ನ್ಯೂಸ್

ಆ ನಟನನ್ನು ಹುಚ್ಚನಂತೆ ಪ್ರೀತಿಸಿ, ಬ್ರೇಕಪ್‌ನಿಂದ ಹೊರಬರಲು ಸಾಧ್ಯವಾಗದೆ...ಒದ್ದಾಡಿದ್ದಳು' ವೀರ ಕನ್ನಡಿಗ' ನಟಿ

ಮುಂಬೈ: ಪುನೀತ್ ರಾಜ್‍ಕುಮಾರ್ ವೀರ ಕನ್ನಡಿಗ, ಶಿವರಾಜ್‌ಕುಮಾರ್ ಜೊತೆಗೆ ಗಂಡುಗಲಿ ಕುಮಾರರಾಮ, ಹುಡುಗ ಹುಡುಗಿ ಸಿನಿಮಾಗಳಲ್ಲಿ ನಟಿಸಿರುವ ನಟಿ ಅನಿತಾ ಹಸ್ಸನಂದನಿ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಅವರು ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ.

ತೆಲುಗಿನ ಹೊರತಾಗಿ, ಅನಿತಾ ತಮಿಳು, ಹಿಂದಿ ಮತ್ತು ಬಹಾಸಾ ಚಿತ್ರಗಳಲ್ಲಿ ನಟಿಸಿದ್ದಾರೆ, ನಂತರ ಅವರು ಬಾಲಿವುಡ್‌ಗೆ ಶಿಫ್ಟ್ ಆಗಿದ್ದಾರೆ. ವರ್ಷಗಳಿಂದ ಅಲ್ಲಿ ಧಾರಾವಾಹಿಗಳನ್ನು ಮಾಡುತ್ತಿದ್ದ ಅನಿತಾ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಅವರು ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ.

ಅನಿತಾ, ಈಜಾಬ್ ಕಾವ್ಯಾಂಜಲಿ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು. ಹೀಗಿರುವಾಗಲೇ ಇಬ್ಬರ ನಡುವೆ ಏರ್ಪಟ್ಟ ಪರಿಚಯ ಸ್ವಲ್ಪಮಟ್ಟಿಗೆ ಪ್ರೀತಿಯಾಗಿ ಮಾರ್ಪಟ್ಟಿತ್ತು. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ 2007ರಲ್ಲಿ ಬೇರ್ಪಟ್ಟಿತ್ತು. ಇದಾದ ಬಳಿಕ 2013ರಲ್ಲಿ ರೋಹಿತ್ ರೆಡ್ಡಿ ಅವರನ್ನು ವಿವಾಹವಾದರು. 2021ರಲ್ಲಿ ಅವರಿಗೆ ಆರವ್ ಎಂಬ ಮಗು ಜನಿಸಿತ್ತು.

ತಾನು ಈ ಹಿಂದೆ ನಟ ಈಜಾಬ್ ಅವರನ್ನು ಪ್ರೀತಿಸುತ್ತಿದ್ದೆ, ಆದರೆ ನಮ್ಮ ಪ್ರೀತಿಯ ವಿಷಯ ತಿಳಿದಾಗ ಅವರ ತಾಯಿ ಸಂತೋಷವಾಗಿರಲಿಲ್ಲ. ಎರಡು ಧರ್ಮಗಳ ಪ್ರತ್ಯೇಕತೆಯು ತನ್ನ ಜೀವನದ ಬಗ್ಗೆ ಹೆಚ್ಚು ಚಿಂತೆ ಉಂಟು ಮಾಡಿತು. ಆದರೆ ನನ್ನ ಭಯ ಮತ್ತು ಅಭಿಪ್ರಾಯಗಳ ಬಗ್ಗೆ ಕಾಳಜಿ ವಹಿಸಲಿಲ್ಲ. ಆದರೆ ಕೆಲವು ವರ್ಷಗಳಿಂದ ಇದ್ದ ನಮ್ಮ ಸಂಬಂಧವು ಕಾರ್ಯರೂಪಕ್ಕೆ ಬರಲಿಲ್ಲ. ಸಂಬಂಧದಲ್ಲಿ ಅವರಿಗೆ ತಕ್ಕಂತೆ ನಮ್ಮನ್ನು ಬದಲಾಯಿಸಲು ಬಯಸಿದರೆ, ಅದು ಪ್ರೀತಿ ಎಂದು ಅನಿಸುವುದಿಲ್ಲ. ಅವನು ನನ್ನನ್ನು ಬದಲಾಯಿಸಲು ಬಯಸಿದ್ದನ್ನು ನನಗೆ ಅರ್ಥವಾಗಲಿಲ್ಲ ಎಂದಿದ್ದಾರೆ.

 ನಾನು ಅವನನ್ನು ಹುಚ್ಚನಂತೆ ಪ್ರೀತಿಸುತ್ತಿದ್ದೆ. ಆದರೆ ನಾನು ಯಾರನ್ನು ಬದಲಾಯಿಸಲು ಸಾಧ್ಯವಿಲ್ಲ.. ನಾನು ನಾನೇ ಆಗಬೇಕೆಂದು ಬಯಸಿದ್ದೆ.  ಆದ್ದರಿಂದ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ. ಬೇರೆಯಾದ ನೋವಿನಿಂದ ಹೊರಬರಲು ಒಂದು ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಂಡಿತು. ಮನೆಯಲ್ಲಿ ಇರಲಾರದೆ ಆತ್ಮೀಯ ಗೆಳೆಯನ ಮನೆಗೆ ಹೋದೆ ಎಂದಿದ್ದಾರೆ

   ಯಾರಿಗಾಗಿಯೂ ಬದಲಾಗಲು ಬಯಸುವುದಿಲ್ಲ. ನಾವಿರುವಂತೆ ನಮ್ಮನ್ನು ಒಪ್ಪಿಕೊಳ್ಳಬೇಕು. ನಿಮ್ಮ ಸಂಗಾತಿಯ ಫೋನ್ ಮೇಲೆಯೂ ನಿಗಾ ಇರಿಸಿ. ಅವರು ಫೋನ್ ಕೊಡಲು ಹೆದರುತ್ತಾರೆ ಎಂದರೆ ಏನೋ ತಪ್ಪಾಗಿದೆ.. ನಿಮ್ಮ ಮನೆಯವರಿಂದ ಮತ್ತು ಸ್ನೇಹಿತರಿಂದ ಅವನು ನಿಮ್ಮನ್ನು ದೂರ ಇಡುತ್ತಿದ್ದಾನೆ ಎಂದು ತಿಳಿದು ಅವನು ನಮಗೆ ಸರಿಯಾದ ವ್ಯಕ್ತಿ ಅಲ್ಲ ಎಂದಿದ್ದಾರೆ