ನ್ಯೂಸ್

ಪಂಡರಾಪುರ ಪಾದಯಾತ್ರಿಗಳ ಹರಿದ ಪಾದರಕ್ಷೆ ಹೊಲಿದುಕೊಡುವ ಆರೆಸ್ಸೆಸ್ ಕಾರ್ಯಕರ್ತ

Webdesk - Savina Naik

ಪುಣೆ: ಸೇವೆ ಮಾಡಬೇಕು ಎನ್ನುವ ಮನಸ್ಸಿದ್ದರೆ ಸಾಕು. ಯಾವುದೇ ಜಾತಿ, ಧರ್ಮ ಹಾಗೂ ಅಂತಸ್ತು ಅಡ್ಡ ಬರುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎನ್ನುವಂತೆ ಆರ್​​ಎಸ್​ಎಸ್​​ ಕಾರ್ಯಕರ್ತರೊಬ್ಬರು ಸ್ವತಃ ಚಿಂತಾಮಣಿಯ ಬೀದಿಯಲ್ಲಿ ಕುಳಿತು ಪಾದರಕ್ಷೆ ಅಂಗಡಿ ನೆಡೆಸುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನೀಲೇಶ್ ಪ್ರಹ್ಲಾದ್ ನಿರ್ವಾಣೆ ಪುಣೆ ನಿವಾಸಿಯಾಗಿದ್ದಾರೆ. ಇವರು ಆರೆಸ್ಸೆಸ್​​ ಕಾರ್ಯಕರ್ತರಾಗಿದ್ದಾರೆ. ಚಿಂತಾಮಣಿಯಲ್ಲಿ ಪಾದರಕ್ಷೆ ಅಂಗಡಿ ನೆಡೆಸುತ್ತಾ ಸೇವೆ ಮಾಡುತ್ತಿದ್ದಾರೆ.

ಪ್ರತಿವರ್ಷ ಆಷಾಢ ಏಕಾದಶಿ ಸಂದರ್ಭದಲ್ಲಿ ಪಂಡರಾಪುರದತ್ತ ಸಾಗುವ ವಾರ್ಕರಿ ಯಾತ್ರೆಯ ಮಾರ್ಗದ ಪಕ್ಕದಲ್ಲಿ ನೀಲೇಶ್ ಪ್ರಹ್ಲಾದ್ ನಿರ್ವಾಣೆ ಕುಳಿತು ಸೇವೆ ಸಲ್ಲಿಸುತ್ತಾರೆ. ಯಾತ್ರೆಯಲ್ಲಿ ಲಕ್ಷಾಂತರ ಜನ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ನೀಲೇಶ್ ಯಾತ್ರಿಗಳ ಹರಿದ ಚಪ್ಪಲಿ, ಬೂಟುಗಳನ್ನು ಉಚಿತವಾಗಿ ಹೊಲಿದು ಕೊಡುತ್ತಾರೆ. ಈ ಕುರಿತಾಗಿ ಸೊಶೀಲ್​​​ ಮೀಡಿಯಾ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಅದೇನೇ ಇದ್ದರೂ, ಇವರ ಸೇವೆಗೆ ಸಾಟಿಯಿಲ್ಲ ಎಂದು ನೀಲೇಶ್ ಪ್ರಹ್ಲಾದ್ ನಿರ್ವಾಣೆ ಅವರ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.