ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಬಗ್ಗೆ ಕಿಡಿಗೇಡಿಗಳು ಹಾಕಿದ್ದ ಅಕ್ಷೇಪರ್ಹಾ ಪೋಸ್ಟ್ ಕುರಿತು ಭಾರೀ ಚರ್ಚೆ ಆಗ್ತಿದೆ. ಗಜಪಡೆ ಹೆಸರಿನ ಖಾತೆಯಲ್ಲಿ ಅಶ್ವಿನಿ ಅವರ ಬಗ್ಗೆ ಕೆಟ್ಟದ್ದಾಗಿ ನಿಂದಿಸಲಾಗಿದೆ.
ದೊಡ್ಮನೆ ಸೊಸೆ ಬಗ್ಗೆ ಕೀಳು ಮಟ್ಟದ ಪೋಸ್ಟ್ಗೆ ಹಲವರು ಕಿಡಿ ಕಾರಿದ್ದಾರೆ. ಈಗ ಅಪ್ಪಟ ಪುನೀತ್ ಅಭಿಮಾನಿ ಆಂಕರ್ ಅನುಶ್ರೀ ಅಶ್ವಿನಿಯವರ ಬೆಂಬಲಕ್ಕೆ ನಿಂತಿದ್ದಾರೆ. ಕಾಮೆಂಟ್ ಮಾಡಿದವನಿಗೆ 'ಈ ಜಾಗದಲ್ಲಿ ನಿಮ್ಮ ತಾಯಿ ಅಥವಾ ಸಹೋದರಿ ಇದ್ದಿದ್ದರೆ' ಇದೇ ರೀತಿ ಕಾಮೆಂಟ್ ಮಾಡುತ್ತಿದ್ದಿರಾ ಎಂದು ಪ್ರಶ್ನೆ ಮಾಡಿದ್ದಾರೆ.
ಇದೀಗ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿ, ನಿರೂಪಕಿ ಅನುಶ್ರೀ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿರುವ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ. ಇದಕ್ಕೆ ಡಾ.ರಾಜ್ಕುಮಾರ್ ಅಭಿಮಾನಿಗಳು ಶ್ಲಾಘಿಸಿದ್ದಾರೆ.
ಏನಾಗಿತ್ತು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್-2024 ಕ್ರಿಕೆಟ್ ಟೂರ್ನಿಯಲ್ಲಿಯೂ ಕಳಪೆ ಪ್ರದರ್ಶನ ಮಾಡುತ್ತಿದೆ. ಇದಕ್ಕೆ ಆರ್‌ಸಿಬಿ ಅನ್‌ಬಾಕ್ಸಿಂಗ್ ಈವೆಂಟ್‌ಗೆ ಹೋಗಿದ್ದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ಕಾರಣವೆಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದನು.