ಮುಂಬೈ: ಮುಕೇಶ್ ಅಂಬಾನಿ-ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭವು ಜುಲೈ 12ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆಂಷನ್ ಸೆಂಟರ್ನಲ್ಲಿ ನಡೆಯಲಿದ್ದು, ವಿವಾಹ ಮಹೋತ್ಸವು ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಇದೀಗ ಮದುವೆ ಕಾರ್ಯಕ್ರಮವು ಮತ್ತೊಂದು ವಿಚಾರಕ್ಕೆ ಜನರ ಗಮನ ಸೆಳೆದಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗುಜರಾತ್ನ ಜಾಮ್ನಗರದಲ್ಲಿ ಆರಂಭವಾದ ಮೊಲದ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಬಾಲಿವುಡ್ ಹಾಗೂ ಕ್ರೀಡಾ ಲೋಕದ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಕೆಲವು ವಾರಗಳ ಹಿಂದೆ ಇಟಲಿಯಲ್ಲಿ ಅದ್ದೂರಿಯಾಗಿ ಪ್ರೀ-ವೆಡ್ಡಿಂಗ್ ಸಮಾರಂಭ ಮಾಡಲಾಯಿತು. ಆ ವೇಳೆ ನೀಡಿದ ಆಹಾರದಲ್ಲಿ ಕೂದಲು ಸಿಕ್ಕಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ವಿಚಾರ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಮಣ್ಣು ಹದವಾಗಲು ಒಪ್ಪದಿದ್ದರೆ ಮೂರ್ತಿ ಮಾಡಲು ಹೇಗೆ ಸಾಧ್ಯ; ಹಳೇ ಘಟನೆಯನ್ನು ನೆನೆದು ಖ್ಯಾತ ನಟಿಯ ಹೇಳಿಕೆ ವೈರಲ್
ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಪಡೆದಿರುವ, ಬಾಲಿವುಡ್ ನಟ-ನಟಿಯರ ಆಪ್ತ ಒರ್ಹಾನ್ ಅವತ್ರಮಣಿ ಅಲಿಯಾಸ್ ಒರಿ ಇಟಲಿಯಲ್ಲಿ ಅದ್ದೂರಿಯಾಗಿ ನಡೆದ ಪ್ರೀ-ವೆಡ್ಡಿಂಗ್ ಸಮಾರಂಭದ ಕೆಲವು ತುಣುಕುಗಳನ್ನು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಇದರ ಬಗ್ಗೆ ವಿಡಿಯೋ ಮಾಡಿ ಹಂಚಿಕೊಂಡಿದ್ದು ಅತಿಥಿಗಳಿಗೆ ತಯಾರಿಸಿದ್ದ ನೂರಾರು ಬಗೆಯ ಆಹಾರದ ಬಗ್ಗೆಯೂ ಮಾತನಾಡಿದ್ದಾರೆ. ಇದರಲ್ಲಿ ಭಾರತದ ಫೇಮಸ್ ಖಾದ್ಯವಾದ ವಡಾಪಾವ್ಅನ್ನು ಕೂಡ ಮಾಡಿಸಲಾಗಿತ್ತು. ಇದರ ಬಗ್ಗೆ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಒರಿ ಮತ್ತು ಅವರ ಸ್ನೇಹಿತೆ ತಾನಿಯಾ ಶ್ರಾಫ್ ಅವರು ಹಲವು ಆಹಾರಗಳ ರುಚಿ ಸವಿದಿದ್ದಾರೆ. ಅದರ ನಡುವೆ ಅವರು ವಡಾ ಪಾವ್ ಕೂಡ ತಿಂದಿದ್ದಾರೆ. ತಿನ್ನುವುದಕ್ಕೂ ಮುನ್ನವೇ ಇದು ಅತ್ಯುತ್ತಮ ವಡಾ ಪಾವ್ ಎಂದು ಒರಿ ಬಣ್ಣಿಸಿದ್ದಾರೆ. ಒರಿ ಗೆಳತಿ ತಾನಿಯಾ ಶ್ರಾಫ್ ನನಗೆ ಇನ್ನೊಂದು ವಡಾ ಪಾವ್ ತಿನ್ನುವ ಆಸೆಯಾಗಿತ್ತು. ಆದರೆ ಅದರಲ್ಲಿ ಕೂದಲು ಇತ್ತು ಎಂದು ಅವರು ಹೇಳುತ್ತಿರುವುದು ವಿಡಿಯೋದ ಹಿನ್ನೆಲೆಯಲ್ಲಿ ಕೇಳಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದರ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.