ನ್ಯೂಸ್

ಸಂತನಾದ ಐಐಟಿಯ ಏರೋಸ್ಪೇಸ್ ಇಂಜಿನಿಯರ್; ಸೋಷಿಯಲ್ ಮಿಡಿಯಾ ಸ್ಟಾರ್​ಗೆ ಆಧ್ಯಾತ್ಮಿಕ ಸೆಳೆತ

ಮಹಾಕುಂಭನಗರ (ಪ್ರಯಾಗ್​ರಾಜ್): ಮಹಾ ಕುಂಭದಲ್ಲಿ ನಾಗಾ ಸಾಧುಗಳ ಸೇನೆಯೇ ನೆರೆದಿದೆ. ಕೈಯಲ್ಲಿ ಖಡ್ಗ ಝುಳಪಿಸುತ್ತ, ತ್ರಿಶೂಲ, ಡಮರುಗ ಹಿಡಿದು ಅಧ್ಯಾತ್ಮ ಸಾಧನೆಯಲ್ಲಿ ತೊಡಗಿದ್ದಾರೆ. ಆದರೆ, ಇನ್ನು ಹಲವು ಸಾಧುಗಳು ವಿಶಿಷ್ಟ ಹಿನ್ನೆಲೆ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಐಐಟಿ ಬಾಬಾ ಎಂದೇ ಕರೆಯಲ್ಪಡುವ ಸಾಧು ಬಾಂಬೆ ಐಐಟಿ ಪದವೀಧರರು. ಹರಿಯಾಣ ಮೂಲದ ಅಭಯ್ ಸಿಂಗ್ ಸಾಧು ಇಂಜಿನಿಯರ್ ಬಾಬಾ ಮತ್ತು ಐಐಟಿ ಬಾಬಾ ಎಂದೇ ಗುರುತಿಸಿಕೊಂಡಿದಾರೆ. ಇವರು ಏರೋಸ್ಪೇಸ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾರೆ. ಕೆಲವು ವರ್ಷಗಳವರೆಗೆ ಕಾಪೋರೇಟ್ ಕಂಪನಿಗಳಲ್ಲಿ ಕೆಲಸದ ಬಳಿಕ ಟ್ರಾವೆಲ್ ಫೋಟೋಗ್ರಫಿ ಕಡೆಗೆ ಒಲವು ಬೆಳೆಸಿಕೊಂಡಿದ್ದರು. ಈ ವೇಳೆ ಆಧ್ಯಾತ್ಮಿಕತೆ ಇವರನ್ನು ಸೆಳೆದಿತ್ತು. ಈಗ ನಾನು ಆಧ್ಯಾತ್ಮಿಕತೆಯನ್ನು ಆನಂದಿಸುತ್ತಿದ್ದೇನೆ, ವಿಜ್ಞಾನದ ಮೂಲಕ ಆಧ್ಯಾತ್ಮವನ್ನು ಆಳವಾಗಿ ಅರ್ಥ ಮಾಡಿಕೊಳ್ಳುತ್ತಿದ್ದೇನೆ, ಪ್ರತಿಯೊಂದು ಶಿವನ ಪ್ರತಿರೂಪ. ಶಿವ ಸತ್ಯ, ಶಿವ ಸುಂದರ ಎಂದು ಐಐಟಿ ಬಾಬಾ ಹೇಳುತ್ತಾರೆ.

ಸ್ವೀವ್ ಜಾಬ್ಸ್ ಪತ್ರ -ಠಿ;4.32 ಕೋಟಿಗೆ ಹರಾಜು: ಆಪಲ್ ಕಂಪನಿಯ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರು ಕುಂಭ ಮೇಳದಲ್ಲಿ ಪಾಲ್ಗೊಳ್ಳಲು ಆಸಕ್ತನಾಗಿರುವ ಕುರಿತು ಬರೆದಿದ್ದ ಪತ್ರ 5,00,312 ಡಾಲರ್ (4.32 ಕೋಟಿ) ಡಾಲರ್​ಗೆ ಲಂಡನ್​ನಲ್ಲಿ ಹರಾಜಾಗಿದೆ. 1974 ರ ಫೆಬ್ರವರಿ 19 ರಂದು ಜಾಬ್ಸ್ ತಮ್ಮ 19ನೇ ಹುಟ್ಟುಹಬ್ಬದ ದಿನ ಸ್ನೇಹಿತನಿಗೆ ಬರೆದಿದ್ದ ಪತ್ರ ಇದು. ಇದರಲ್ಲಿ ಏಪ್ರಿಲ್​ನಲ್ಲಿ ಕುಂಭ ಮೇಳ ಆರಂಭವಾಗಲಿದೆ. ಮಾರ್ಚ್ ನಲ್ಲಿ ನಾನು ಭಾರತಕ್ಕೆ ಪ್ರಯಾಣ ಬೆಳೆಸಲು ಚಿಂತಿಸುತ್ತಿದ್ದೇನೆ ಎಂದು ಬರೆದಿದ್ದಾರೆ. ಸ್ಟೀವ್ ಜಾಬ್ಸ್ ಪತ್ನಿ ಲಾರೆನ್ ಪೊವೆಲ್ ಮಹಾಕುಂಭ ದಲ್ಲಿ ಭಾಗಿಯಾಗಿ ಹಲವು ವ್ರತಾಚರಣೆಗಳಲ್ಲಿ ಪಾಲ್ಗೊಂಡಿದ್ದಾರೆ.

