ನ್ಯೂಸ್

Renu Desai: ಪವನ್‌ ಕಲ್ಯಾಣ್‌ ಮಾಜಿ ಪತ್ನಿ ಮತ್ತೆ ಲವ್​ನಲ್ಲಿ ಬಿದ್ದರೇ? ಪ್ರೇಮಕಥೆ ಪೋಸ್ಟ್‌ ವೈರಲ್​

ಹೈದರಾಬಾದ್​: ಆಂಧ್ರ ಡಿಸಿಎಂ ಪವನ್​ ಕಲ್ಯಾಣ್​ ಜತೆ ವಿಚ್ಛೇದನ ಪಡೆದುಕೊಂಡ ನಂತರ ರೇಣು ದೇಸಾಯಿ(Renu Desai) ಇಂಡಸ್ಟ್ರಿಯಿಂದ ದೂರವಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿದ್ದಾರೆ. ಅವರು ಆಗಾಗ ತಮ್ಮ ವೈಯಕ್ತಿಕ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ವಿಚ್ಛೇದನದ ವಿಚಾರವಾಗಿ ರೇಣು ದೇಸಾಯಿ ಮತ್ತು ಅವರ ಅಭಿಮಾನಿಗಳ ನಡುವೆ ಇತ್ತೀಚೆಗೆ ನಡೆದ ಕಾಮೆಂಟ್​ ವೈರಲ್​ ಆಗಿದೆ.

ಸಾಮಾಜಿಕ ಮಾಧ್ಯಮದಲ್ಲಿ 'ನೀವು ಪವನ್ ಕಲ್ಯಾಣ್​ ಅವರಿಗೆ ವಿಚ್ಛೇದನ ನೀಡಿ ದೊಡ್ಡ ತಪ್ಪು ಮಾಡಿದ್ದೀರಿ. ಪವನ್ ಅಣ್ಣ ಶ್ರೇಷ್ಠ ಹೃದಯವಂತ' ಎಂದು ನೆಟಿಜನ್ ಒಬ್ಬರು ಕಮೆಂಟ್ ಮಾಡಿದ್ದಾರೆ.

ಇದಕ್ಕೆ ರೇಣು ದೇಸಾಯಿ ಆಕ್ರೋಶ ವ್ಯಕ್ತಪಡಿಸಿದ್ದು, 'ನಾನು ಪವನ್‌ ಅವರನ್ನು ಬಿಟ್ಟಿಲ್ಲ, ಅವರೇ ನನ್ನನ್ನು ಬಿಟ್ಟು ಬೇರೊಬ್ಬರನ್ನು ವಿವಾಹವಾಗಿ ಸಂಸಾರ ನಡೆಸುತ್ತಿದ್ದಾರೆ' ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನು ಇದಕ್ಕೆ ಪೂರಕವಾಗಿ ರೇಣು ದೇಸಾಯಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಕಡಲತೀರದಲ್ಲಿ ಸೂರ್ಯಾಸ್ತವನ್ನು ಆಸ್ವಾದಿಸುತ್ತಿರುವ ವಿಡಿಯೋವನ್ನು ಟ್ಯಾಗ್ ಮಾಡಿ, 'ಸೂರ್ಯಾಸ್ತಮಾನಗಳೊಂದಿಗೆ ಮುಂದುವರಿಯುವ ನನ್ನ ಪ್ರೇಮಕಥೆ' ಎಂದು ಕ್ಯಾಪ್ಷನ್‌ ಕೊಟ್ಟು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಈ ಪೋಸ್ಟ್‌ಗೆ ನೆಟಿಜನ್‌ಗಳು ಪ್ರತಿಕ್ರಿಯಿಸುತ್ತಿದ್ದು, ರೇಣು ದೇಸಾಯಿ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಕಾಮೆಂಟ್ ಗಳ ಸುರಿಮಳೆಗರೆಯುತ್ತಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.