ನ್ಯೂಸ್

ಮನೆಯಲ್ಲಿ ಹೆಣವಾಗಿ ಬಿದ್ದಿದ್ದ ಪೋರ್ನ್ ಸ್ಟಾರ್​! ಟಾಪ್​ಲೆಸ್ ಫೋಟೋ ಹಾಕಿ ವಿವಾದಕ್ಕೆ ಸಿಲುಕಿದ್ದ ನಟಿ ಸತ್ತಿದ್ದು ಹೇಗೆ?

ವಾಷಿಂಗ್ಟನ್: ಸಾಕಷ್ಟು ಪೋರ್ನ್​ ಸಿನಿಮಾಗಳಲ್ಲಿ ನಟಿಸಿ, ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದ ಪೋರ್ನ್​ ಸ್ಟಾರ್​ ಒಬ್ಬಳು ಆಕೆಯ ಮನೆಯಲ್ಲೇ ಶವವಾಗಿ ಪತ್ತೆಯಾಗಿರುವ ಘಟನೆ ಅಮೆರಿಕದ ಲಾಸ್​ ಏಂಜಲೀಸ್​ನಲ್ಲಿ ನಡೆದಿದೆ. ಇತ್ತೀಚೆಗೆ ಟಾಪ್​ಲೆಸ್​ ಫೋಟೋ ಹಾಕಿ ವಿವಾದಕ್ಕೆ ಕಾರಣವಾಗಿದ್ದ ಆಕೆಯ ಸಾವಿಗೆ ಕಾರಣ ಮಾತ್ರ ಇನ್ನೂ ತಿಳಿದುಬಂದಿಲ್ಲ.

ಅಮೆರಿಕದ ಡಕೋಟಾ ಸ್ಕೈ(27) ಮೃತ ನಟಿ. ಈಕೆ ಮೇ 4ರಂದು ಒಂದು ಟಾಪ್​ಲೆಸ್​ ಫೋಟೋ ಹಾಕಿದ್ದಳು. ಪೊಲೀಸರಿಂದಾಗಿ ಹತ್ಯೆಯಾಗಿದ್ದ ಜಾರ್ಜ್​ ಫ್ಲೋಯ್ಡ್​ನ ವಾಲ್​ ಪೇಂಟಿಂಗ್​ ಇರುವ ಜಾಗದಲ್ಲಿ ನಿಂತು ಟಾಪ್​ ಎತ್ತಿಕೊಂಡು ಫೋಟೋ ತೆಗೆಸಿಕೊಂಡಿದ್ದ ಆಕೆ ಆ ಫೋಟೋದೊಂದಿಗೆ ಜಾರ್ಜ್​ಗೆ ನಮನ ಸಲ್ಲಿಸಿದ್ದಳು. ಆದರೆ ಅದಕ್ಕೆ ಅನೇಕರು ಆಕ್ರೋಶ ಹೊರಹಾಕಿದ್ದರು. ಜಾರ್ಜ್​ ಪರ ಮತ್ತು ವಿರೋಧ ಪ್ರತಿಕ್ರಿಯೆಗಳೂ ವ್ಯಕ್ತವಾಗಿದ್ದವು. ಆದರೆ ತನ್ನ ನಿಲುವು ಬಿಡದ ನಟಿ, ಯಾರೇ ಆದರೂ ಪೊಲೀಸರಿಂದ ಹತ್ಯೆ ಆದರೆ ಅದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದರು.

ಡಕೋಟಾ ಸ್ಕೈ ಸಾವನ್ನಪ್ಪಿರುವ ವಿಚಾರವನ್ನು ಆಕೆಯ ಪತಿಯೇ ಪೊಲೀಸರಿಗೆ ತಿಳಿಸಿದ್ದಾನೆ. ಹೊರಗೆ ಹೋಗಿದ್ದ ತಾನು ಮನೆಗೆ ಬರುವಷ್ಟರಲ್ಲಿ ಹೆಂಡತಿ ಶವವಾಗಿದ್ದಾಗಿ ಆತ ತಿಳಿಸಿರುವುದಾಗಿ ಹೇಳಲಾಗಿದೆ. ಇತ್ತೀಚಿನ ದಿನಗಳಲ್ಲಿ ನಟಿ ಮಾನಸಿಕವಾಗಿ ಸಾಕಷ್ಟು ನೊಂದಿದ್ದಳು ಎನ್ನಲಾಗಿದೆ. ಆಕೆ ಆತ್ಮಹತ್ಯೆ ಮಾಡಿಕೊಂಡಳೋ ಅಥವಾ ಯಾರಾದರೂ ಕೊಲೆ ಮಾಡಿದ್ದಾರೋ ಎನ್ನುವ ವಿಚಾರ ತನಿಖೆಯಿಂದ ತಿಳಿದುಬರಬೇಕಿದೆ. (ಏಜೆನ್ಸೀಸ್)