ನ್ಯೂಸ್

ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದವರಿಗೆ ರಾಷ್ಟ್ರೀಯ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಭಾರತೀಯ ಪತ್ರಿಕಾ ಮಂಡಳಿ (ಪ್ರೆಸ್​​ ಕೌನ್ಸಿಲ್​​ ಆಫ್​ ಇಂಡಿಯಾ) ಮುದ್ರಣ ಪತ್ರಿಕೋದ್ಯಮದಲ್ಲಿ ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ ಪತ್ರಕರ್ತರನ್ನು ಗೌರವಿಸಲು ರಾಷ್ಟ್ರೀಯ ಪ್ರಶಸ್ತಿ ನೀಡುತ್ತಿದೆ.

ಪತ್ರಕರ್ತರು/ಫ್ರೀಲ್ಯಾನ್ಸರ್​/ಫೋಟೋ ಜರ್ನಲಿಸ್ಟ್‌ಗಳು ಭಾಗವಹಿಸಬಹುದಾಗಿದೆ. ಅರ್ಜಿ ಸಲ್ಲಿಸಲು 2023 ಆಗಸ್ಟ್​​ 18 ಕೊನೆ ದಿನವಾಗಿದೆ. ಸಾಧಕರಿಗೆ  ನಗದು ಬಹುಮಾನ  ನೀಡಲಾಗುತ್ತದೆ.

ಸಂಘರ್ಷ ಕುರಿತ ವರದಿಗಾರಿಕೆ 1,00,000 ರೂ.

ಲಿಂಗ-ಸೂಕ್ಷ್ಮ ವರದಿಗಾರಿಕೆ 1,00,000 ರೂ.

ಆರ್ಥಿಕ ಪತ್ರಿಕೋದ್ಯಮ 1,00,000 ರೂ.

ಕ್ರೀಡಾ ವರದಿಗಾರ /ಸ್ಪೋರ್ಟ್ಸ್​​​​​ ಫೋಟೋ ಫೀಚರ್​​ 1,00,000 ರೂ.

ಬೆಸ್ಟ್​​​ ನ್ಯೂಸ್​​ ಪೇಪರ್​ ಆರ್ಟ್​​​ : ಕಾರ್ಟೂನ್​, ವ್ಯಂಗ್ಯಚಿತ್ರ 1,00,000 ರೂ.

ಫೋಟೋ ಫೀಚರ್​​​​ 1,00,000 ರೂ.

ಸಿಂಗಲ್​ ನ್ಯೂಸ್​ ಫೀಚರ್​ 1,0000 ರೂ.

ಫೋಟೋ ಜರ್ನಲಿಸಂ

ಅಭಿವೃದ್ಧಿ ಪತ್ರಿಕೋದ್ಯಮ 1,00,000 ರೂ.

ರೂರಲ್​​ ಜರ್ನಲಿಸಂ 1,00,000 ರೂ.

ರಾಮ್ ಮೋಹನ್ ರಾಯ್ ಅವಾರ್ಡ್​​​ 2,00000 ರೂ.

ಪ್ರಶಸ್ತಿಯ ವಿಭಾಗಗಳು:

ಈ ಪ್ರಶಸ್ತಿಗೆ ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ www.presscouncil.nic.in ವೀಕ್ಷಿಸಬಹುದಾಗಿದೆ.  2023 18 ಆಗಸ್ಟ್ 5 ಗಂಟೆಗೆ ಒಳಗೆ ಅರ್ಜಿ ಸಲ್ಲಿಕೆ ಮಾಡಬೇಕು. ಅಥವಾ ಅದಕ್ಕೂ ಮೊದಲು ಮುಂಗಡವಾಗಿ ಅರ್ಜಿ ಸಲ್ಲಿಕೆ ಮಾಡುವವರು secy-pci@nic.in ನಲ್ಲಿ ಇಮೇಲ್ ಮಾಡಬಹುದು.

ಎಲ್ಲಾ ಅರ್ಜಿಗಳನ್ನು ಕಾರ್ಯದರ್ಶಿ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ಸೂಚನಾ ಭವನ, 8- ಸಿ.ಜಿ.ಓ. ಕಾಂಪ್ಲೆಕ್ಸ್, ಲೋಧಿ ರಸ್ತೆ, ನವದೆಹಲಿ-110003  ಇಲ್ಲಿಗೆ ಮುಚ್ಚಿದ ಲಕೋಟೆಯಲ್ಲಿ ಪ್ರಶಸ್ತಿ ನಾಮನಿರ್ದೇಶನವನ್ನು ಸಲ್ಲಿಸಬಹುದಾಗಿದೆ.