ನ್ಯೂಸ್

ಪಾಕಿಸ್ತಾನದ ಹಂಗಾಮಿ ಪ್ರಧಾನಿ ಆಗಿ ಅನ್ವರ್​ ಉಲ್ ಹಕ್ ಕಾಕರ್ ಆಯ್ಕೆ

ಕರಾಚಿ: ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಬಲೂಚಿಸ್ತಾನ್ ಅವಾಮಿ ಪಕ್ಷದ ಪಾಕಿಸ್ತಾನಿ ಸೆನೆಟರ್ ಅನ್ವರ್ ಉಲ್ ಹಕ್ ಕಾಕರ್​ ಅವರನ್ನು ಆಯ್ಕೆ ಮಾಡಲಾಗಿದೆ. ಇವರ ಆಯ್ಕೆಯನ್ನು ಪ್ರಧಾನಿ ಕಾರ್ಯಾಲಯವೇ ಘೋಷಿಸಿದ್ದಾಗಿ ಅಲ್ಲಿನ ಮಾಧ್ಯಮ ಪ್ರಕಟಿಸಿದೆ.

ಪಾಕ್​ ಸಂಸತ್ ವಿಸರ್ಜನೆ ಬಳಿಕ ಕಕ್ಕರ್ ಅವರ ಹೆಸರನ್ನು ಹಂಗಾಮಿ ಪ್ರಧಾನಿಯಾಗಿ ಶನಿವಾರ ಪ್ರಧಾನಿ ಕಾರ್ಯಾಲಯ ಪ್ರಕಟಿಸಿದೆ. ನಿರ್ಗಮಿತ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ನಿರ್ಗಮಿತ ವಿರೋಧ ಪಕ್ಷದ ನಾಯಕ ರಾಜಾ ರಿಯಾಜ್ ಇಂದು ನಡೆದ ಸಭೆಯಲ್ಲಿ ಕಾಕರ್ ಹೆಸರಿನ ಬಗ್ಗೆ ಒಮ್ಮತಕ್ಕೆ ಬಂದರು. ಅಧ್ಯಕ್ಷ ಆರಿಫ್ ಅಲ್ವಿ ಕಾಕರ್ ಅವರ ನೇಮಕವನ್ನು ಅನುಮೋದಿಸಿದರು.

ಇದನ್ನೂ ಓದಿ: ಪ್ರಯಾಣದಲ್ಲಿದ್ದ ತಮಿಳುನಾಡು ಸಚಿವರಿಗೆ ಹಠಾತ್ ಎದೆನೋವು; ನಾರಾಯಣ ಹೆಲ್ತ್​ ಸಿಟಿಗೆ ಕರೆ ತರುತ್ತಿರುವ ಬೆಂಬಲಿಗರು

ಪ್ರಧಾನಿ ಶೆಹಬಾಜ್ ಷರೀಫ್ ಅಧಿಕಾರಾವಧಿ ಆಗಸ್ಟ್ 9ರಂದು ಸಂಸತ್ತಿನ ವಿಸರ್ಜನೆಯೊಂದಿಗೆ ಮುಕ್ತಾಯಗೊಂಡಿತ್ತು. ಹಂಗಾಮಿ ಪ್ರಧಾನಿಯ ಆಯ್ಕೆಗೆ ಇಂದು ಕೊನೆಯ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ ಹಂಗಾಮಿ ಪ್ರಧಾನಿಯಾಗಿ ಅನ್ವರ್ ಉಲ್​ ಹಕ್​ ಕಾಕರ್​ ಆಯ್ಕೆ ಇಂದು ಅಧಿಕೃತವಾಗಿ ಘೋಷಣೆಗೊಂಡಿದೆ. -ಏಜೆನ್ಸೀಸ್