ನ್ಯೂಸ್

ಸಿನಿಮಾ ನಿರ್ದೇಶಕ-ನಿರ್ಮಾಪಕರಿಗೆ ಸಿಹಿಸುದ್ದಿ; ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅರ್ಜಿ ಆಹ್ವಾನ

ಬೆಂಗಳೂರು: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-2021ಕ್ಕಾಗಿ ಅರ್ಹರಿಂದ ಅರ್ಜಿಯನ್ನು ಆಹ್ವಾನಿಸಿದೆ. ಚಿತ್ರ ನಿರ್ದೇಶಕರು-ನಿರ್ಮಾಪಕರು ಸೇರಿದಂತೆ ಸಿನಿಮಾಸಕ್ತರು ಈ ಕುರಿತು ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು.

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಾಗಿ ಆನ್​ಲೈನ್​ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು, ಹಾಗೆ ಸಲ್ಲಿಸಿದ ಆನ್​ಲೈನ್ ನೋಂದಣಿಯ ಮುದ್ರಿತ ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಿತಿಗೆ ಅಂಚೆ ಮೂಲಕ ರವಾನಿಸಬೇಕು.

ಆನ್​ಲೈನ್​ ನೋಂದಣಿಗೆ ಮೇ 2ರ ಸಂಜೆ 6 ಗಂಟೆಯ ಗಡುವು ವಿಧಿಸಲಾಗಿದ್ದು, ಅಂಚೆ ಮೂಲಕ ಕಳಿಸುವ ಪ್ರತಿಯನ್ನು ಮೇ 10 ಕೊನೆಯ ದಿನ. ಎರಡೂ ಕಡೆಯ ನೋಂದಣಿ ಒಂದೇ ಹೆಸರಲ್ಲಿ ಆಗಿರಬೇಕು ಎಂದೂ ಇಲಾಖೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ: http://www.mib.gov.in ವೀಕ್ಷಿಸಬಹುದು.

ಆನ್​ಲೈನ್ ನೋಂದಣಿಗೆ ಈ ಲಿಂಕ್ ಕ್ಲಿಕ್ ಮಾಡಿ: http://nfaaward.businesstowork.com/