ಲಖನೌ: ಭಾರತದಲ್ಲಿ ಅನೇಕ ಖಾಸಗಿ ವಿಶ್ವವಿದ್ಯಾಲಯಗಳಿವೆ, ಅದರಲ್ಲಿ ಒಂದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿದೆ. ಪ್ರತಿದಿನ ಈ ಸಂಸ್ಥೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದು ಜನರ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಈ ಸಂಸ್ಥೆಯ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿದೆ. ಅದರಲ್ಲಿ ಹುಡುಗಿಯೊಬ್ಬಳು ಕಾಲೇಜು ಸಮಾರಂಭದಲ್ಲಿ ವೇದಿಕೆಯ ಮೇಲೆ ಡ್ಯಾನ್ಸ್ ಮಾಡುವಾಗ ತನ್ನ ಟಿಶರ್ಟ್ ಅನ್ನು ತೆಗೆದಿದ್ದಾಳೆ.
ಇದನ್ನು ಓದಿ: ತಾಯಿ & ಮಗಳನ್ನು ಹೊತ್ತೊಯ್ದ ಸಮುದ್ರದ ಅಲೆಗಳು; ಜೀವಣ್ಮರಣ ಹೋರಾಟದ Viral Video ನೋಡಿದ್ರೆ ಶಾಕ್ ಆಗ್ತೀರಿ..
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವಿದ್ಯಾರ್ಥಿನಿಯೊಬ್ಬಳು ನೃತ್ಯ ಮಾಡಲು ವೇದಿಕೆಯ ಮೇಲೆ ಬರುವುದನ್ನು ಕಾಣಬಹುದು. ಅವಳು ಬಾಲಿವುಡ್ ಹಾಡಿಗೆ ನೃತ್ಯ ಮಾಡುತ್ತಾ ತನ್ನ ಟಿಶರ್ಟ್ ಅನ್ನು ತೆಗೆದಿದ್ದಾಳೆ. ವಿಡಿಯೋ ನೋಡಿದವರು ಇದು ಅಶ್ಲೀಲತೆ ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹೇಳಿದ್ದಾರೆ.
ವಿಡಿಯೋವನ್ನು ಇಲ್ಲಿಯವರೆಗೂ 88 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು ಅನೇಕರು ಕಾಮೆಂಟ್ ಮಾಡಿದ್ದಾರೆ. ಈ ಕ್ಯಾಂಪಸ್‌ನ ಸಂಸ್ಕೃತಿ ತುಂಬಾ ಕೆಟ್ಟದಾಗಿದೆ, ಶಿಕ್ಷಣದ ಹೆಸರಲ್ಲಿ ಈ ಜನ ಅಶ್ಲೀಲತೆಯ ಗುಹೆ ತೆರೆದಿದ್ದಾರೆ, ಹುಡುಗಿಯ ವಿಡಿಯೋ ಶೇರ್ ಮಾಡುವ ಮುನ್ನ, ಫೋಟೋ ಬ್ಲರ್ ಮಾಡಿ, ಅಸಾಧಾರಣ ನೃತ್ಯಗಾರ್ತಿ ಮತ್ತು ಉತ್ತಮ ಸಮಯವನ್ನು ಕಳೆಯುತ್ತಿದ್ದೇನೆ, ನೀವು ಕೇವಲ ಅಸೂಯೆ ಹೊಂದಿದ್ದೀರಿ ಎಂದು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.(ಏಜೆನ್ಸೀಸ್)