ನ್ಯೂಸ್

ಒಂದು ತಿಂಗಳ ನಂತರ ಅನುಷ್ಕಾಶರ್ಮಾ ಪೋಸ್ಟ್!

ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸೋಮವಾರ ಸಾಮಾಜಿಕ ಮಾಧ್ಯಮಕ್ಕೆ ಮರಳಿದ್ದಾರೆ. ಮಗ ಅಕಾಯ್ ಜನಿಸಿದ ಒಂದು ತಿಂಗಳ ನಂತರ ತನ್ನ ಇನ್​ಸ್ಟಾಗ್ರಾಮ್​ ಹ್ಯಾಂಡಲ್‌ನಲ್ಲಿ ತನ್ನ ಫೋಟೋ ಹಂಚಿಕೊಂಡಿದ್ದಾರೆ. ಅನುಷ್ಕಾ ಕೊನೆಯ ಪೋಸ್ಟ್ ತನ್ನ ಪುತ್ರನ ಜನನದ ಘೋಷಣೆನ್ನು ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯೊಂದಿಗೆ ಹಾಕಿದ್ದಾಗಿತ್ತು.

ಅನುಷ್ಕಾ ಸೋಮವಾರ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ತಮ್ಮ ಅಭಿಮಾನಿಗಳಿಗೆ ಹೋಳಿ ಶುಭಾಶಯಗಳನ್ನು ಕೋರಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಬಣ್ಣಗಳೊಂದಿಗೆ ಬರೆಯಲಾದ 'ಹ್ಯಾಪಿ ಹೋಳಿ' ಟ್ಯಾಗ್​ನೊಂದಿಗೆ ಫೋಟೋ ಹಾಕಲಾಗಿದೆ.

ಫೆಬ್ರುವರಿ 20 ರಂದು ಅನುಷ್ಕಾ ತನ್ನ ಎರಡನೇ ಮಗುವಿನ ಜನನವನ್ನು ಘೋಷಿಸಿದಾಗ ಅದೇ ಆಕೆಯ ಇನ್​ಸ್ಟಾಗ್ರಾಮ್​ನಲ್ಲಿ ಕೊನೆಯ ಪೋಸ್ಟ್ ಆಗಿತ್ತು. "ಸಮೃದ್ಧ, ಸಂತೋಷ ಮತ್ತು ಪ್ರೀತಿಯಿಂದ ನಮ್ಮ ಹೃದಯವು ತುಂಬಿದೆ. ಫೆಬ್ರವರಿ 15 ರಂದು ನಾವು ನಮ್ಮ ಅಕಾಯ್ ನನ್ನು ಈ ಜಗತ್ತಿಗೆ ಸ್ವಾಗತಿಸಿದೆವು. ಅವನು ವಾಮಿಕಾಳ ಚಿಕ್ಕ ಸಹೋದರ ಎಂದು ಎಲ್ಲರಿಗೂ ತಿಳಿಸಲು ಸಂತೋಷಪಡುತ್ತೇವೆ" ಎಂದು ಬರೆದುಕೊಂಡಿದ್ದರು.

"ನಮ್ಮ ಜೀವನದ ಈ ಸುಂದರ ಸಮಯದಲ್ಲಿ ನಾವು ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಬಯಸುತ್ತೇವೆ. ಈ ಸಮಯದಲ್ಲಿ ನಮ್ಮ ಪರ್ಸನಲ್​ ವಿಷಯವನ್ನು ದಯೆ ಮಾಡಿ ಗೌರವಿಸುವಂತೆ ನಾವು ವಿನಂತಿಸುತ್ತೇವೆ" ಎಂದು ಅನುಷ್ಕಾ ಟಿಪ್ಪಣಿ ಸೇರಿಸಿದ್ದಾರೆ.