ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024ರ ಪದಕದಾಟ ಇಂದು ಕೂಡ ಮುಂದುವರೆದಿದ್ದೇ ಆದರೂ ಇದೀಗ ಹೊಸ ವಿವಾದದಿಂದ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಯೊಂದಕ್ಕೆ ಕಾರಣವಾಗಿದೆ. ಇಂದು ನಡೆದ ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಇಟಾಲಿ ಮೂಲದ ಬಾಕ್ಸರ್ ಏಂಜಲೀನಾ ಕ್ಯಾರಿನಿ ತಮ್ಮ ಎದುರಾಳಿ ಅಲ್ಜೀರಿಯಾದ ಇಮಾನೆ ಖೆಲಿಫ್ ವಿರುದ್ಧದ ಕಾಳಗದಲ್ಲಿ 46 ಸೆಕೆಂಡ್ಗೆ ಮ್ಯಾಚ್ನಿಂದ ಹೊರಬಂದಿದ್ದಾರೆ. ಖೆಲಿಫೆ ಪುರುಷನಾಗಿದ್ದು, 2023ರಲ್ಲಿ ನಡೆಸಲಾದ ಲಿಂಗ ಅರ್ಹತಾ ಪರೀಕ್ಷೆಯಲ್ಲಿ ವಿಫಲಗೊಂಡಿದ್ದಾನೆ. ಆತನ ಎದುರು ಬಲವಂತವಾಗಿ ಆಡುವುದು ಸರಿಯಲ್ಲ ಎಂಬ ಕಾರಣಕ್ಕೆ ಕುಸ್ತಿಯನ್ನು ಅರ್ಧಕ್ಕೆ ಕೈಬಿಟ್ಟು, ಅಖಾಡದೊಳಗೆ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: ಕಾರ್ಗಿಲ್ ಯುದ್ಧವಲ್ಲ ಅಪರೇಷನ್ ವಿಜಯದ ಕಾರ್ಯಚರಣೆ ರಜತ ಸಂಭ್ರಮದಲ್ಲಿ ನಿವೃತ್ತ ಯೋಧ ಜೀವೇಂದ್ರ ಗಟ್ಟಿ ಅಭಿಮತ.
ಖಲಿಫೆ ವಿರುದ್ಧದ ಸೋಲನ್ನು ಸೋಲು ಎಂದು ಒಪ್ಪಿಕೊಳ್ಳಲು ನನ್ನಿಂದ ಅಸಾಧ್ಯ ಎಂದು ಕಣ್ಣೀರಿಟ್ಟ ಏಂಜೆಲಾ, ಲಿಂಗ ಅರ್ಹತಾ ಟೆಸ್ಟ್ ಪಾಸ್ ಆಗದವರನ್ನು ಮಹಿಳೆಯರ ಜತೆ ಏಕೆ ಆಡಲು ಬಿಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ.. ಲಿಂಗ ಪರೀಕ್ಷೆಯಲ್ಲಿ ವಿಫಲವಾದ ದಾಖಲೆ ಹೊಂದಿರುವ ಖೇಲಿಫ್ ಇದೀಗ ಕ್ರೀಡಾಪಟುಗಳ ಕೆಂಗಣ್ಣಿಗೆ ಗುರಿಯಾಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಸದ್ಯ ಈ ವಿಷಯಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಚರ್ಚೆ ಭುಗಿಲೆದ್ದಿದ್ದು, ಎಂಜೆಲಾ ಪರ ಮಹಿಳಾ ಕ್ರೀಡಾಪಟುಗಳು ಬ್ಯಾಟ್ ಬೀಸಿದ್ದಾರೆ. ಮಹಿಳೆಯರ ಮಧ್ಯೆ ಪುರುಷ ಏಕೆ? ಇದನ್ನು ತೀವ್ರ ಖಂಡಿಸುತ್ತೇವೆ. ಇದಕ್ಕೆಲ್ಲಾ ಅವಕಾಶ ಕೊಡಬಾರದು ಎಂಬ ಕೂಗುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.