ನ್ಯೂಸ್

Tirupati Laddu Row| ಸನಾತನ ಬೋರ್ಡ್​ ಸ್ಥಾಪನೆಗೆ DCM ಪವನ್​ ಆಗ್ರಹ; ನೀವು ಹಿಂದೂ ಧರ್ಮದ ನಿಜವಾದ ಶತ್ರುಗಳು ಎಂದ DMK

ಚೆನ್ನೈ: ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ತಿರುಪತಿ ತಿಮ್ಮಪ್ಪನ ಲಡ್ಡು (Tirupati Laddu Row) ಪ್ರಸಾದಕ್ಕೆ ವಿಶೇಷವಾದ ಮಹತ್ವವಿದ್ದು, ಭಕ್ತರು ಅದನ್ನು ಇಷ್ಟಪಟ್ಟು ಸೇವಿಸುತ್ತಾರೆ. ಆದರೆ, ಭಕ್ತರಿಗೆ ನೀಡಲಾಗುವ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿ ತಯಾರಿಸಲಾಗುತ್ತಿದೆ ಎಂಬ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಹೇಳಿಕೆ ವಿಶ್ವವ್ಯಾಪಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದು, ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ.

ಇದೀಗ ಈ ಕುರಿತು ಮಾತನಾಡಿರುವ ಡಿಎಂಕೆ ವಕ್ತಾರ ಡಾ. ಹಫೀಜುಲ್ಲಾ, ಚಂದ್ರಬಾಬು ನಾಯ್ಡು, ಪವನ್​ ಕಲ್ಯಾಣ್​ ಹಾಗೂ ಬಿಜೆಪಿ ಹಿಂದೂ ಧರ್ಮದ ನಿಜವಾದ ಶತ್ರುಗಳು. ಡಿಎಂಕೆ ಯಾವುದೇ ಧರ್ಮದ ಬಗ್ಗೆ ಮಾತನಾಡುವುದಿಲ್ಲ. ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ, ಟಿಡಿಪಿ ಮತ್ತು ಪವನ್ ಕಲ್ಯಾಣ್ ಅವರೇ ಧರ್ಮ ಮತ್ತು ಹಿಂದೂ ದೇವರುಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.

ಜಾತಿ ಅಸ್ಪೃಶ್ಯತೆ ಕುರಿತು ಡಿಎಂಕೆ ನಿಲುವು ಸ್ಪಷ್ಟವಾಗಿದ್ದು, ಬಾಬಾ ಅಂಬೇಡ್ಕರ್, ಜ್ಯೋತಿರಾವ್ ಪುಲೆ, ಪೆರಿಯಾರ್ ಮತ್ತು ದ್ರಾವಿಡ ಚಿಂತನಗೆಳಿಂದ ಕೂಡಿದೆ. ಡಿಎಂಕೆ ಸದಾ ಈ ಪದ್ಧತಿಯನ್ನು ವಿರೋಧಿಸುತ್ತದೆ. ತಿರುಪತಿ ಲಡ್ಡು ವಿಚಾರವಾಗಿ ಟಿಡಿಪಿ, ಬಿಜೆಪಿ ಹಾಗೂ ಜನಸೇನಾ ಪಕ್ಷದವರು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಡಿಎಂಕೆ ವಕ್ತಾರ ಡಾ. ಹಫೀಜುಲ್ಲಾ ಆರೋಪಿಸಿದ್ದಾರೆ.

ತಿರುಪತಿಗೆ ಭೇಟಿ ಕೊಡುವ ಭಕ್ತರಿಗೆ ನೀಡಲಾಗುವ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಮೀನಿನ ಎಣ್ಣೆ ಬಳಸಲಾಗುತ್ತಿತ್ತು ಎಂಬ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪ ಬೆನ್ನಲ್ಲೇ ಡಿಸಿಎಂ ಪವನ್​ ಕಲ್ಯಾಣ್​ ವೆಂಕಟೇಶ್ವರ ಸ್ವಾಮಿಯ ಕ್ಷಮೆ ಕೋರಿ 11 ದಿನದ ಪ್ರಾಯಶ್ಚಿತ ದೀಕ್ಷೆ ಕೈಗೊಂಡಿದ್ದರು. ಇದಲ್ಲದೆ ಸನಾತನ ಬೋರ್ಡ್​ ಸ್ಥಾಪನೆಗೆ ಆಗ್ರಹಿಸಿದ್ದರು. ಇದಲ್ಲದೆ ಉದಯನಿಧಿ ಸ್ಟಾಲಿನ್​ ಹಾಗೂ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಡಿಎಂಕೆ ಪ್ರತಿಕ್ರಿಯಿಸಿದ್ದು, ಈ ವಿಚಾರ ರಾಕೀಯ ಸಂಘರ್ಷಕ್ಕೆ ನಾಂದಿ ಹಾಡಿತ್ತು.