ನ್ಯೂಸ್

ವಾಷಿಂಗ್ ಮೆಷಿನ್‌ನಲ್ಲಿ ಬಟ್ಟೆ ಸರಿಯಾಗಿ ಕ್ಲೀನ್ ಆಗ್ತಿಲ್ವಾ? ನೀವು ಈ ತಪ್ಪು ಮಾಡುತ್ತಿರಬಹುದು! | Washing Machine Tips

ವಾಷಿಂಗ್ ಮೆಷಿನ್‌ನಲ್ಲಿ ಬಟ್ಟೆ ಕ್ಲೀನ್ ಆಗದಿರಲು ಮತ್ತು ಕೆಟ್ಟ ವಾಸನೆ ಬರಲು ಕಾರಣವೇನು? ಬಟ್ಟೆ ತುಂಬುವುದು, ಡಿಟರ್ಜೆಂಟ್ ಬಳಕೆ ಸೇರಿದಂತೆ ಈ ಸಾಮಾನ್ಯ ತಪ್ಪುಗಳನ್ನು ಮಾಡಬೇಡಿ.

Laundry Tips: ವಾಷಿಂಗ್ ಮೆಷಿನ್‌ನಲ್ಲಿ ಬಟ್ಟೆ ಒಗೆದ್ರೂ ಕೊಳೆ ಹೋಗ್ತಿಲ್ವಾ? ಬಟ್ಟೆಯಿಂದ ಕೆಟ್ಟ ವಾಸನೆ ಬರ್ತಿದ್ಯಾ? ಹಾಗಾದ್ರೆ ಮೆಷಿನ್ ಹಾಳಾಗಿದೆ ಅಂತ ಟೆನ್ಷನ್ ಮಾಡ್ಕೋಬೇಡಿ. ಬಟ್ಟೆ ಒಗೆಯುವಾಗ ನಾವು ಮಾಡುವ ಕೆಲವು ಸಾಮಾನ್ಯ ತಪ್ಪುಗಳೇ ಇದಕ್ಕೆ ಕಾರಣವಾಗಿರಬಹುದು.

ಬಟ್ಟೆಗಳನ್ನು ತುಂಬಬೇಡಿ

ಮೆಷಿನ್‌ನ ಸಾಮರ್ಥ್ಯಕ್ಕಿಂತ ಹೆಚ್ಚು ಬಟ್ಟೆ ಹಾಕಿದ್ರೆ ಅವು ಸರಿಯಾಗಿ ತಿರುಗಲು ಜಾಗ ಇರಲ್ಲ. ಇದರಿಂದ ನೀರು ಮತ್ತು ಡಿಟರ್ಜೆಂಟ್ ಎಲ್ಲ ಬಟ್ಟೆಗಳಿಗೂ ಸಮವಾಗಿ ತಲುಪದೆ, ಕೊಳೆ ಹಾಗೇ ಉಳಿಯಬಹುದು. ಹಾಗಾಗಿ ಮೆಷಿನ್‌ನ ಸಾಮರ್ಥ್ಯಕ್ಕೆ ತಕ್ಕಂತೆ ಬಟ್ಟೆ ಹಾಕಿ.

ವಾಷಿಂಗ್ ಮೆಷಿನ್‌ನಲ್ಲಿ ಹೆಚ್ಚು ಬಟ್ಟೆ ತುಂಬುವುದು

ಡಿಟರ್ಜೆಂಟ್ ಹೆಚ್ಚಾದರೂ ಸಮಸ್ಯೆ

ಹೆಚ್ಚು ನೊರೆ ಬಂದರೆ ಬಟ್ಟೆ ಚೆನ್ನಾಗಿ ಕ್ಲೀನ್ ಆಗುತ್ತೆ ಅಂತ ಅಂದುಕೊಳ್ಳಬೇಡಿ. ಡಿಟರ್ಜೆಂಟ್ ಜಾಸ್ತಿಯಾದ್ರೆ ಬಟ್ಟೆಯಲ್ಲಿ ಬಿಳಿ ಕಲೆ ಉಳಿಯಬಹುದು. ಕಡಿಮೆ ಹಾಕಿದ್ರೂ ಕೊಳೆ ಸರಿಯಾಗಿ ಹೋಗಲ್ಲ. ಬಟ್ಟೆಗಳ ಪ್ರಮಾಣ ಮತ್ತು ಕೊಳೆಯ ಮಟ್ಟಕ್ಕೆ ತಕ್ಕಂತೆ ಡಿಟರ್ಜೆಂಟ್ ಬಳಸಿ.

