ನ್ಯೂಸ್

ತಳ್ಳುವ ಬಂಡಿ ಮೇಲೆ ಬೀದಿಬದಿ ಚಿಕನ್ 65 ಮಾರುತ್ತಿರುವ PHD ವಿದ್ಯಾರ್ಥಿ! ವಿಡಿಯೋ ನೋಡಿ

ಚೆನ್ನೈ: ಡಿಗ್ರಿ ಮುಗಿಸಿ ಹೊರಬರುತ್ತಿರುವ ಯುವಕರು ಸರಿಯಾದ ಉದ್ಯೋಗ ಸಿಗದೇ ಕೆಟ್ಟ ಚಟಕ್ಕೆ ಬೀಳುತ್ತಿದ್ದಾರೆ. ಇನ್ನು ಕೆಲವರು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.  ಕೆಲವರು ಸಿಕ್ಕಿರುವ ಕೆಲಸವನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.  ಹೀಗೆ ಯುವಕನೊಬ್ಬ ಪಿಚ್​ಡಿ ಓದುತ್ತಿರುವ ಯುವಕ  ಯಾವುದೇ ಅಹಂಕಾರವಿಲ್ಲದೆ ಕೈ ಖರ್ಚಿಗೆಂದು ಚಿಕ್ಕ ಗಾಡಿಯಲ್ಲಿ ವ್ಯಾಪಾರ ಮಾಡುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಚೆನ್ನೈನ ಪಿಎಚ್‌ಡಿ ವಿದ್ಯಾರ್ಥಿಯೊಬ್ಬ ಕೆಲಸ ಸಿಗದೆ ಇದ್ದರೂ ಕೈಕಟ್ಟಿ ಕುಳಿತುಕೊಳ್ಳುವ ಬದಲು ಯುವಕರಿಗೆ ಮಾದರಿಯಾಗಿ ನಿಂತಿದ್ದಾನೆ. ಯುವಕನ ಧೈರ್ಯ ನೋಡಿ ಅಮೆರಿಕದ ವ್ಲಾಗರ್ ಒಬ್ಬರು ಅಚ್ಚರಿಗೊಂಡಿದ್ದಾರೆ. ಯುವಕನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಅಮೇರಿಕನ್ ವ್ಲಾಗರ್ ಕ್ರಿಸ್ಟೋಫರ್ ಲೂಯಿಸ್ ಇತ್ತೀಚೆಗೆ  ಚೆನ್ನೈಗೆ ಬಂದಿದ್ದರು. ಈ ವೇಳೆ ಬೀದಿ ಆಹಾರದ ಅಂಗಡಿಗೆ ಭೇಟಿ ನೀಡಿದ್ದರು.  ಯುವಕನೊಬ್ಬ ತಳ್ಳುವ ಗಾಡಿ ಮೇಲೆ  ಚಿಕನ್ 65 ತಯಾರಿಸಿ ಮಾರಾಟ ಮಾಡುತ್ತಿದ್ದಾನೆ. ಲೂಯಿಸ್ ಕೂಡ ಒಂದು ಪ್ಲೇಟ್ ಆರ್ಡರ್ ಮಾಡಿದ. ಅದನ್ನು ಮಾಡುವ ಮೊದಲು ಯುವಕನು ಅವನೊಂದಿಗೆ ಮಾತನಾಡಿದನು. ಈ ಬೀದಿ ವ್ಯಾಪಾರಿ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದು, ಜೈವಿಕ ತಂತ್ರಜ್ಞಾನದಲ್ಲಿ ಡಾಕ್ಟರೇಟ್ ಓದುತ್ತಿದ್ದಾನೆ ಎಂದು ತಿಳಿದ. ಇಂಟರ್‌ನೆಟ್‌ನಲ್ಲಿ ಅವರ ಸಂಶೋಧನಾ ಪ್ರಬಂಧಗಳನ್ನು ಹುಡುಕಲು ಹೇಳಿದ.  ರಾಯಣ್ಣ ಎಂದು ಗೂಗಲ್‌ನಲ್ಲಿ ಸರ್ಚ್​​ ಮಾಡಿದರೆ ನನ್ನ ರಿಸರ್ಚ್ ಮಾಡಿದರೆ ನನ್ನ ರಿಸರ್ಚ್​ ಕಂಡುಬರುತ್ತದೆ ಎಂದು ವ್ಯಾಪಾರಿ ತೋರಸಿದ್ದಾನೆ. ಇದನ್ನು ಕೇಳಿದ ವ್ಲಾಗರ್ ಕ್ರಿಸ್ಟೋಫರ್ ಲೂಯಿಸ್ ಅವರಿಗೆ ಆಶ್ಚರ್ಯವಾಗಿದೆ. ಇಷ್ಟು ಓದುತ್ತಿದ್ದರೂ ಯಾವುದೇ ಅಹಂಕಾರವಿಲ್ಲದೆ ಕೈ ಖರ್ಚಿಗೆಂದು ಚಿಕ್ಕ ಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ರೇಯಾನ್ ಅವರನ್ನು ನೋಡಿ ಲೂಯಿಸ್ ಬೆರಗಾದರು.

ವ್ಲಾಗರ್ ಕ್ರಿಸ್ಟೋಫರ್ ಲೂಯಿಸ್ ಅವರು ರಾಯಣ್ಣಗೆ 100 ಡಾಲರ್ (8000 ರೂ.) ಉಡುಗೊರೆಯಾಗಿ ನೀಡಿದರು. ಉನ್ನತ ವ್ಯಾಸಂಗಕ್ಕಾಗಿ ರೇಯಾನ್ ಅವರ ಶ್ರಮ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.