ಆಹಾರ ತಪಾಸಣೆಗೆ ಮೊಬೈಲ್ ಲ್ಯಾಬ್: ಕೋಟ್ಯಂತರ ಜನರು ಪಾಲ್ಗೊಳ್ಳುವ ಕುಂಭ ಮೇಳದಲ್ಲಿ ಮಾರಾಟವಾಗುವ ಪ್ರತಿಯೊಂದು ಆಹಾರ ಗುಣಮಟ್ಟ ಹೊಂದಿರಬೇಕು ಎಂದು ಉತ್ತರಪ್ರದೇಶ ಸರ್ಕಾರ ಬಯಸುತ್ತಿದೆ. ಈ ಹಿನ್ನೆಲೆಯಲ್ಲಿ ಮೇಳದಲ್ಲಿ ಮಾರಾಟವಾಗುವ ಆಹಾರದ ಗುಣಮಟ್ಟ ಪರಿಶೀಲಿಸಲು ಮೊಬೈಲ್ ಲ್ಯಾಬೋರೇಟರಿಗಳನ್ನು ಸ್ಥಾಪಿಸಲಾಗಿದೆ. ಆಹಾರ ಅಧಿಕಾರಿಗಳು ಸ್ಥಳದಲ್ಲೇ ತಪಾಸಣೆ ನಡೆಸಿ ಗುಣಮಟ್ಟದ ಕಾಯ್ದುಕೊಳ್ಳದ, ಹೋಟೆಲ್, ಡಾಭಾ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.

ರೀಲ್ಸ್ ಮಾಡೆಲ್ ಈಗ ಕಾವಿಧಾರಿ: ಕುಂಭ ಮೇಳದಲ್ಲಿ ಪಾಲ್ಗೊಂಡಿರುವ ಕಾವಿಧಾರಿಯೊಬ್ಬರು ಈ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದವರು. ಅದೇ ಕಾರಣಕ್ಕೆ ಈಗ ಮತ್ತೆ ವೈರಲ್ ಆಗುತ್ತಿದ್ದಾರೆ. ಹರ್ಷಾ ರಿಚಾರಿಯಾ ಎಂಬ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಈಗ ಸಾಧಿ್ವಾಗಿ ಬದಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈಗ ಅವರದ್ದೇ ಚರ್ಚೆ. 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ರಿಚಾರಿಯಾ ತಾವು 2 ವರ್ಷದ ಹಿಂದೆ ಆಧ್ಯಾತ್ಮಿಕದ ಕಡೆಗೆ ಆಕರ್ಷಿತಳಾಗಿದ್ದೆ, ನಾನು ಎಲ್ಲವನ್ನೂ ತ್ಯಜಿಸಿ ಹೊಸ ಗುರುತನ್ನು ಹೊಂದುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ವಿಮಾನ ಟಿಕೆಟ್ ದುಬಾರಿ: ಮಹಾಕುಂಭದ ಹಿನ್ನೆಲೆಯಲ್ಲಿ ಪ್ರಯಾಗ್​ರಾಜ್​ಗೆ ಸಂಪರ್ಕ ಕಲ್ಪಿಸುವ ವಿಮಾನಗಳ ದರ ಗಣನೀಯವಾಗಿ ಏರಿಕೆಯಾಗಿದೆ. ಅಮೃತ ಸ್ನಾನದ ಸಂದರ್ಭದಲ್ಲಿ ದರ ಹಲವು ಪಟ್ಟು ಏರಿಕೆ ಕಂಡಿದೆ. ದೆಹಲಿ-ಪ್ರಯಾಗರಾಜ್ ವಿಮಾದ ನ ಶೇ.21 ರಷ್ಟು ಏರಿಕದ ಕಂಡು 5748 ಆಗಿದ್ದರೆ, ಬೆಂಗಳೂರು ಪ್ರಯಾಗರಾಜ್ ವಿಮಾನ ದರ ಶೇ.89 ರಷ್ಟು ಏರಿಕೆಯಾಗಿ 11 ಸಾವಿರ ರೂ.ಗೆ ತಲುಪಿದೆ. ಮುಂಬರುವ ಶಾಹಿ ಸ್ನಾನದ ಸಂದರ್ಭದಲ್ಲಿ ಕೆಲವು ಮಾರ್ಗಗಳಲ್ಲಿ ಟಿಕೆಟ್ ದರ 25 ಸಾವಿರ ರೂ.ಗೂ ಹೆಚ್ಚು ಇದೆ.