More

    ಹೋಮ್‌ ಕ್ವಾರಂಟೈನ್‌ ಬದಲು ಅಮಿತಾಭ್‌ ಆಸ್ಪತ್ರೆಯನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ?

    ನವದೆಹಲಿ: ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟ ಬೆನ್ನಲ್ಲೇ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಈ ಬಗ್ಗೆ ಖುದ್ದಾಗಿ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಮಾಹಿತಿ ನೀಡಿದ್ದು, ತಮಗೆ ಕರೊನಾ ಪಾಸಿಟಿವ್‌ ಇರುವುದಾಗಿ ಹೇಳಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ ಮೆಗಾಸ್ಟಾರ್‌ನ ಸ್ಥಿತಿ ಸ್ಥಿರವಾಗಿದೆ ಮತ್ತು ಕರೊನಾ ಲಕ್ಷಣಗಳು ಸ್ವಲ್ಪ ಮಟ್ಟಿಗೆ ಇವೆ.

    ಇಂಥ ಪರಿಸ್ಥಿತಿಯಲ್ಲೂ ಅವರು ತಮ್ಮ ಸಂಪರ್ಕಕ್ಕೆ ಬಂದವರಿಗೆ ಸಂದೇಶ ನೀಡಿದ್ದು, ಕಳೆದ 10 ದಿನಗಳಲ್ಲಿ ತಮ್ಮ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಕಡ್ಡಾಯವಾಗಿ ಕರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ. ಅಮಿತಾಭ್‌ ಸದ್ಯ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅಷ್ಟಕ್ಕೂ ಅಮಿತಾಭ್‌ ಬಚ್ಚನ್‌ ಅವರಿಗೆ ಹೋಮ್‌ ಕ್ವಾರಂಟೈನ್‌ಗೆ ಅವಕಾಶ ಇತ್ತು. ಅವರು ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುವ ಸಾಧ್ಯತೆ ಇತ್ತು. ಆದರೆ ಅವರು ಆಸ್ಪತ್ರೆಗೆ ಹೋಗಿದ್ದು ಏಕೆ ಎಂಬ ಬಗ್ಗೆ ಅವರ ಅಭಿಮಾನಿಗಳಿಗೆ ಪ್ರಶ್ನೆ ಕಾಡುತ್ತಿದೆ.

    ಇದನ್ನೂ ಓದಿ: ಹಿರಿಯ ನಟ ಅಮಿತಾಭ್ ಬಚ್ಚನ್​ಗೆ ಕೊವಿಡ್​-19 ಸೋಂಕು; ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು

    ಇದಕ್ಕೆ ಉತ್ತರ ಏನೆಂದರೆ, ಯಾವುದೇ ವ್ಯಕ್ತಿ ಹೆಚ್ಚು ರೀತಿಯ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂಥವರಿಗೆ ಆಸ್ಪತ್ರೆಯೇ ಹೆಚ್ಚು ಸೂಕ್ತ. ವಯಸ್ಸಾದವರು, ಮಧುಮೇಹ, ಅಧಿಕ ರಕ್ತದೊತ್ತಡ, ಆಸ್ತಮಾ, ಹೃದಯರಕ್ತನಾಳದ ಸಮಸ್ಯೆ, ಕ್ಯಾನ್ಸರ್ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಸೇರಿದಂತೆ ದೀರ್ಘಕಾಲದ ಆರೋಗ್ಯ ಪರಿಸ್ಥಿತಿಗಳಿಂದ ಬಳಲುತ್ತಿರುವವರು ಹೆಚ್ಚಿನ ಅಪಾಯವನ್ನು ಹೊಂದಿರುವ ಹಿನ್ನೆಲೆಯಲ್ಲಿ ಅಂಥವರಿಗೆ ಆಸ್ಪತ್ರೆಯೇ ಹೆಚ್ಚು ಸೂಕ್ತ.

    ನಟ ಅಮಿತಾಭ್‌ ಬಚ್ಚನ್‌ ಕೂಡ ಈ ಹಿಂದೆ ಕ್ಷಯ ಮತ್ತು ಹೆಪಟೈಟಿಸ್ ಬಿ. ಸಮಸ್ಯೆಯಿಂದ ಬಳಲುತ್ತಿದ್ದರು. ಅಷ್ಟೇ ಅಲ್ಲದೇ ಈ ಹಿಂದೆ ಹಲವಾರು ಬಾರಿ ಅವರಿಗೆ ಅನಾರೋಗ್ಯ ಸಮಸ್ಯೆ ಬಾಧಿಸಿತ್ತು. ಶೇಕಡಾ 25ರಷ್ಟು ಯಕೃತ್ತಿನ ಸಮಸ್ಯೆಯಿಂದಲೂ ಬಳಲಿ ಬದುಕಿಬಂದಿದ್ದಾರೆ. ಜತೆಗೆ ಅವರಿಗೆ 77 ವರ್ಷ ವಯಸ್ಸು. ಈ ಎಲ್ಲಾ ಹಿನ್ನೆಲೆಯಲ್ಲಿ ಅವರು ಮನೆಗಿಂತ ಆಸ್ಪತ್ರೆಯಲ್ಲಿಯೇ ಇರುವ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.

    ಜಪ್ಪಯ್ಯ ಎಂದ್ರೂ ಮಾಸ್ಕ್‌ ಧರಿಸಲು ಒಪ್ಪದ ಟ್ರಂಪ್‌ ಹೀಗೆ ಕಾಣಿಸಿಕೊಂಡದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts