ನ್ಯೂಸ್

ಅಮಿತಾಭ್‌ ನಂತರ ಬಂದಿದೆ ಅನುಪಮ್‌ ಖೇರ್‌ ಕುಟುಂಬದ ಕರೊನಾ ಸುದ್ದಿ!

ನವದೆಹಲಿ: ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಅವರಿಗೆ ಕರೊನಾ ಸೋಂಕು ದೃಢಪಟ್ಟಿರುವ ಬೆನ್ನಲ್ಲೇ ಇದೀಗ ಮತ್ತೋರ್ವ ಪ್ರಸಿದ್ಧ ನಟ ಅನುಪಮ್‌ ಖೇರ್‌ ಅವರ ಕುಟುಂಬದಿಂದಲೂ ಸೋಂಕಿನ ಸುದ್ದಿ ಬಂದಿದೆ.

ಅನುಪಮ್ ಖೇರ್ ಅವರ ತಾಯಿ ದುಲಾರಿ ಅವರಿಗೆ ಕರೊನಾ ಸೋಂಕು ತಗುಲಿದೆ. ಈ ಕುರಿತು ನಟ ಅನುಪಮ್‌ ಖೇರ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ನನ್ನ ತಾಯಿಗೆ ಕರೊನಾ ಸೋಂಕು ದೃಢಪಟ್ಟಿದ್ದು ಅವರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ತಮಗೆ ಸೋಂಕು ತಗುಲಿಲ್ಲ ಎಂಬ ಬಗ್ಗೆಯೂ ಅನುಪಮ್‌ ಖೇರ್‌ ಸ್ಪಷ್ಟಪಡಿಸಿದ್ದಾರೆ. ಆದರೆ ತಮ್ಮ ಸಹೋದರ ರಾಜು ಖೇರ್, ಅತ್ತಿಗೆ ಮತ್ತು ಸೋದರ ಸೊಸೆಗೆ ಸೋಂಕು ತಗುಲಿರುವುದಾಗಿ ಅವರು ಹೇಳಿದ್ದಾರೆ.