Mahakumbh Mela: ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಒಂದಿಲ್ಲೊಂದು ಹೊಸ ಸಂಗತಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇದೀಗ ಚಾಹ ಅಂಗಡಿಯಿಟ್ಟು ಪ್ರತಿದಿನ 5 ಸಾವಿರ ರೂ. ಲಾಭ ಮಾಡುತ್ತಿರುವ ಯುವಕನ ಹೇಳಿಕೆಗಳು ಸೋಷಿಯಲ್ ವೇದಿಕೆಯಲ್ಲಿ ಭಾರಿ ಸದ್ದು ಮಾಡುತ್ತಿದೆ.
ಹೌದು, ಮಹಾಕುಂಭ ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆಗಳಲ್ಲಿ ಒಂದಾಗಿದೆ. ಪ್ರತಿದಿನ ಇಲ್ಲಿಗೆ ಕೋಟ್ಯಾಂತರ ಜನರು ಭೇಟಿ ನೀಡುತ್ತಾರೆ. ಹೀಗಾಗಿ, ಇಲ್ಲಿನ ಸಾವಿರಾರು ಜನರ ಬದುಕಿನ ದಾರಿ ಕೂಡ ಹುಡುಕಿಕೊಳ್ಳುತ್ತಾರೆ. ಅದರಂತೆ ಶುಭಂ ಪ್ರಜಾಪತ್ ಎಂಬ ಯುವಕ ಟೀ ಮಾರುವ ಮತ್ತು ವಾಟರ್ ಬಾಟಲಿ ಮಾರುವ ಒಂದು ಸಣ್ಣ ಅಂಗಡಿಯನ್ನು ರಸ್ತೆಯ ಬದಿಯಲ್ಲಿ ಹಾಕಿಕೊಂಡಿದ್ದಾನೆ. ಈ ಯುವಕ ಒಂದು ಟೀ ಅನ್ನು 10 ರೂ. ಮಾರಾಟ ಮಾಡುತ್ತಿದ್ದಾನೆ. ಮುಂಜಾನೆಯಿಂದ ಸಂಜೆಯವರೆಗೆ 5 ಸಾವಿರ ರೂ. ಲಾಭಗಳಿಸುವುದಾಗಿ ಯುವಕ ಶುಭಂ ಪ್ರಜಾಪತ್ ಹೇಳಿಕೊಂಡಿದ್ದಾನೆ.
ಇತನ ದುಡಿಮೆಗೆ ಕುಂಭಮೇಳ ವೇದಿಕೆಯಾಗಿದ್ದು, ಅತನ ಹೇಳಿಕೆಯ ಪ್ರಕಾರ, ಬೆಳಗ್ಗೆ ದೊಡ್ಡ ಮಟ್ಟದ ಜನಸಂಖ್ಯೆಯಲ್ಲಿರುತ್ತಾರೆ. ಮಧ್ಯ್ಹಾನದ ಬಳಿಕ ಕಡಿಮೆ ಜನ ಸಂದಣಿ ಹೊಂದಿರುತ್ತಾರೆ. ಹಾಗಾಗಿ ಇದೀಗ ಸಲ್ಪ ರೆಸ್ಟ್ ಸಿಕ್ಕಿದೆ. ಸಂಜೆ ಮತ್ತೆ ಜನ ಸೇರುತ್ತಾರೆ ಎಂದು ಹೇಳುತ್ತಾ.. ಒಂದು 7 ಸಾವಿರ ರೂ. ಕಲೆಕ್ಷನ್ ಆಗಿದೆ. ಅದರಲ್ಲಿ ಎಲ್ಲ ರೀತಿಯ ಖರ್ಚು ತೆಗೆದು 5 ಸಾವಿರ ರೂ. ಲಾಭವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಇದೀಗ ಈ ಯುವಕನ ಹೇಳಿಕೆಗಳು ಸೋಷೊಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿವೆ. ಅಲ್ಲದೆ, ಇತನ ಕಾಯಕಕ್ಕೆ ನೆಟ್ಟಿಜನ್ ಫಿದಾ ಆಗಿದ್ದು, ತರೇಹವಾರಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಒಬ್ಬ ಬಳಕೆದಾರ ದಿನಕ್ಕೆ 5000 ರೂ.* 30 ದಿನ = 1,50,000 ರೂ. ವಾಹ್! ಎಂದಿದ್ದಾನೆ. ಮತ್ತೊಬ್ಬರು ಡಾಲಿ ಚಾಯ್ ವಾಲ ಬದಲಾಯಿ ಕುಂಭ್ ಛಾಯ್ ಚಾಲ ಎಂದು ತಮಾಷೆ ಮಾಡಿದ್ದಾರೆ.(ಏಜೆನ್ಸೀಸ್)