ನ್ಯೂಸ್

ಟ್ರಿಪ್​ ಹೋಗಲು ಪ್ಲಾನ್​ ಮಾಡ್ತಿದ್ದೀರಾ? ಹಾಗಿದ್ರೆ ಪ್ರವಾಸಕ್ಕೆ ಹೊರಡುವ ಮುನ್ನ ಇದನ್ನು ತಿಳಿದಿರಲೇಬೇಕು| trip

trip ; ಪ್ರವಾಸ ಎಂದರೆ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ. ನಾವು ಇರುವ ಸ್ಥಳವನ್ನು ಬಿಟ್ಟು ಬೇರೆ ಬೇರೆ ಕಡೆ ಪ್ರಯಾಣ ಮಾಡಿ ಆ ಸ್ಥಳಗಳ ಮನಮೋಹಕ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಅನೇಕರು ಇಷ್ಟಪಡುತ್ತಾರೆ. ಪ್ರಕೃತಿಯಲ್ಲಾಗುವ ವಿಸ್ಮಯ ಹಾಗೂ ಬದಲಾವಣೆಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಕಟ್ಟಡಗಳನ್ನು ನೋಡುವುದು ಅನೇಕರ ಕನಸಾಗಿದೆ.

ಟ್ರಾವೆಲಿಂಗ್ ನಾವು ನೋಡದೆ ಇರುವ, ಅನುಭವಿಸದೆ ಇರುವ ಅದೆಷ್ಟೋ ಹೊಸ ಹೊಸ ಅಚ್ಚರಿಗಳನ್ನು ನಮ್ಮ ಮುಂದೆ ಹೊತ್ತು ತರುತ್ತದೆ. ಕಾಡು ಬೆಟ್ಟಗಳ ಭಯಾನಕತೆ ಇರಬಹುದು, ನದಿ-ಜಲಪಾತಗಳ ಸೊಬಗು ಇರಬಹುದು, ಸಮುದ್ರದ ಅಬ್ಬರ, ಅನೇಕ ತೀರ್ಥಕ್ಷೇತ್ರಗಳು ನಮ್ಮನ್ನು ನಾವೇ ಮರೆಯುವಂತೆ ಮಾಡಿಸುತ್ತದೆ. ಇದೆಲ್ಲದರ ಜೊತೆಗೆ ಪ್ರವಾಸಕ್ಕೆ ಹೋಗುವ ಮುನ್ನ ನಾವು ಕೆಲವು ಪೂರ್ವ ಸಿದ್ಧತಾ ಕ್ರಮಗಳನ್ನು ಅನುಸರಿಸಬೇಕಾಗಿರುತ್ತದೆ. ಹಾಗಿದ್ದರೆ ಏನೇನು ತಯಾರಿ ಮಾಡಬೇಕು ಎಂಬುದನ್ನು ತಿಳಿಯೋಣ.

ಯೋಜನೆ: ದಿನಾಂಕ, ಮತ್ತು ಪ್ರವಾಸದ ಉದ್ದೇಶವನ್ನು ತಿಳಿಯಿರಿ. ಹವಾಮಾನ, ಸ್ಥಳೀಯ ಘಟನೆಗಳು, ಮತ್ತು ಪ್ರವಾಸದ ಸಮಯವನ್ನು ಗಮನಿಸುವುದು.

ಬಜೆಟ್: ಪ್ರಯಾಣ, ವಸತಿ, ಆಹಾರ, ಮತ್ತು ಚಟುವಟಿಕೆಗಳಿಗೆ ಸರಿಹೊಂದುವಂತಹ ಬಜೆಟ್ ರೂಪಿಸಿಕೊಳ್ಳಿ.

ದಾಖಲೆಗಳು: ಪಾಸ್‌ಪೋರ್ಟ್, ವೀಸಾ, ಟಿಕೆಟ್‌ಗಳು, ಗುರುತಿನ ಚೀಟಿಗಳು, ಮತ್ತು ಇತರ ಅಗತ್ಯ ದಾಖಲೆಗಳನ್ನು ಇಟ್ಟುಕೊಳ್ಳಿ.

ಬುಕಿಂಗ್​ ವ್ಯವಸ್ಥೆ: ಹೋಟೆಲ್, ವಿಮಾನ, ರೈಲು, ಅಥವಾ ಬಸ್ ಟಿಕೆಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಳ್ಳಿ.

ಪ್ಯಾಕಿಂಗ್: ಹವಾಮಾನಕ್ಕೆ ತಕ್ಕ ಬಟ್ಟೆ, ಅಗತ್ಯ ವಸ್ತುಗಳು, ಔಷಧಿ, ಚಾರ್ಜರ್ ಮತ್ತು ತುರ್ತು ಕಿಟ್‌ನೊಂದಿಗೆ ಬ್ಯಾಗ್ ಸಿದ್ಧಪಡಿಸಿಕೊಳ್ಳುವುದು.

ವಿಮೆ: ಪ್ರಯಾಣ ವಿಮೆ ಮತ್ತು ಆರೋಗ್ಯ ವಿಮೆಯನ್ನು ಖರೀದಿಸಿದರೆ ಉತ್ತಮ.

ಸ್ಥಳೀಯ ಮಾಹಿತಿ: ಆ ಸ್ಥಳದ ಕಾನೂನು, ಸಂಸ್ಕೃತಿ, ಮತ್ತು ಆ ಪ್ರದೇಶದ ತುರ್ತು ಸಂಖ್ಯೆಗಳ ಬಗ್ಗೆ ತಿಳಿದುಕೊಳ್ಳಿ.

ಆರೋಗ್ಯ: ಅಗತ್ಯ ಲಸಿಕೆಗಳು, ಔಷಧಿಗಳು, ಮತ್ತು ಸುರಕ್ಷತಾ ಕ್ರಮಗಳನ್ನು ಮಾಸ್ಕ್, ಸ್ಯಾನಿಟೈಜರ್ ಇಟ್ಟುಕೊಂಡರೆ ಬಹಳ ಉತ್ತಮ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು ಹಾಗೂ ವಿವಿಧ ಪಠ್ಯಗಳಿಂದ ಸಂಗ್ರಹಿಸಲಾಗಿದೆ.

(ಏಜೆನ್ಸೀಸ್)

ಮನೆಯ ಸುರಕ್ಷತೆ: ಮನೆಯನ್ನು ಲಾಕ್ ಮಾಡಿ, ಅಗತ್ಯವಿದ್ದರೆ ನೆರೆಹೊರೆಯವರಿಗೆ ತಿಳಿಸಿ, ಮತ್ತು ಮನೆಯ ವಿದ್ಯುತ್ ಸಾಧನಗಳನ್ನು ಆಫ್ ಮಾಡಿ.