ನ್ಯೂಸ್

ಅಮೃತಬಿಂದು: ಶ್ರೀ ಶೈವಾಗಮ: ಪತಿಯನ್ನು ಕಳೆದುಕೊಂಡ ವಿಧವೆಯರಿಗೆ ವೈರಾಗ್ಯಭಾವದ ಆವಶ್ಯಕತೆ ಇರುವುದರಿಂದ ಅವರು ಸಂಹಾರ (ಲಯ) ನ್ಯಾಸ ಮಾಡಬೇಕು

kumarvrl

ವಿಭರ್ತೃಕಾಯಾಶ್ಚ ತಥಾ ಸಂಹಾರನ್ಯಾಸ ಉಚ್ಯತೇ | ಉತ್ಪತ್ತಿರುಕ್ತಃ ಕನ್ಯಾಯಾಃ ಸುವಾಸಿನ್ಯಾಃ ಸ್ಥಿತಿರ್ಭವೇತ್ ||

ಪತಿಯನ್ನು ಕಳೆದುಕೊಂಡ ವಿಧವೆಯರಿಗೆ ವೈರಾಗ್ಯಭಾವದ ಆವಶ್ಯಕತೆ ಇರುವುದರಿಂದ ಅವರು ಸಂಹಾರ (ಲಯ) ನ್ಯಾಸ ಮಾಡಬೇಕು. ಮದುವೆಯಾಗದ ಕನ್ಯೆಯರಿಗೆ ಜ್ಞಾನಾರ್ಜನಾದಿಗಳ ಆವಶ್ಯಕತೆ ಇರುವುದರಿಂದ ಅದಕ್ಕೆ ಸಹಕಾರಿಯಾಗಿರುವ ಸೃಷ್ಟಿನ್ಯಾಸ ಮಾಡಬೇಕು. ಮದುವೆಯಾಗಿ ಪ್ರಪಂಚವನ್ನು ಮುನ್ನಡೆಸುವ ಮುತ್ತೈದೆಯರು ಅವರ ಆ ಕಾರ್ಯಕ್ಕೆ ಪೂರಕವಾದ ಸ್ಥಿತಿನ್ಯಾಸವನ್ನು ಮಾಡಬೇಕು. ವೀರಶೈವಸಿದ್ಧಾಂತದ ಪ್ರಕಾರ ಮಹಿಳೆಯರಿಗೂ ಜಪ, ತಪ, ಪೂಜಾದಿ ಧರ್ಮಕಾರ್ಯಗಳಲ್ಲಿ ಪುರುಷನಷ್ಟೇ ಅಧಿಕಾರವಿರುವುದರಿಂದ ಅವರವರಿಗೆ ಉಕ್ತವಾದ ನ್ಯಾಸಗಳನ್ನು ಮಾಡಲು ಇಲ್ಲಿ ತಿಳಿಸಲಾಗಿದೆ.

| ಚಂದ್ರಜ್ಞಾನಾಗಮ (11.22) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು