ಮಂಡ್ಯ: ಮೇಲುಕೋಟೆಯಲ್ಲಿ ಪರಿಭಾಷಾ ಚಿತ್ರತಂಡ ಯಡವಟ್ಟು ಮಾಡಿಕೊಂಡಿದ್ದು, ಚಿತ್ರದ ಶೂಟಿಂಗಿಗೆ ಪುರಾತತ್ವ ಇಲಾಖೆ ರೆಡ್ ಸಿಗ್ನಲ್ ತೋರಿಸಿದೆ.
ನಾಗಚೈತನ್ಯ ನಟನೆಯ ಪ್ರೊಡಕ್ಷನ್ ನಂಬರ್ 10 ಚಿತ್ರ ಇದು. ಚಿತ್ರೀಕರಣಕ್ಕೆ ಅನುಮತಿ ಪಡೆದಿದ್ದ ಚಿತ್ರತಂಡ, ರಾಯಗೋಪುರವನ್ನೇ ಪಾರ್ಟಿ ಸೆಟ್ ಆಗಿ ಪರಿವರ್ತಿಸಿತ್ತು. ವಿವಿಧ ಬ್ರಾಂಡ್‌ಗಳ ಮದ್ಯದ ಬಾಟಲಿಗಳನಿಟ್ಟು ಶೂಟಿಂಗ್ ನಡೆಸಿತ್ತು. ಚಿತ್ರತಂಡದ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದರಿಂದ ಎಚ್ಚೆತ್ತ ಪುರಾತತ್ವ ಇಲಾಖೆ ಶೂಟಿಂಗ್‌ಗೆ ಕೊಟ್ಟಿದ್ದ ಅನುಮತಿಯನ್ನು ಹಿಂತೆಗೆದುಕೊಂಡಿದೆ. ಅಷ್ಟೇ ಅಲ್ಲ, ಅನುಮತಿ ನೀಡುವ ಸಮಯದಲ್ಲಿ ಸ್ವೀಕರಿಸಿದ್ದ ಶುಲ್ಕವನ್ನೂ ಮುಟ್ಟುಗೋಲು ಹಾಕಿಕೊಂಡಿದೆ. ಸ್ಮಾರಕದ ಸ್ಥಳದಲ್ಲಿ ಹಾಕಿರುವ ಸೆಟ್ ಕೂಡಲೇ ತೆರವು ಮಾಡುವಂತೆ ಸೂಚನೆ ನೀಡಿದೆ.