ನ್ಯೂಸ್

ಕೊಡಗಿನ ರೋಷನ್‌ ಜೊತೆ ಅನುಶ್ರೀ ಮದುವೆ ಮೂಹೂರ್ತ ಫಿಕ್ಸ್: ಆಮಂತ್ರಣ ಪತ್ರಿಕೆ ಹೀಗಿದೆ ನೋಡಿ - ANUSHREE WEDDING

ANUSHREE WEDDING: ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಮದುವೆಯ ಕುರಿತು ಇಷ್ಟು ದಿನ ಹಬ್ಬಿದ್ದ ಊಹಾಪೋಹಗಳಿಗೆ ಕಡೆಗೂ ತೆರೆ ಬಿದ್ದಿದ್ದು, ಅವರ ಮದುವೆಯ ಆಮಂತ್ರಣ ಪತ್ರಿಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪುಲ್​ ವೈರಲ್​ ಆಗಿದೆ.

ಕೊಡಗು ಮೂಲದ ವೃತ್ತಿಯಲ್ಲಿ ಕಂಪನಿ ಉದ್ಯಮಿ ಎನ್ನಲಾದ ರೋಷನ್​ ಜೊತೆ ಅನುಶ್ರೀ ಆಗಸ್ಟ್​ 28 ರ ಬೆಳಿಗ್ಗೆ 10.56 ಶುಭಮುಹೂರ್ತದಲ್ಲಿ ಬೆಂಗಳೂರಿನ ಕಬ್ಬಲಿಪುರ ತಿಟ್ಟಹಳ್ಳಿಯ ರೇಸಾರ್ಟ್​ನಲ್ಲಿ ಸಪ್ತಪದಿ ತುಳಿಯಲಿದ್ದಾರೆ.

ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ, ನೀವೆಲ್ಲ ಕೇಳುತ್ತಿದ್ದ ಪ್ರಶ್ನೆಗೆ ಈಗ ಉತ್ತರ. ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿ ಆಗುವ ಹೊಸ ಮನ್ವಂತರ ಎಂದು ಬರೆಯಲಾಗಿದೆ.

ಇತ್ತೀಚೆಗೆ ಅನುಶ್ರೀ ಯಾವುದೇ ಕಾರ್ಯಕ್ರಮದ ನಿರೂಪಣೆಗೆ ಹೋದರು ಅಲ್ಲಿದ್ದವರು ಕೇಳುತ್ತಿದ್ದ ಮೊದಲ ಮಾತು ಅನುಶ್ರೀ ಮದುವೆ ಯಾವಾಗ ಎಂದು. ಸದ್ಯ ಆ ಎಲ್ಲ ಚರ್ಚೆಗಳಿಗೆ ಪುಲ್​ ಸ್ಟಾಪ್​​ ಬಿದ್ದಿದ್ದು, ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಂತಯಾಗಿದೆ.