ಅಮೃತಸರ: ವಾರಿಸ್ ಪಂಜಾಬ್ ದೇ ಸಂಘಟನೆಯ ಮುಖ್ಯಸ್ಥ, ಸಿಖ್ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್ಪಾಲ್ ಸಿಂಗ್ ಸಹಚರ ಪಪಲ್ಪ್ರೀತ್ ಸಿಂಗ್ನನ್ನು ಪಂಜಾಬ್ ಪೊಲೀಸರು ಹೋಶಿಯಾರ್ಪುರದಲ್ಲಿ ಬಂಧಿಸಿದ್ದಾರೆ.
ಕಳೆದ ತಿಂಗಳು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಮೃತ್ಪಾಲ್ ಸಿಂಗ್ ಹಾಗೂ ಆತನ ಸಹಚರ ಪಪಲ್ಪ್ರೀತ್ ಸಿಂಗ್ ಪರಾರಿಯಾಗಿದ್ದರು ಮತ್ತು ಸ್ಥಳಗಳನ್ನು ಬದಲಾಯಿಸುತ್ತಿದ್ದರು.
ಖಾಲಿಸ್ತಾನ ಪ್ರತ್ಯೇಕವಾದಿ ಅಮೃತ್ಪಾಲ್ ಸಿಂಗ್ ಕಳೆದ ತಿಂಗಳ ತನ್ನ ಸಹಚರನೊಂದಿಗೆ ಜಾಗವನ್ನು ಬದಲಾಯಿಸುತ್ತಾ ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದರು.
ಇವರಿಬ್ಬರ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಿದ್ದ ಪಂಜಾಬ್ ಪೊಲೀಸರು ದೆಹಲಿ ಗುಪ್ತಚರ ಇಲಾಖೆಯ ಸಹಾಯದೊಂದಿಗೆ ಪಪಲ್ಪ್ರೀತ್ ಸಿಂಗ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಇತ್ತ ಸಹಚರ ಪಪಲ್ಪ್ರೀತ್ ಸಿಂಗ್ನನ್ನು ಬಂಧಿಸಿರುವ ಪೊಲೀಸರು ಅಮೃತ್ಪಾಲ್ ಸಿಂಗ್ಗಾಗಿ ಶೋಧ ಕಾರ್ಯ ಮುಂದುವರೆಸಿದ್ದು ಶೀಘ್ರದಲ್ಲೇ ಬಂಧಿಸುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.