ಮುಂಬೈ: ಭಾರತದ ಬೃಹತ್ ಉದ್ಯಮಿ ಗೌತಮ್ ಅದಾನಿ ಅವರ ಮಗ ಜೀತ್ ಅವರ ವಿವಾಹದ ಪೂರ್ವ ಕಾರ್ಯಕ್ರಮದಲ್ಲಿ ಪಾಪ್ ಗಾಯಕಿ ಟೇಲರ್ ಸ್ವಿಫ್ಟ್(Pop singer Taylor Swift) ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ.
ಜೀತ್ ಅದಾನಿ ಮತ್ತು ದಿವಾ ಷಾ ಮದುವೆ ಹಿನ್ನೆಲೆ ಪೂರ್ವ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರದರ್ಶನ ನೀಡಲು ಗಾಯಕಿ ಜತೆ ಅದಾನಿ ಮತ್ತು ಟೇಲರ್ ಪರ ತಂಡಗಳು ಮಾತುಕತೆ ನಡೆಸುತ್ತಿದ್ದಾರೆ. ಒಂದು ವೇಳೆ ಗಾಯಕಿ ಟೇಲರ್ ಸ್ವಿಫ್ಟ್ ಒಪ್ಪಿದರೆ ಭಾರತಕ್ಕೆ ಪಾದರ್ಪಣೆ ಮಾಡುವ ಮೂಲಕ ಮೊದಲ ಪ್ರದರ್ಶನ ನೀಡಲಿದ್ದಾರೆನ ಎಂದು ವರದಿ ಉಲ್ಲೇಖಿಸಿವೆ.
2014ರಲ್ಲಿ ಭಾರತಕ್ಕೆ ಬರುವ ಆಸೆಯನ್ನು ಗಾಯಕಿ ಟೇಲರ್ ಈ ಮುಂಚೆ ವ್ಯಕ್ತಪಡಿಸಿದ್ದರು. ಆದರೆ, ಅನಾನುಕೂಲ ಕಾರಣಗಳಿಂದ ಭಾರತಕ್ಕೆ ಬರಲು ಆಗಲಿಲ್ಲ ಎಂದು ಟೇಲರ್ ಆಪ್ತ ಮೂಲಗಳು ತಿಳಿಸಿವೆ. ಅಲ್ಲದೆ, ಸ್ವತ ಟೇಲರ್ ಅವರೇ ಇದರ ಬಗ್ಗೆ ಮಾತನಾಡಿದ್ದು, ಭಾರತದ(ಸಂಗೀತ) ಹಾಡುಗಳು ಎಂದರೆ ನನಗೆ ತುಂಬಾ ಇಷ್ಟ. ಪ್ರತಿ ಹಾಡುಗಳು ನನ್ನನ್ನು ರೋಮಾಂಚಗೊಳಿಸುತ್ತವೆ. ನೇರವಾಗಿ ಫ್ಯಾನ್ಸ್ಗಳ ಸಂಪರ್ಕವು ಸಿಗಲಿದೆ ಎಂದು ಬಾಲಿವುಡ್ನಲ್ಲಿ ಕೆಲಸ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು.
ಜೀತ್ ಅದಾನಿ ಮತ್ತು ದಿವಾ ಷಾ ಮದುವೆ ಈ ವರ್ಷದ(2025) ಕೊನೆಯಲ್ಲಿ ಮದುವೆಯಾಲಿದ್ದಾರೆ. ಮದುವೆಯ ಸಿದ್ಧತೆಗಳು ಕೂಡ ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.(ಏಜೆನ್ಸೀಸ್)
https://www.vijayavani.net/virat-is-indias-best-white-ball-player-than-sachin-sourav-ganguly-praises-kohli