ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಎರಡನೇ ವಿವಾಹಪೂರ್ವ ಪಾರ್ಟಿಯನ್ನು ಯುರೋಪ್‌ನಲ್ಲಿ ಕ್ರೂಸ್ ಹಡಗಿನಲ್ಲಿ ಆಯೋಜಿಸಿದ್ದಾರೆ. ಬಾಲಿವುಡ್ ಸೆಲಿಬ್ರಿಟಿಗಳು ಸೇರಿದಂತೆ ಕ್ರೂಸ್‌ನಲ್ಲಿರುವ 800 ಮಂದಿ ಅತಿಥಿಗಳು ಪಾರ್ಟಿ ಮತ್ತು ಸಂಗೀತವನ್ನು ಆನಂದಿಸುತ್ತಿದ್ದಾರೆ. ಅತಿಥಿಗಳಿಗೆ ನೀಡುತ್ತಿರುವ ಮೆನು ಮನೆಯನ್ನು ನೆನಪಿಸುವಂತಿದೆ ಎನ್ನಲಾಗಿದೆ. ಅದಕ್ಕೆಲ್ಲಾ ಕಾರಣ ಬೆಂಗಳೂರಿನ ರಾಮೇಶ್ವರಂ ಕೆಫೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯು ದಕ್ಷಿಣ ಭಾರತದ ತಿನಿಸು ಮತ್ತು ಫಿಲ್ಟರ್ ಕಾಫಿಯನ್ನು ಕ್ರೂಸ್‌ನಲ್ಲಿರುವ ಅತಿಥಿಗಳಿಗೆ ನೀಡುತ್ತಿದೆ. ಈ ಬಗ್ಗೆ ರಾಮೇಶ್ವರಂ ಕೆಫೆಯು ಇನ್‌ಸ್ಟಾಗ್ರಾಮ್‌ನಲ್ಲಿ ಸುದ್ದಿಯನ್ನು ಹಂಚಿಕೊಂಡಿದೆ ಮತ್ತು ತಮ್ಮ ತಂಡದ ಕ್ರೂಸ್‌ನ ಚಿತ್ರಗಳನ್ನು ಶೇರ್ ಮಾಡಿದೆ.
ಫೋಟೋಗಳನ್ನು ಹಂಚಿಕೊಂಡಿರುವ ರಾಮೇಶ್ವರಂ ಕೆಫೆ, ಮತ್ತೊಂದು ಮೈಲಿಗಲ್ಲು ಮತ್ತೊಂದು ಸಾಧನೆ. ಸ್ಪೇನ್ನಲ್ಲಿ ನಡೆಯುತ್ತಿರುವ ವಿಶ್ವದ ಅತ್ಯುತ್ತಮ ಪೂರ್ವವಿವಾಹ ಸಮಾರಂಭದಲ್ಲಿ ಭಾಗವಾಗಲು ಸಂತೋಷವಾಗುತ್ತಿದೆ. ರಾಮೇಶ್ವರಂ ಕೆಫೆ ದಕ್ಷಿಣದಲ್ಲಿ ಅತ್ಯುತ್ತಮವಾದ ದಕ್ಷಿಣ ಭಾರತೀಯ ಆಹಾರವನ್ನು ಒದಗಿಸುವ ಏಕೈಕ ರೆಸ್ಟೋರೆಂಟ್ ಆಗಿದೆ ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ.
ಈವೆಂಟ್‌ಗೆ ಹಾಜರಾಗುವ ಸೆಲಿಬ್ರಿಟಿಗಳು ರಾಮೇಶ್ವರಂ ಕೆಫೆ ನೀಡುವ ಆಹಾರವನ್ನು ಆನಂದಿಸುತ್ತಿದ್ದಾರೆ. "ಅವರು ಪುಡಿ ಇಡ್ಲಿ ಮತ್ತು ಪುಡಿ ದೋಸೆಯನ್ನು ಆನಂದಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಶೇರ್ ಮಾಡಿರುವ ಪೋಸ್ಟ್ ಇದುವರೆಗು 7,700ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.
ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರು ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರನ್ನು ಜುಲೈ 12ರಂದು ಮುಂಬೈನಲ್ಲಿ ವಿವಾಹವಾಗಲಿದ್ದಾರೆ. ವರದಿಯ ಪ್ರಕಾರ, ನಗರದ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (BKC) ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಸಮಾರಂಭ ನಡೆಯಲಿದೆ.