ನ್ಯೂಸ್

ಭಯೋತ್ಪಾದಕರ ಮತ್ತೊಂದು ಕಾರ್ ಬಾಂಬ್ ದಾಳಿ ಸಂಚು ಬಯಲು

kumarvrl

ನವದೆಹಲಿ: ಜಮ್ಮುಕಾಶ್ಮೀರದಲ್ಲಿ ಯೋಧರ ಮೇಲೆ ಮತ್ತೊಂದು ಸುಧಾರಿತ ಸ್ಫೋಟಕ ಸಾಧನ ಹೊಂದಿದ ಕಾರ್ ದಾಳಿಗೆ ಪಾಕ್‌ನ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ಸಂಚು ರೂಪಿಸಿರುವುದು ಬಯಲಿಗೆ ಬಂದಿದೆ.

ಭಾರಿ ಪ್ರಮಾಣದ ಸುಧಾರಿತ ಸ್ಫೋಟಕ ಸಾಧನ ತುಂಬಿಸಿಟ್ಟಿದ್ದ ಕಾರೊಂದನ್ನು ಇತ್ತೀಚೆಗಷ್ಟೆ ಭದ್ರತಾ ಪಡೆಗಳು ಪತ್ತೆ ಮಾಡಿ, ಸುರಕ್ಷಿತವಾಗಿ ಸ್ಫೋಟಿಸುವಲ್ಲಿ ಯಶಸ್ವಿಯಾಗಿದ್ದವು. ಅದರ ಬೆನ್ನಲ್ಲೇ ಇನ್ನೊಂದು ಇಂಥಹದ್ದೇ ಪ್ರಯತ್ನ ನಡೆದಿದೆ. ಸಂಭಾವ್ಯ ದಾಳಿ ತಪ್ಪಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಬುಧವಾರ ಬೆಳಗ್ಗೆ ಭದ್ರತಾ ಪಡೆಗಳು ಹೊಡೆದುರುಳಿಸಿದ ಜೈಷ್ ಕಮಾಂಡರ್ ಅಬ್ದುಲ್ ರೆಹಮಾನ್ ಅಲಿಯಾಸ್ ೌಜಿ ಭಾಯ್ ಪುಲ್ವಾಮಾ ಆತ್ಮಾಹುತಿ ಬಾಂಬ್ ದಾಳಿ ಹಾಗೂ ಐಇಡಿ ಸಹಿತ ಮೇ 28ರಂದು ಪತ್ತೆಯಾದ ಕಾರಿನ ತಯಾರಿಕೆಯಲ್ಲಿ ಕೈವಾಡ ಹೊಂದಿದ್ದ ಎನ್ನಲಾಗಿತ್ತು.

ಅಲ್ಲದೆ ಆತ ಇಂಥದ್ದೇ ಇನ್ನೆರಡು ಕಾರುಗಳನ್ನು ಸ್ಫೋಟಕಗಳನ್ನು ತುಂಬಿಸಿ ಕಣಿವೆಯಲ್ಲಿ ಬಚ್ಚಿಟ್ಟಿರುವ ಬಗ್ಗೆ ಭದ್ರತಾ ಪಡೆಗಳು ಶಂಕೆ ವ್ಯಕ್ತಪಡಿಸಿದ್ದವು. ಈಗ ಗುಪ್ತಚರ ಮೂಲಗಳು ಜೈಷ್ ಮತ್ತೆ ಸ್ಫೋಟಕ ತುಂಬಿದ ಕಾರಿನಿಂದ ದಾಳಿ ನಡೆಸುವ ಸಂಚನ್ನು ಬಹಿರಂಗಪಡಿಸಿವೆ.