ನ್ಯೂಸ್

ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಹಾಗಿದ್ದರೆ ಈ ಆಹಾರ ಸೇವಿಸಿ! |weight loss dessert

weight loss dessert : ಇಂದಿನ ದಿನಗಳಲ್ಲಿ ಹಲವಾರು ಜನ ತೂಕ ಇಳಿಸಿಕೊಳ್ಳಲು ಹಲವಾರು ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕಾಗಿ ಜಿಮ್​, ಮಾತ್ರೆಗಳು, ಆರೋಗ್ಯ ತಪಾಸಣೆ ಹಾಗೂ ಇನ್ನಿತರವುಗಳ ಮೊರೆ ಹೋಗುತ್ತಿದ್ದಾರೆ. ಆದರೂ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಇಲ್ಲದೆ, ನಿರಸೆ ಆಗಿದ್ದರೆ, ಅಂತವರು ಈ ರೀತಿಯ ಆಹಾರ ಸೇವಿಸಿ ಇದು ತೂಕ ಇಳಿಸಲು ಬಹಳಷ್ಟು ಸಹಾಯ ಮಾಡುತ್ತದೆ.

ಬೇಕಾಗುವ ಪದಾರ್ಥಗಳು

* 200 ಮಿಲೀ. ಹಾಲು

* 2 ಏಲಕ್ಕಿ

* 1 ಕರ್ಜೂರ

* ಕೇಸರಿ ದಳ

* 5 ಗೋಡಂಬಿ

* 15 ತಾವರೆ ಬೀಜ

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು, ಅದಕ್ಕೆ ಹಾಲು, ಏಲಕ್ಕಿ ಹಾಕಿ ಚೆನ್ನಾಗಿ ಕುದಿಸಿರಿ. ನಂತರ ಅದಕ್ಕೆ ತಾವರೆ ಬೀಜ, ಗೋಡಂಬಿ, ಕರ್ಜೂರ, ಜೇನುತುಪ್ಪ ಸೇರಿಸಿ ಕುದಿಸಿ ಹೊರಗೆ ತೆಗೆಯಿರಿ. ನಂತರ ಅದಕ್ಕೆ ಶುಂಠಿ ಸೇರಿಸಿ ಮಿಕ್ಸಿ ಮಾಡಿ ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ಕೇಸರಿ ದಳ, ಬಾದಾಮಿ ಚೂರು, ಪಿಸ್ತಾ ಸೇರಿಸಿ ಸವಿಯಿರಿ. (ಏಜೆನ್ಸೀಸ್​) ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