ನ್ಯೂಸ್

ಪದೇಪದೆ ನಿಮ್ಮ Credit Card ಅಪ್ಲಿಕೇಶನ್ ರಿಜೆಕ್ಟ್​ ಆಗುತ್ತಿದ್ದೆಯೇ?: ಇಲ್ಲಿವೆ 5 ಕಾರಣಗಳು

Credit Card: ಇಂದಿನ ಡಿಜಿಟಲ್ ಯುಗದಲ್ಲಿ ಬಹುತೇಕರು ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಾರೆ. ಪಡೆಯುವ ಉದ್ದೇಶ ಇಲ್ಲದೆ ಹೋದರೂ, ನಗದು ಹಣ ಸಿಗುವ ಆಸೆಯಿಂದ ಆಯಾ ಬ್ಯಾಂಕ್‌ಗಳಲ್ಲಿ ವಿತರಿಸುವ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯುತ್ತಾರೆ. ಇನ್ನು ಎಷ್ಟೋ ಜನ ಕ್ರೆಡಿಟ್​ ಕಾರ್ಡ್ ಪಡೆಯಲು ವರ್ಷನುಗಟ್ಟಲೇ ಅಪ್ಲಿಕೇಶನ್ ಹಾಕುತ್ತಲೇ ಇರುತ್ತಾರೆ.​ ಆದರೆ, ಇವ್ರ ಅಪ್ಲಿಕೇಷನ್​ ರಿಜೆಕ್ಟ್​ ಆಗುತ್ತಲೇ ಇರುತ್ತದೆ ಇದಕ್ಕೆ ಕಾರಣ ಏನು ತಿಳಿಯೋಣ.

ರಿಜೆಕ್ಟ್​ ಆಗಲು ಈ 5 ಪ್ರಮುಖ ಕಾರಣ

1.ತಪ್ಪಾದ ಮಾಹಿತಿ

ನಿಮ್ಮ ಅಪ್ಲಿಕೇಶನ್ ತುಂಬುವಾಗ ಹೆಸರು ಸೇರಿದಂತೆ ನಾನಾ ರೀತಿಯ ಮಿಸ್ಟೆಕ್​ಗಳನ್ನು ಮಾಡುತ್ತವೆ. ಅಲ್ಲದೆ, ಅರ್ಜಿಯ ನಮೂನೆಯಲ್ಲಿ ತಪ್ಪಾದ ಕಾಗುಣಿತ, ಹೆಸರು, ವಿವವರಗಳು, ಪ್ಯಾನ್​ ಸೇರಿ ಮುಂತಾದ ದೋಷಗಳಿಂದ ನೇರ ನಿರಾಕರಣೆಗೆ ಕಾರಣವಾಗುತ್ತದೆ.

2.ಕಡಿಮೆ ಕ್ರೆಡಿಟ್​ ಸ್ಕೋರ್​

ಕಡಿಮೆ ಕ್ರೆಡಿಟ್​ ಸ್ಕೋರ್​(ಸಿಬಲ್​ ಸ್ಕೋರ್) ಕೂಡ ಅಪ್ಲಿಕೇಶನ್​ ನೇರ ನಿರಾಕರಣೆಗೆ ಪ್ರಮುಖ ಕಾರಣಾವಾಗಿದೆ. ಹೆಚ್ಚಿನ ಕ್ರೆಡಿಟ್​ ಕಾರ್ಡ್​ ವಿತರಕರು 750ಕ್ಕೂ ಅಧಿಕ ಸ್ಕೋರ್​ಗಳನ್ನು ಹೊಂದಿರುವ ವ್ಯಕ್ತಿಗಳನ್ನು ಬಯಸುತ್ತಾರೆ. ನಿಮ್ಮ ಸ್ಕೋರ್​ ಇದಕ್ಕಿಂದಂತೆ ಕಡಿಮೆಯಿದ್ದರೆ ನೀವು ತಿರಸ್ಕರಿಸಲ್ಪಟ್ಟಿದ್ದರಿ ಎಂದರ್ಥ.

3.ಕಡಿಮೆ ಮತ್ತು ಅತ್ಯಲ್ಪ ಅದಾಯ

ಕ್ರೆಡಿಟ್​ ಕಾರ್ಡ್​ ನೀಡುವವರು ಅಭ್ಯರ್ಥಿಗಳು ಪೂರೈಸಬೇಕಾದ ಆದಾಯದ ಅವಶ್ಯಕತೆಗಳನ್ನು ಹೊಂದಿರುತ್ತಾರೆ. ಸೂಕ್ತವಾದ ಆದಾಯದ ದಾಖಲೆ ಮತ್ತು ಅವುಗಳನ್ನು ಕಾರ್ಡ್​ನ ಅವಶ್ಯಕತೆಗಳೊಂದಿಗೆ ಹೊಂದಿಸಬೇಕು. ಇಲ್ಲವಾದ್ರೆ ನಿಮ್ಮ ಅಪ್ಲಿಕೇಶನ್​ ರಿಜೆಕ್ಟ್​.

5.ಹಲವಾರು ಅರ್ಜಿಗಳ ಪರಿಸ್ಥಿತಿ

ಬಹಳ ಕಡಿಮೆ ಅವಧಿಯಲ್ಲಿ ಹಲವಾರು ಕ್ರೆಡಿಟ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುವುದು ನಿಮ್ಮ ಕ್ರೆಡಿಟ್ ಸ್ಕೋರ್‌ಗೆ ಕೆಟ್ಟದಾಗಿರಬಹುದು. ಪ್ರತಿಯೊಂದು ಅರ್ಜಿಯು ನಿಮ್ಮ ಕ್ರೆಡಿಟ್ ವರದಿಯ ಬಗ್ಗೆ ಕಠಿಣ ವಿಚಾರಣೆಗೆ ಕಾರಣವಾಗುತ್ತದೆ ಮತ್ತು ಸಾಲದಾತರು ಇದನ್ನು ನಕಾರಾತ್ಮಕವಾಗಿ ನೋಡುತ್ತಾರೆ.

6.ಹೆಚ್ಚಿನ ಸಾಲ-ಆದಾಯದ ಅನುಪಾತ

ನಿಮ್ಮ ಆದಾಯಕ್ಕೆ ಗಣನೀಯ ಸಾಲದ ಹೊರೆ ಪ್ರಸ್ತುತ ನಿಮ್ಮ ಮೇಲಿದ್ದರೆ, ಸಾಲದಾತರು ಹೆಚ್ಚಿನ ಸಾಲವನ್ನು ನೀಡಲು ಬಯಸುವುದಿಲ್ಲ. ಸಾಮಾನ್ಯವಾಗಿ, ಸಾಲ -ಆದಾಯದ ಅನುಪಾತವು 0 ರ ಹತ್ತಿರದಲ್ಲಿರಬೇಕು. ಇದರರ್ಥ ನಿಮ್ಮ ಆದಾಯಕ್ಕೆ ಹೋಲಿಸಿದರೆ ಸಾಲದ ಮೊತ್ತ ಕಡಿಮೆ ಇದ್ದಷ್ಟೂ ಅದು ಉತ್ತಮವಾಗಿರುತ್ತದೆ. (ಎಜೆನ್ಸೀಸ್​)