ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ ತಂಡ ತನ್ನ ಅಭಿಮಾನಿಗಳಿಗೆ ಸಿನಿಮಾದ ಮೊದಲ ಲಿರಿಕಲ್ ಸಾಂಗ್ ಬಿಡುಗಡೆಗೆ ಮಾಡುವ ಮೂಲಕ ಚಿತ್ರದ ಕ್ರೇಜ್ಅನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನೂ ಇದೇ ಸಂದರ್ಭದಲ್ಲಿ ಸಿನಿಮಾದ ಮತ್ತೊಂದು ಸಾಂಗ್ ಆದ 'ಒಂದೆ ಒಂದು ಸಲ' ಎಂಬ ಡ್ಯುಯೆಟ್ ಹಾಡನ್ನು ಇಂದು (ಅ.10) ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ಹರಿಯಾಣದಲ್ಲಿ ಐಪಿಎಸ್ ಅಧಿಕಾರಿ ವೈ ಪುರಣ್ ಕುಮಾರ್ ಆತ್ಮಹತ್ಯೆ ಪ್ರಕರಣ: ಚಂಡೀಗಢ ಪೊಲೀಸರಿಂದ ಎಸ್ಐಟಿ ರಚನೆ| Haryana
ಈ ಸಾಂಗ್ಅನ್ನು ಪ್ರಮೋದ್ ಮರವಂತೆ ಬರೆದಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಇದರಲ್ಲಿ ನಟಿ ರಚನಾ ರೈ ಹಾಗೂ ದರ್ಶನ್ ರೊಮ್ಯಾಂಟಿಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಟ ದರ್ಶನ್ ಮತ್ತು ನಿರ್ದೇಶಕ ಪ್ರಕಾಶ್ ವೀರ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ “ಡೆವಿಲ್’ ಚಿತ್ರದ ಬಗ್ಗೆ ಪ್ರಾರಂಭದಿಂದಲೂ ನಿರೀಕ್ಷೆ ಹೆಚ್ಚಿದೆ. “ಕಾಟೇರ’ದಲ್ಲಿ ಹಳ್ಳಿ ರಾ ಲುಕ್ನಲ್ಲಿ ಕಾಣಿಸಿಕೊಂಡಿದ್ದ ದರ್ಶನ್, “ಡೆವಿಲ್’ನಲ್ಲಿ ಸ್ಟೈಲಿಶ್ ಆಗಿ ಮಿಂಚಲಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್ ಮತ್ತು ಸಾಂಗ್ ವೈರಲ್ ಆಗಿವೆ. ಡೆವಿಲ್ ಸಿನಿಮಾವು ರಾಜ್ಯದಾದ್ಯಂತ ಡಿಸೆಂಬರ್ 12ರಂದು ಬೆಳ್ಳಿ ತೆರೆಗೆ ಬರಲಿದೆ.
ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ ನಟಿ ರಚನಾ, “ನಾನು “ಡೆವಿಲ್’ಗೆ ಆಡಿಷನ್ ಮೂಲಕ ಆಯ್ಕೆಯಾದೆ. ದರ್ಶನ್ ಸರ್ ಸಿನಿಮಾದಲ್ಲಿ ನಟಿಸುತ್ತೇನೆ ಅಂತ ಕನಸಿನಲ್ಲೂ ಅಂದುಕೊಂಡಿರಲಿಲ್ಲ. “ಡೆವಿಲ್’ ಚಿತ್ರ ಒಪ್ಪಿಕೊಂಡಾಗಿನಿಂದ ನನಗೆ ಪ್ರತಿದಿನವೂ ಸ್ಪೆಷಲ್. ದರ್ಶನ್ ಸರ್ ಜತೆ ತೆರೆಹಂಚಿಕೊಳ್ಳುತ್ತಿರುವದೇ ದೊಡ್ಡ ವಿಷಯ. ಆದರೆ, ಒಬ್ಬ ಸೂಪರ್ಸ್ಟಾರ್ ಜತೆ ಕೆಲಸ ಮಾಡುತ್ತಿರುವಂತೆ ನನಗೆ ಒಮ್ಮೆಯೂ ಫೀಲ್ ಆಗಿಲ್ಲ. ನಟಿಸುವಾಗ ತಿದ್ದಿ ಹೇಳುತ್ತಿದ್ದರು, ನಿರ್ದೇಶಕ ಪ್ರಕಾಶ್ ಸರ್ ಮತ್ತು ದರ್ಶನ್ ಪ್ರತಿ ಹಂತದಲ್ಲೂ ಬೆಂಬಲಿಸಿದ್ದಾರೆ. ಅವರಿಗೆ ಥ್ಯಾಂಕ್ಸ್’ ಎಂದು ರಚನಾ ಹೇಳಿದ್ದಾರೆ.
(ಏಜೆನ್ಸೀಸ್)