ನ್ಯೂಸ್

ರಾತ್ರಿ ಪಕ್ಕದಲ್ಲೇ ಮಲಗಿದ್ದ ಅವಳಿ ಗಂಡು ಮಕ್ಕಳನ್ನು ಕೊಲೆ ಮಾಡಿದ ತಂದೆ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ?

ಅನಂತಪುರ: ತಂದೆಯೊಬ್ಬ ತನ್ನ ಅವಳಿ ಗಂಡು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿ ಸಮಾಧಿ ಮಾಡಿರುವ ಅಮಾನವೀಯ ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಕಲ್ಯಾಣ್​ದುರ್ಗ ಮಂಡಲದ ಬೊಯಲಪಲ್ಲಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ರಾಧಮ್ಮ ಮತ್ತು ರವಿ ಎಂಬುವರ ಅವಳಿ ಮಕ್ಕಳಾದ​ ಐದು ವರ್ಷದ ಸಂದೀಪ್​ ಮತ್ತು ಸುಧೀರ್ ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಮಕ್ಕಳು ಮಲಗಿದ್ದ ವೇಳೆ ತಂದೆಯೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಅದೇ ರಾತ್ರಿ ಶವಗಳನ್ನು ಗ್ರಾಮದ ಪಕ್ಕದ ಅರಣ್ಯ ಪ್ರದೇಶದ ಬಳಿ ಕೊಂಡೊಯ್ದು ಸಮಾಧಿ ಮಾಡಿದ್ದಾನೆ.

ಮರುದಿನ ಮಕ್ಕಳಿಬ್ಬರು ಕಾಣದಿದ್ದಾಗ ರಾಧಮ್ಮ ತನ್ನ ಪತಿ ರವಿಯನ್ನು ವಿಚಾರಿಸಿದ್ದಾಳೆ. ಬಳಿಕ ಆತ ನಡೆದ ಘಟನೆಯೆಲ್ಲ ತನ್ನ ಪತ್ನಿಯ ಮುಂದೆ ವಿವರಿಸಿದ್ದಾನೆ. ನಂತರ ಗ್ರಾಮಸ್ಥರ ಸಹಾಯದಿಂದ ಮಕ್ಕಳ ಸಮಾಧಿ ಸ್ಥಳಕ್ಕೆ ತಲುಪಿದಾಗ ಮಕ್ಕಳ ಶವ ಪತ್ತೆಯಾಗಿದೆ.

ಇನ್ನು ರವಿ ಕೆಲ ದಿನಗಳಿಂದ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ, ಕೊಲೆಗೆ ನಿಖರ ಕಾರಣವೇನೆಂಬುದು ತಿಳಿದುಬಂದಿಲ್ಲ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಪ್ರಕರಣವನ್ನು ದಾಖಲಿಸಲಾಗಿದೆ. (ಏಜೆನ್ಸೀಸ್​)