ನ್ಯೂಸ್

ಕೊಲೆ ಮಾಡಿದವನನ್ನು ಪೊಲೀಸರ ಎದುರೇ ಹೊಡೆದು ಭೀಕರವಾಗಿ ಕೊಂದ ಗ್ರಾಮಸ್ಥರು

lakshmihegde

ಲಖನೌ: ಸ್ಥಳೀಯನೋರ್ವನನ್ನು ಹತ್ಯೆ ಗೈದ ಆರೋಪಿಯನ್ನು ಪೊಲೀಸರ ಎದುರೇ ಗ್ರಾಮಸ್ಥರೆಲ್ಲ ಸೇರಿ ಹೊಡೆದು ಕೊಂದ ಘಟನೆ ಉತ್ತರ ಪ್ರದೇಶದ ಕುಶಿನಗರದಲ್ಲಿ ನಡೆದಿದೆ.

ಕುಶಿನಗರದ ನಿವಾಸಿಯೋರ್ವ ತನ್ನ ಮನೆಯಲ್ಲಿ ಮಲಗಿದ್ದಾಗ ಸ್ಕೂಟರ್​​ನಲ್ಲಿ ಬಂದ ಈ ವ್ಯಕ್ತಿ, ಶೂಟ್​ ಮಾಡಿ ಆತನನ್ನು ಹತ್ಯೆಗೈದಿದ್ದ. ಅಷ್ಟರಲ್ಲಿ ಸ್ಥಳೀಯರು ಎಚ್ಚರಗೊಂಡಿದ್ದರು. ತನ್ನ ಮೇಲೆ ಹಲ್ಲೆಯಾಗುವುದನ್ನು ತಪ್ಪಿಸಿಕೊಳ್ಳಲು ಕೊಲೆ ಆರೋಪಿ ಟೆರೇಸ್​ ಮೇಲೆ ಹತ್ತಿದ. ಅಷ್ಟೇ ಅಲ್ಲ, ತನ್ನ ಕೈಯಲ್ಲಿದ್ದ ಗನ್​ನಿಂದ ಗಾಳಿಯಲ್ಲಿ ಗುಂಡು ಹಾರಿಸಿ, ಹೆದರಿಸಲು ಯತ್ನಿಸಿದ. ಇದನ್ನೂ ಓದಿ: ಬಿಜೆಪಿ ಪ್ರಚಾರಕ್ಕೆ ಸಂಸದ ಗೈರು ; ಮತದಾರರ ಪ್ರಶ್ನೆಗೆ ಮುಖಂಡರು ತಬ್ಬಿಬ್ಬು

ಯಾರೋ ಒಬ್ಬರು ಪೊಲೀಸರಿಗೆ ವಿಷಯವನ್ನೇನೋ ತಿಳಿಸಿದರು. ಆದರೆ ಅವರು ಬರುವಷ್ಟರಲ್ಲೇ ಉದ್ರಿಕ್ತ ಗುಂಪು ಆತನ ಮೇಲೆ ಹಲ್ಲೆ ಮಾಡಲು ಶುರು ಮಾಡಿತ್ತು. ಕೋಲು, ಕಬ್ಬಿಣದ ರಾಡ್​​ಗಳಿಂದ ಹೊಡೆದ ಪರಿಣಾಮ ಆತ ಎಚ್ಚರ ತಪ್ಪಿ ಬಿದ್ದ. ಪೊಲೀಸರು ಬಂದರೂ ಅವನನ್ನು ಕಾಪಾಡಲು ಸಾಧ್ಯವಾಗಲಿಲ್ಲ. ಪೊಲೀಸರ ಕಣ್ಣೆದುರೇ ಆತ ಮೃತಪಟ್ಟ.

ಈ ವ್ಯಕ್ತಿ ಗೋರಖ್​ಪುರದಿಂದ ಕುಶಿನಗರಕ್ಕೆ ಆಗಮಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಿಕ್ಕಾಪಟೆ ವೈರಲ್​ ಆಗಿದೆ. ಪೊಲೀಸರು ಸುಮ್ಮನೆ ಅಲ್ಲಿ ನಿಂತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.(ಏಜೆನ್ಸೀಸ್​)