ನ್ಯೂಸ್

ಅನೈತಿಕ ಸಂಬಂಧ ಹಿನ್ನೆಲೆ: ಗ್ರಾಮದ ಬೀದಿಗಳಲ್ಲಿ ಗಂಡ-ಪರಸ್ತ್ರೀಯನ್ನು ಮೆರವಣಿಗೆ ಮಾಡಿದ ಹೆಂಡತಿ..

ಗೋದಾವರಿ: ಅನೈತಿಕ ಸಂಬಂಧ ಆರೋಪ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಪುರುಷನನ್ನು ಥಳಿಸಿ ಸಾರ್ವಜನಿಕವಾಗಿ ಪರೇಡ್​ ಮಾಡಿರುವ ಘಟನೆ ಆಂಧ್ರ ಪ್ರದೇಶದ ಶ್ರೀ ಸತ್ಯ ಸಾಯಿ ಜಿಲ್ಲೆಯಲ್ಲಿ ನಡೆದಿದೆ.

ಲೇಪಾಕ್ಷಿ ಗ್ರಾಮದ ನಾಜಿಯಾ ತನ್ನ ಪತಿ ಹುಸೇನ್ (30) ಹಸ್ನಾಬಾದ್‌ನ ಇನ್ನೊಬ್ಬ ಮಹಿಳೆ ಶಬಾನಾ (32) ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾನೆ ಎಂಬ ಆರೋಪಿ ಕೇಳಿ ಬಂದಿದೆ. ಈ ಸುದ್ದಿಯನ್ನು ತಿಳಿದ ಸಂಬಂಧ ತಿಳಿದ ನಾಜಿಯಾ ಹಾಗೂ ಆಕೆಯ ಕುಟುಂಬಸ್ಥರು ಕೈ ಕಟ್ಟಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದಾರೆ. ಆತ ಮತ್ತು ಶಬಾನಾಳನ್ನು ಥಳಿಸುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, 
ಇಬ್ಬರನ್ನು ಕಟ್ಟಿಹಾಕಿ ಆಟೋ ರಿಕ್ಷಾದಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯುವ ವೇಳೆ ಹುಸೇನ್ ಓಡಿ ಹೋಗಿದ್ದಾನೆ.

ಈ ಕುರಿತು ಮಾತನಾಡಿದ ಹಿಂದೂಪುರ ಉಪವಿಭಾಗದ ಪೊಲೀಸ್ ಅಧಿಕಾರಿ, ಆತ ಮತ್ತು ಶಬಾನಾಳ ಜತೆ ವಿವಾಹೇತರ ಸಂಬಂಧ ಹೊಂದಿರುವ ಕಾರಣದಿಂದ ಹುಸೇನ್​ನ ಪತ್ನಿ, ಶಬಾನಾಳ ವಾಸವಿದ್ದ ಸ್ಥಳಕ್ಕೆ ತೆರಳಿ ಇಬ್ಬರನ್ನೂ ಥಳಿಸಿ ಪಟ್ಟಣದಲ್ಲಿ ಪರೇಡ್ ಮಾಡಿದ್ದಾಳೆ. ಸದ್ಯ, ನಾಜಿಯಾ ಮತ್ತು ಅವರ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)