ತಮ್ಮ ಬೋಲ್ಡ್ ಅವತಾರದ ಮೂಲಕ ಹೆಚ್ಚು ಸುದ್ದಿಯಲ್ಲಿರುವಂತಹ ಮಾಲಿವುಡ್ ನಟಿ ಶ್ವೇತಾ ಮೆನನ್ ವಿರುದ್ಧ ಕೇರಳದ ಪೊಲೀಸರು ಬುಧವಾರ FIR ದಾಖಲಿಸಿದ್ದಾರೆ.
ಹೌದು, ಆರ್ಥಿಕ ಲಾಭಕ್ಕಾಗಿ(ಲಾಭಗಳಿಸುವ ಉದ್ದೇಶದಿಂದ) ಆಶ್ಲೀಲ ಚಲನಚಿತ್ರಗಳಲ್ಲಿ ಮತ್ತು ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪದ ಮೇಲೆ ನಟಿಯ ವಿರುದ್ಧ ಕೊಚ್ಚಿಯ ಎರ್ನಾಕುಲಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಾರ್ಟಿನ್ ಮನಚೇರಿ ಹೆಸರಿನ ಸಾರ್ವಜನಿಕ ಕಾರ್ಯಕರ್ತ(ಆರ್ಟಿಐ) ನಟಿಯ ವಿರುದ್ಧ ದೂರು ಸಲ್ಲಿಸಿದ್ದಾರೆ. ಎರ್ನಾಕುಲಂ ಸಿಜೆಐ ನ್ಯಾಯಾಲಯ ಸ್ಥಳೀಯ ಪೊಲೀಸರನ್ನು ಕೈಗೊಳ್ಳುವಂತೆ ಸೂಚಿಸಿದ ಹಿನ್ನೆಲೆ ನಟಿ ಮೆನನ್ ವಿರುದ್ಧ ಆಶ್ಲೀಲ ತಡೆ ಮತ್ತು ಐಟಿ ಕಾಯ್ದೆಯಡಿ ಕೇಸ್ ದಾಖಲಾಗಿದೆ.
ಶ್ವೇತಾ ಮೆನನ್ ಇತ್ತೀಚೆಗೆ ಕಳೆದ ತಿಂಗಳು ಬಿಡುಗಡೆಯಾದ ಮಲಯಾಳಂ ಥ್ರಿಲ್ಲರ್ ಡ್ರಾಮಾ ಜಂಕಾರ್‌ನಲ್ಲಿ ಕಾಣಿಸಿಕೊಂಡರು. ಅವರ ಮುಂದಿನ ಚಿತ್ರ ಮಲಯಾಳಂ ಆಕ್ಷನ್ ಥ್ರಿಲ್ಲರ್ ಕರಮ್ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.(ಏಜೆನ್ಸೀಸ್)