ನ್ಯೂಸ್

ಕಲಬುರಗಿಯಲ್ಲಿ ಮತ್ತೊಂದು ಕರೊನಾ ಪ್ರಕರಣ; ಸೋಂಕು ತಗುಲಿ ಮೃತಪಟ್ಟ ವೃದ್ಧನ ಕುಟುಂಬದ ಇನ್ನೋರ್ವರಲ್ಲಿ ವೈರಸ್​

ಕಲಬುರಗಿ: ಜಿಲ್ಲೆಯಲ್ಲಿ ಇನ್ನೋರ್ವರಿಗೆ ಕರೊನಾ ವೈರಸ್​ ತಗುಲಿದ್ದು ದೃಢಪಟ್ಟಿದೆ.

ಕರೊನಾ ವೈರಸ್​ನಿಂದ ಮೃತಪಟ್ಟ ವೃದ್ಧನ ಕುಟುಂಬದ ನಾಲ್ವರನ್ನು ಪ್ರತ್ಯೇಕ ವಾರ್ಡ್​ನಲ್ಲಿ ಇಟ್ಟು ತಪಾಸಣೆ ಮಾಡಲಾಗಿತ್ತು. ಅದರಲ್ಲಿ ಮೂವರಿಗೆ ಕರೊನಾ ಇಲ್ಲದೆ ಇರುವುದು ಶನಿವಾರ ದೃಢಪಟ್ಟಿತ್ತು. ಆದರೆ ಇನ್ನೋರ್ವರ ವೈದ್ಯಕೀಯ ವರದಿ ಬಂದಿರಲಿಲ್ಲ.

ಈಗ ಆ ನಾಲ್ಕನೇಯವರ ವರದಿ ಕರೊನಾ ಪಾಸಿಟಿವ್​ ಬಂದಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್​ ಹೇಳಿದ್ದಾರೆ.