತಪ್ಪಿಸಿಕೊಳ್ಳಬಹುದು. ಹೆಚ್ಚು ಶ್ರಮವಿಲ್ಲದೆ ಆಹಾರವನ್ನು ಪಡೆಯಬಹುದು. ನರಿಯ ವಿಶೇಷತೆಯೆಂದರೆ ಅದು ಬಹಳ ಬೇಗನೆ ಕಲಿಯುತ್ತದೆ. ನರಿಗಳು ಸ್ವಾಭಾವಿಕವಾಗಿ ದೊಡ್ಡ ಪ್ರಾಣಿಗಳ ಹಿಂದೆ ಹೋಗುವುದಿಲ್ಲ. ಅವು ಸಣ್ಣ ಜೀವಿಗಳನ್ನು ಮಾತ್ರ ಬೇಟೆಯಾಡುತ್ತವೆ.

ಯಾವುದೇ ಒಂದು ನರಿ, ಸಮಸ್ಯೆಗಳನ್ನು ಎದುರಿಸಿದಾಗ, ಅವುಗಳನ್ನು ಸುಲಭವಾಗಿ ಪರಿಹರಿಸುತ್ತವೆ ಮತ್ತು ಅಪಾಯದಿಂದ ಹೊರಬರುತ್ತದೆ. ನರಿ ತುಂಬಾ ಶಾಂತವಾಗಿರುತ್ತದೆ. ಇದು ಎಲ್ಲಾ ರೀತಿಯ ಹವಾಮಾನದಲ್ಲಿಯೂ ಬದುಕಬಲ್ಲದು. ಅಲ್ಲದೆ, ನರಿಗಳು ನರಿಗಳನ್ನು ಬೇಟೆಯಾಡುವುದಿಲ್ಲ. ಇತರ ಪ್ರಾಣಿಗಳು ಬೇಟೆಯಾಡಿದ ಆಹಾರವನ್ನು ಇದು ಜಾಣತನದಿಂದ ಕದಿಯುತ್ತದೆ.

ನರಿಗಳು ಅತ್ಯುತ್ತಮ ಶ್ರವಣ, ದೃಷ್ಟಿ ಮತ್ತು ವಾಸನೆ ಗ್ರಹಿಕೆಯನ್ನು ಹೊಂದಿವೆ. ಮನುಷ್ಯರಿಗೆ ಕೇಳಿಸದ ಎತ್ತರದ ಶಬ್ದಗಳನ್ನು ಸಹ ನರಿಗಳು ಕೇಳಬಲ್ಲವು ಮತ್ತು ಕತ್ತಲೆಯಲ್ಲಿ ಅವು ಸ್ಪಷ್ಟವಾಗಿ ನೋಡಬಲ್ಲವು. ನರಿಗಳು ಕಿಲೋಮೀಟರ್ ದೂರದಿಂದಲೂ ಪ್ರಾಣಿಗಳ ಮಾಂಸದ ವಾಸನೆಯನ್ನು ಪತ್ತೆ ಮಾಡಬಲ್ಲವು.

ನರಿಗಳು ತಮ್ಮ ದೇಹದ ಗಾತ್ರಕ್ಕೆ ಹೋಲಿಸಿದರೆ ದೊಡ್ಡ ಮೆದುಳಿನ ಗಾತ್ರವನ್ನು ಹೊಂದಿರುತ್ತವೆ. ಇದು ಅವುಗಳಿಗೆ ಹೆಚ್ಚಿನ ಬುದ್ಧಿವಂತಿಕೆಯನ್ನು ನೀಡುತ್ತದೆ. ನರಿಗಳು ಅತ್ಯುತ್ತಮ ಸಂವೇದನಾ ಸಾಮರ್ಥ್ಯಗಳನ್ನು ಹೊಂದಿವೆ. ಅವು ತಮ್ಮ ಪರಿಸರವನ್ನು ನಿರ್ಣಯಿಸಬಹುದು. ಪರಿಸ್ಥಿತಿಗಳು ಅನುಕೂಲಕರವಾಗಿಲ್ಲದ ಸ್ಥಳದಲ್ಲಿ ಅವು ಉಳಿಯುವುದಿಲ್ಲ. ಹೀಗಾಗಿ ನರಿಗಳನ್ನು ಬುದ್ಧಿವಂತ ಪ್ರಾಣಿಗಳೆಂದು ಕರೆಯುತ್ತಾರೆ. (ಏಜೆನ್ಸೀಸ್​)