ಬೆಂಗಳೂರಿನ ಉದ್ಯೋಗ ಮಿತ್ರ ಕಚೇರಿಯಲ್ಲಿ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅಧ್ಯಕ್ಷತೆಯಲ್ಲಿ ಏಕಗವಾಕ್ಷಿ ಸಮಿತಿ ಸಭೆ ಗುರುವಾರ ನಡೆಯಿತು. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇವಿ ರಮಣ ರೆಡ್ಡಿ, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಎನ್ ಶಿವಶಂಕರ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 
ನ್ಯೂಸ್

81 ಹೊಸ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ: ಸಚಿವ ನಿರಾಣಿ ಅಧ್ಯಕ್ಷತೆಯಲ್ಲಿ ಸಭೆ

Webdesk - Ravikanth

ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಉತ್ತೇಜನ, ಉದ್ಯಮಗಳ ಆಕರ್ಷಣೆ ಮೂಲಕ ಉದ್ಯೋಗ ಸೃಷ್ಟಿಸಲು ಸರ್ಕಾರ ಒತ್ತಾಸೆ ನೀಡಿದ್ದು, ಪೂರಕವಾಗಿ ಉದ್ಯಮಿಗಳು ಸ್ಪಂದಿಸುತ್ತಿದ್ದಾರೆ. ಕೈಗಾರಿಕಾ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡಿ ಉದ್ಯೋಗಗಳ ಸೃಷ್ಟಿಗೆ ಒತ್ತು ನೀಡಿರುವ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು 81 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಿದೆ. ಒಟ್ಟು 2,689.51 ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ 6,825 ಉದ್ಯೋಗಗಳ ಸೃಜನೆ ಅಂದಾಜಿಸಲಾಗಿದೆ. ಅನುಮತಿ ನೀಡಿದ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಅಗತ್ಯ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಕರ್ನಾಟಕ ಉದ್ಯೋಗಮಿತ್ರ ಕಚೇರಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ ನಿರಾಣಿ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಏಕಗವಾಕ್ಷಿ ತೀರುವಳಿ ಸಮಿತಿ ಸಭೆ ಗುರುವಾರ ನಡೆಯಿತು. ಸಮಿತಿಯು 50 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆಯ ಏಳು ಪ್ರಮುಖ ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಯೋಜನೆಗಳನ್ನು ಪರಿಗಣಿಸಿ ಅಸ್ತು ಎಂದಿದ್ದು, 1,229.43 ರೂ. ಮೌಲ್ಯದ ಈ ಯೋಜನೆಗಳು ರಾಜ್ಯದಲ್ಲಿ 1,734 ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ನಿರಾಣಿ ತಿಳಿಸಿದ್ದಾರೆ. ಅಲ್ಲದೆ, 15 ಕೋಟಿ ರೂ.ಗಿಂತ ಹೆಚ್ಚು ಹಾಗೂ 50 ಕೋಟಿ ರೂ.ಗಿಂತ ಕಡಿಮೆ ಹೂಡಿಕೆಯ 71 ಹೊಸ ಯೋಜನೆಗಳಿಗೆ ಅನುಮತಿ ನೀಡಿದ್ದು, 1,308.06 ಕೋಟಿ ರೂ. ಮೊತ್ತದ ಯೋಜನೆಗಳಡಿ 5,091 ಜನರಿಗೆ ಉದ್ಯೋಗಾವಕಾಶ ಲಭಿಸಲಿದೆ. 151.42 ಕೋಟಿ ರೂ. ಹೂಡಿಕೆಯ ಮೂರು ಯೋಜನೆಗಳು ಅನುಮೋದನೆ ಪಡೆದಿವೆ ಎಂದವರು ಹೇಳಿದ್ದಾರೆ. ಏಪ್ರಿಲ್ ಅಂತ್ಯಕ್ಕೆ ನಡೆದ ಸಭೆಯಲ್ಲಿ 60 ಕೈಗಾರಿಕಾ ಯೋಜನೆಗಳಿಗೆ ಅನುಮತಿ ನೀಡಿದ್ದು, ಒಟ್ಟು 2,465.94 ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ 8,575 ಉದ್ಯೋಗಗಳ ಸೃಜನೆ ಅಂದಾಜಿಸಲಾಗಿದೆ.

ಅನುಮೋದಿತ ಪ್ರಸ್ತಾವನೆಗಳು

  • ಪರ್ಪಲ್​ಸ್ಟಾರ್ ಹೈಜೀನ್ ಪ್ರೖೆವೇಟ್ ಲಿಮಿಟೆಡ್; ಹೂಡಿಕೆ 270 ಕೋಟಿ ರೂ., ಉದ್ಯೋಗ - 400
  • ಬೆಳಗಾವಿ ಶುಗರ್ಸ್ ಪ್ರೖೆವೇಟ್; 240.84 ಕೋಟಿ ರೂ. ಹೂಡಿಕೆ, ಉದ್ಯೋಗ- 170
  • ಪರತ್ಪರ ಕಾಫಿ ಲಿಮಿಟೆಡ್; 236.8 ಕೋಟಿ ರೂ. ಹೂಡಿಕೆ, ಉದ್ಯೋಗ- 200
  • ಲಾಜಿಕಲಿ ಇನ್ಪೋಮೀಡಿಯಾ ಪ್ರೖೆವೇಟ್ ಲಿಮಿಟೆಡ್; ಹೂಡಿಕೆ 228.19 ಕೋಟಿ ರೂ., ಉದ್ಯೋಗ- 614
  • ಎಎನ್​ಎಸ್ ಪೇಪರ್ ಪ್ರೖೆವೇಟ್ ಲಿಮಿಟೆಡ್; 100 ಕೋಟಿ ರೂ. ಹೂಡಿಕೆ, ಉದ್ಯೋಗ- 100
  • ಗೋದಾವತ್ ಪುಡ್ ಪೋ› ಪ್ರೖೆವೇಟ್ ಲಿಮಿಟೆಡ್; 98.60 ಕೋಟಿ ರೂ. ಹೂಡಿಕೆ, ಉದ್ಯೋಗ - 30
  • ಜ್ಯೋತಿಸ್ನಾ ಲೈ ಹೈಟೆಕ್ ಪ್ರೖೆವೇಟ್ ಲಿಮಿಟೆಡ್; 50 ಕೋಟಿ ರೂ. ಹೂಡಿಕೆ, ಉದ್ಯೋಗ- 220