ನ್ಯೂಸ್

Animal OTT Release Date: 'ಅನಿಮಲ್' ನಾಳೆ ಈ ಪ್ಲಾಟ್​​ಫಾರ್ಮ್​​​​ನಲ್ಲಿ ಬಿಡುಗಡೆಯಾಗಲಿದೆ

ಮುಂಬೈ: ರಣಬೀರ್ ಕಪೂರ್ ಅವರ ಸಂಪೂರ್ಣ ವಿಭಿನ್ನ ಅವತಾರವನ್ನು 'ಅನಿಮಲ್' ಚಿತ್ರದಲ್ಲಿ ನೋಡಬಹುದು. ಈ ಚಿತ್ರದಲ್ಲಿ ಅವರ ಲುಕ್ ಮತ್ತು ನಟನೆ ನೋಡಿ ಎಲ್ಲರೂ ಪ್ರಭಾವಿತರಾಗಿದ್ದರು. ಅನಿಮಲ್ ಚಿತ್ರದಲ್ಲಿ ರಣಬೀರ್ ಜೊತೆಗೆ ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್, ಅನಿಲ್ ಕಪೂರ್ ಮತ್ತು ತೃಪ್ತಿ ದಿಮ್ರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಹಣ ಗಳಿಸಿದ್ದು, ಇದೀಗ ಒಟಿಟಿಯಲ್ಲೂ ಸದ್ದು ಮಾಡಲು ಸಿದ್ಧವಾಗಿದೆ. ಇತ್ತೀಚೆಗೆ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಅನಿಮಲ್ ಬಿಡುಗಡೆಯ ಬಗ್ಗೆ ಗಲಾಟೆ ನಡೆದಿತ್ತು, ಅದರ ನಂತರ ಬಿಡುಗಡೆಯನ್ನು ನಿಷೇಧಿಸಲಾಯಿತು. ಆದರೆ ಈಗ ಚಿತ್ರ ಮತ್ತೆ ಬಿಡುಗಡೆಗೆ ಸಿದ್ಧವಾಗಿದೆ. 

ರಣಬೀರ್ ಕಪೂರ್ ಅವರ ಅನಿಮಲ್ ಜನವರಿ 26 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಈ ಬಗ್ಗೆ ನೆಟ್‌ಫ್ಲಿಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ಮಾಹಿತಿ ನೀಡಿದೆ.

ಪೋಸ್ಟ್ ಅನ್ನು ಹಂಚಿಕೊಂಡ ನೆಟ್‌ಫ್ಲಿಕ್ಸ್ 
ಅನಿಮಲ್‌ನ ಟೀಸರ್ ಅನ್ನು ಹಂಚಿಕೊಳ್ಳುವಾಗ, ನೆಟ್‌ಫ್ಲಿಕ್ಸ್ ಜನವರಿ 26 ರಂದು ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ ಎಂದು ಬರೆದುಕೊಂಡಿದೆ.

ಅಭಿಮಾನಿಗಳಿಗೆ ಸಂತಸ
ನೆಟ್‌ಫ್ಲಿಕ್ಸ್ ಪೋಸ್ಟ್ ನೋಡಿದ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಅವರು ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ಓರ್ವ ಅಭಿಮಾನಿ ಫೈರ್ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ. ಅದನ್ನು ಥಿಯೇಟರ್‌ನಲ್ಲಿ ನೋಡುವುದು ಹೆಚ್ಚು ಖುಷಿಯಾಗುತ್ತದೆ ಎಂದರೆ, ಮತ್ತೆ ಕೆಲವರು ಧನ್ಯವಾದಗಳು ನೆಟ್‌ಫ್ಲಿಕ್ಸ್ ಎಂದು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಸಿನಿ 1 ಸ್ಟುಡಿಯೋ ಟಿ-ಸೀರೀಸ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಆದರೆ ಈ ವಿಷಯ ನ್ಯಾಯಾಲಯದ ಹೊರಗೆ ಇತ್ಯರ್ಥವಾಯಿತು. ನಂತರ ಚಿತ್ರವು ಈಗ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿದೆ. ಅನಿಮಲ್ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಹೇಳುವುದಾದರೆ, ಇದು ವಿಶ್ವದಾದ್ಯಂತ 900 ಕೋಟಿ ರೂಪಾಯಿಗೂ ಹೆಚ್ಚು ವ್ಯವಹಾರ ಮಾಡಿದೆ.