ಡಿಟರ್ಜೆಂಟ್ ಸರಿಯಾದ ಪ್ರಮಾಣದಲ್ಲಿ ಬಳಸುವುದು

ಬಟ್ಟೆಗೆ ತಕ್ಕ ವಾಶ್ ಮೋಡ್ ಆಯ್ಕೆ ಮಾಡಿ

ಜೀನ್ಸ್‌, ದಪ್ಪ ಬಟ್ಟೆ ಮತ್ತು ಸೂಕ್ಷ್ಮ ಬಟ್ಟೆಗಳಿಗೆ ಒಂದೇ ವಾಶ್ ಮೋಡ್ ಬಳಸಬೇಡಿ. ಬಟ್ಟೆಯ ವಿಧಕ್ಕೆ ತಕ್ಕ ಮೋಡ್ ಆಯ್ಕೆ ಮಾಡಿದ್ರೆ ಬಟ್ಟೆಯ ಗುಣಮಟ್ಟ ಉಳಿಯುತ್ತದೆ ಮತ್ತು ಕೊಳೆ ಕೂಡ ಸರಿಯಾಗಿ ಹೋಗುತ್ತದೆ.

ಒಗೆದ ಬಟ್ಟೆಗಳನ್ನು ಮೆಷಿನ್‌ನಲ್ಲೇ ಬಿಡದಿರಿ

ವಾಷಿಂಗ್ ಮುಗಿದ ಮೇಲೆ ಒದ್ದೆ ಬಟ್ಟೆಗಳನ್ನು ಗಂಟೆಗಟ್ಟಲೆ ಮೆಷಿನ್‌ನಲ್ಲೇ ಬಿಟ್ಟರೆ ಕೆಟ್ಟ ವಾಸನೆ ಬರಬಹುದು. ಹಾಗಾಗಿ ಒಗೆದ ತಕ್ಷಣ ಬಟ್ಟೆಗಳನ್ನು ಹೊರತೆಗೆದು ಒಣಗಿಸಿ. ಬಳಕೆ ಮುಗಿದ ಬಳಿಕ ಮೆಷಿನ್ ಬಾಗಿಲು ಮತ್ತು ಡಿಟರ್ಜೆಂಟ್ ಟ್ರೇ ಅನ್ನು ಸ್ವಲ್ಪ ಹೊತ್ತು ತೆರೆದಿಡಿ.

ಮೆಷಿನ್‌ನಲ್ಲೇ ಉಳಿದ ಒದ್ದೆ ಬಟ್ಟೆಗಳು

ಮೆಷಿನ್ ಕ್ಲೀನ್ ಮಾಡೋದನ್ನ ಮರೀಬೇಡಿ

ಮೆಷಿನ್ ಒಳಗೆ ಡಿಟರ್ಜೆಂಟ್ ಅವಶೇಷ, ಬಟ್ಟೆಯ ನಾರು ಮತ್ತು ನೀರಿನಲ್ಲಿರುವ ಖನಿಜಗಳು ಸೇರಿಕೊಳ್ಳಬಹುದು. ಇದರಿಂದ ವಾಸನೆ ಬರಬಹುದು. ತಯಾರಕರು ಸೂಚಿಸಿದಂತೆ ಟಬ್ ಕ್ಲೀನ್ ಮಾಡಿ. ಫಿಲ್ಟರ್ ಮತ್ತು ನೀರು ಹೊರಹೋಗುವ ಪೈಪ್‌ ಅನ್ನು ಕೂಡ ನಿಯಮಿತವಾಗಿ ಪರಿಶೀಲಿಸಿ.

ವಾಷಿಂಗ್ ಮೆಷಿನ್ ಸ್ವಚ್ಛಗೊಳಿಸುವುದು

ಇದನ್ನೂ ಓದಿ: Garba Viral Video: ಟ್ಯೂಷನ್‌ಗೆ ಚಕ್ಕರ್ ಹೊಡೆದು ಗರಬಾ ಆಡೋಕೆ ಹೋದ ವಿದ್ಯಾರ್ಥಿ: ಟೀಚರ್ ಕೈಗೆ ಸಿಕ್ಕಿಬಿದ್ದ ಸ್ಟೂಡೆಂಟ್

ಇದಲ್ಲದೆ, ಬಿಳಿ ಬಟ್ಟೆ, ಬಣ್ಣದ ಬಟ್ಟೆ ಮತ್ತು ಸೂಕ್ಷ್ಮ ಬಟ್ಟೆಗಳನ್ನು ಪ್ರತ್ಯೇಕವಾಗಿ ಒಗೆಯುವುದು ಉತ್ತಮ. ಈ ಸಣ್ಣ ಅಭ್ಯಾಸಗಳನ್ನು ಪಾಲಿಸಿದ್ರೆ ಬಟ್ಟೆಗಳು ಸ್ವಚ್ಛವಾಗಿರುತ್ತವೆ, ಕೆಟ್ಟ ವಾಸನೆ ಕಡಿಮೆಯಾಗುತ್ತದೆ ಮತ್ತು ವಾಷಿಂಗ್ ಮೆಷಿನ್ ಹೆಚ್ಚು ದಿನ ಬಾಳಿಕೆ ಬರುತ್ತದೆ.