More

    ಗಗನಕ್ಕೇರಿದ ಟೊಮ್ಯಾಟೋ ಬೆಲೆ; ನಟ ಸುನೀಲ್ ಶೆಟ್ಟಿಗೂ ತಟ್ಟಿದ ಬೆಲೆ ಏರಿಕೆ ಬಿಸಿ…

    ಮುಂಬೈ: ಟೊಮ್ಯಾಟೋ ಬೆಲೆ ಗಗನಕ್ಕೇರುತ್ತಿರುವುದು ರಾಷ್ಟ್ರವ್ಯಾಪಿ ಆತಂಕಕ್ಕೆ ಕಾರಣವಾಗಿದೆ. ಅನಿಯಮಿತ ಹವಾಮಾನ ಮತ್ತು ಪೂರೈಕೆಯ ಕೊರತೆಯಿಂದಾಗಿ ಕಳೆದ ಕೆಲವು ವಾರಗಳಿಂದ ಟೊಮ್ಯಾಟೋ ಬೆಲೆ ಹೆಚ್ಚಳವಾಗುತ್ತಿದೆ. ಪ್ರತಿ ಕೆಜಿಗೆ 150 ರೂ.ಗಿಂತ ಹೆಚ್ಚಿದೆ.

    ಇದನ್ನೂ ಓದಿ: ಮಳೆಗಾಲದಲ್ಲಿ ಹೆಚ್ಚಾಗುತ್ತೆ ಜಿಗಣೆಗಳ ಭೀತಿ..!; ರಕ್ತ ಹೀರುವ ಇವುಗಳನ್ನು ಓಡಿಸಲು ಈ 5 ಸಲಹೆಗಳನ್ನು ಪಾಲಿಸಿ…

    ಟೊಮ್ಯಾಟೋ ಬೆಲೆಯು ಭಾರತೀಯ ಅಡುಗೆಮನೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ ಮತ್ತು ಗ್ರಾಹಕರ ಜೇಬಿನನ್ನು ಸುಡುತ್ತಿದೆ. ಬೆಲೆ ಏರಿಕೆ ಸಮಸ್ಯೆ ಕೆಳ ಮತ್ತು ಮಧ್ಯಮ ವರ್ಗದ ಕುಟುಂಬಗಳಲ್ಲಿ, ಜನ ಸಾಮಾನ್ಯರಿಗೆ ಮಾತ್ರವಲ್ಲದೆ ಸೆಲೆಬ್ರೆಟಿಗಳಿಗೂ ತಟ್ಟಿದೆ. ಬಾಲಿವುಡ್ ಸೆಲೆಬ್ರಿಟಿಗಳು ಅದೇ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ ಎಂದು ನೀವು ಎಂದಾದರೂ ನಂಬುತ್ತೀರಾ? ಈ ಕುರಿತಾಗಿ ಸ್ಟಾರ್​ ನಟರೊಬ್ಬರು ಮಾತನಾಡಿದ್ದಾರೆ.

    ಇದನ್ನೂ ಓದಿ: Alternative To Tomatoes; ಟೊಮ್ಯಾಟೋ ಬದಲಿಗೆ ಅಡುಗೆಗೆ ಈ 5 ಪದಾರ್ಥ ಬಳಸಿ…

    ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಮೇಲೆ ಬೆಲೆ ಏರಿಕೆ ಪರಿಣಾಮ ಬೀರಿದೆ. ಇತ್ತೀಚೆಗೆ ಖಾಸಗಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ನಟ ಹೇಳಿ ಕೊಂಡಿದ್ದಾರೆ. ತೀವ್ರ ಬೆಲೆ ಏರಿಕೆಯಿಂದಾಗಿ ಟೊಮ್ಯಾಟೋ ಸೇವನೆಯನ್ನೇ ಕಡಿಮೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

    ಇದನ್ನೂ ಓದಿ: Alternative To Tomatoes; ಟೊಮ್ಯಾಟೋ ಬದಲಿಗೆ ಅಡುಗೆಗೆ ಈ 5 ಪದಾರ್ಥ ಬಳಸಿ…

    “ನನ್ನ ಹೆಂಡತಿ ಒಂದು ಅಥವಾ ಎರಡು ದಿನಕ್ಕೆ ಮಾತ್ರ ತರಕಾರಿಗಳನ್ನು ಖರೀದಿಸುತ್ತಾಳೆ. ನಾವು ತಾಜಾ ಉತ್ಪನ್ನಗಳನ್ನು ತಿನ್ನುತ್ತೇವೆ. ಇತ್ತೀಚಿನ ದಿನಗಳಲ್ಲಿ ಟೊಮ್ಯಾಟೋ ಬೆಲೆ ಗಗನಕ್ಕೇರುತ್ತಿದೆ. ಇದು ನಮ್ಮ ಅಡುಗೆಮನೆಯ ಮೇಲೆ ಪರಿಣಾಮ ಬೀರಿದೆ. ಈ ದಿನಗಳಲ್ಲಿ ನಾನು ಟೊಮ್ಯಾಟೋ ತಿನ್ನುವುದನ್ನೇ ಕಡಿಮೆ ಮಾಡಿದ್ದೇನೆ” ಎಂದಿದ್ದಾರೆ.

    ಇದನ್ನೂ ಓದಿ: ಗೋವಾ ಬೀಚ್‌ನಲ್ಲಿ ಕನ್ನಡತಿ ಖ್ಯಾತಿಯ ಸಾರಾ ಅಣ್ಣಯ್ಯ; ನಿಜ ಜೀವನದಲ್ಲಿ ಹೀಗಿದ್ದಾರಾ ಎಂದ ಫ್ಯಾನ್ಸ್​​​!

    “ನಾನು ಸೂಪರ್‌ಸ್ಟಾರ್ ಆಗಿರುವುದರಿಂದ ಈ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಜನರು ಭಾವಿಸಬಹುದು. ಆದರೆ ನಾವು ಅಂತಹ ಸಮಸ್ಯೆಗಳನ್ನು ಎದುರಿಸಬೇಕಾಗಿದೆ” ಎಂದು ಹೇಳಿದ್ದಾರೆ.

    ಅಂದಹಾಗೆ, ಏರುತ್ತಿರುವ ಟೊಮ್ಯಾಟೋ ಬೆಲೆ ಸುನೀಲ್ ಶೆಟ್ಟಿ ಅವರ ಮೇಲೆ ಮಾತ್ರ ಪರಿಣಾಮ ಬೀರಿಲ್ಲ. ಕಳೆದ ವಾರ, ಬರ್ಗರ್ ಮೆಕ್‌ಡೊನಾಲ್ಡ್ ಕೂಡ ಬೆಲೆ ಏರಿಕೆಯಿಂದಾಗಿ ಟೊಮ್ಯಾಟೋ ಇಲ್ಲದೆ ಉತ್ಪನ್ನಗಳನ್ನು ನೀಡುತ್ತಿದ್ದೇವೆ ಎಂದು ತಿಳಿಸಿತ್ತು.

    ದೇವಸ್ಥಾನದ ಪವಿತ್ರ ಕೊಳದಲ್ಲಿ ಮಾನವ ತಲೆಬುರುಡೆ ಪತ್ತೆ; 45 ದಿನಗಳವರೆಗೆ ಈ ನೀರು ಬಳಸುವಂತಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts