ಅಮರಾವತಿ: ಆಂಧ್ರದ ಸತ್ಯವೀಡು ಶಾಸಕ ಕೋನೇಟಿ ಆದಿಮುಳಂ ರಾಸಲೀಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಸಂತ್ರಸ್ತೆ ತನ್ನ ಮೇಲೆ ಶಾಸಕ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಎರಡು ಸಾವಿರ ರೂ.ಗೆ ಸಿನಿಮಾ ಟಿಕೆಟ್ ಮಾರುವ ನಟರು ದೇಶವನ್ನು ಉಳಿಸ್ತಾರಾ? ತಮಿಳುನಾಡು ಮಂತ್ರಿ ಅಚ್ಚರಿ ಪ್ರಶ್ನೆ!
ನಾನು ಮತ್ತು ಶಾಸಕರು ಒಂದೇ ಪಕ್ಷಕ್ಕೆ ಸೇರಿದ್ದರಿಂದ ಹಲವು ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಿದ್ದೆವು. ನಂತರ ಅವರು ನನ್ನ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಂಡರು. ಮೊಬೈಲ್‌ಗೆ ಹಲವು ಬಾರಿ ಕರೆ ಮಾಡಿ ತಿರುಪತಿಯ ಭೀಮಾ ಪ್ಯಾರಡೈಸ್ ಹೊಟೇಲ್ ಕೊಠಡಿ ಸಂಖ್ಯೆ 109ಕ್ಕೆ ಬರಲು ಹೇಳಿದರು. ಅಲ್ಲಿ ನನಗೆ ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಯಾರಿಗಾದರೂ ಹೇಳಿದರೆ ನನ್ನನ್ನು ಮತ್ತು ನನ್ನ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ನನ್ನ ಮೇಲೆ ಮೂರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ನಾವಿಬ್ಬರೂ ಏಕಾಂತದಲ್ಲಿರುವ ದೃಶ್ಯ ಪೆನ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದು, ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದರೆ ಎಲ್ಲರಿಗೂ ತಿಳಿಯುವಂತೆ ಮಾಡಲಾಗುವುದು ಎಂದು ಹೆದರಿಸಿ ಹಲವು ಬಾರಿ ದೈಹಿಕ ಸಂಪರ್ಕ ಸಾಧಿಸಿದ್ದಾರೆ. ತನಗೆ ಶಾಸಕರು ನೂರಾರು ಬಾರಿ ಕರೆ ಮಾಡಿದ್ದಾರೆ. ರಾತ್ರಿ ವೇಳೆ ಸಂದೇಶ ರವಾನಿಸಿ ಬೆದರಿಕೆ ಹಾಕಿದ್ದಾರೆ. ತಿರುಪತಿಯ ಬಿಮಾ ಪ್ಯಾರಡೈಸ್ ಹೊಟೇಲ್ ನಲ್ಲಿ ಶಾಸಕ ಅನೈತಿಕ ಚಟುವಟಿಕೆ ನಡೆಸುತ್ತಾರೆ. ಇಂತಹವರನ್ನು ಪಕ್ಷದಿಂದ ಅಮಾನತುಗೊಳಿಸಬೇಕು. ಈತ ಅನೇಕ ಹುಡುಗಿಯರಿಗೆ ಲೈಂಗಿಕ ಕಿರುಕುಳ ಹಿಂಸೆ ನೀಡುತ್ತಿದ್ದ. ಈತ ಕಾಮಂಧ, ರಾಕ್ಷಸ. ಇವರಿಂದ ಸತ್ಯವೇಡುವಿನಲ್ಲಿ ಪಕ್ಷದ ಮಹಿಳಾ ಕಾರ್ಯಕರ್ತರಿಗೆ ರಕ್ಷಣೆ ನೀಡಬೇಕು ಎಂದು ಸಂತ್ರಸ್ತೆ ಮನವಿ ಮಾಡಿದರು.