ನ್ಯೂಸ್

20ಕ್ಕೆ ಚೋಳ ಟೀಸರ್; ‘ಯರ್ರಾಬಿರ್ರಿ’ ಅಂಜನ್ ನಟಿಸಿರುವ ಆ್ಯಕ್ಷನ್ ಎಂಟರ್‌ಟೇನರ್

ಬೆಂಗಳೂರು:‘ಯರ್ರಾಬಿರ್ರಿ’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಉತ್ತರ ಕರ್ನಾಟಕದ ಪ್ರತಿಭೆ ಅಂಜನ್ ನಟಿಸುತ್ತಿರುವ ಎರಡನೇ ಚಿತ್ರ ‘ಚೋಳ’. ‘ಪ್ರಯಾಣಿಕರ ಗಮನಕ್ಕೆ’, ‘ರಣಹೇಡಿ’ ಚಿತ್ರಗಳನ್ನು ನಿರ್ಮಿಸಿದ್ದ ಸುರೇಶ್ ಚೊಚ್ಚಲ ಬಾರಿಗೆ ನಿರ್ದೇಶಿಸುತ್ತಿರುವ ಸಿನಿಮಾ.

ಚಿತ್ರದ ಟೈಟಲ್ ಕೇಳಿದಾಕ್ಷಣ ಇದೊಂದು ಐತಿಹಾಸಿಕ ಸಿನಿಮಾ ಇರಬಹುದು ಅಂತನ್ನಿಸುತ್ತದೆ. ಆದರೆ, ‘ಚೋಳ’ ಪಕ್ಕಾ ಆಧುನಿಕ ಕಥನ, ಪ್ರೀತಿ, ರೌಡಿಸಂ ಸೇರಿ ಎಲ್ಲ ಕಮರ್ಷಿಯಲ್ ಅಂಶಗಳಿರುವ ಚಿತ್ರವೆನ್ನುತ್ತಾರೆ ನಿರ್ದೇಶಕ ಸುರೇಶ್. ಇದೇ ತಿಂಗಳ 20ರಂದು ‘ಚೋಳ’ ಟೀಸರ್ ರಿಲೀಸ್ ಆಗಲಿದೆ. ಅಂಜನ್‌ಗೆ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ದಿಶಾ ಪಾಂಡೆ, ಪ್ರತಿಭಾ ನಟಿಸುತ್ತಿದ್ದಾರೆ. ಜತೆಗೆ ದಿನೇಶ್ ಮಂಗಳೂರು, ರಾಜಬಲವಾಡಿ ವಿಲನ್‌ಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಮನಮೋಹನ್ ರಾಯ್, ಜಗಪ್ಪ, ಮಿಂಚು, ವರ್ಧನ್ ತೀರ್ಥಹಳ್ಳಿ ತಾರಾಗಣದಲ್ಲಿದ್ದಾರೆ.

ಚಿತ್ರಕ್ಕೆ ಸಂದೀಪ್ ಹೊನ್ನಾಳ್ಳಿ ಛಾಯಾಗ್ರಹಣ, ಶಿವಶಂಕರ್ ಸಂಕಲನವಿರಲಿದೆ. ಸದ್ಯ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ.