ನ್ಯೂಸ್

ಕೆಲವರಿಗೆ ಈ ಬ್ರ್ಯಾಂಡ್​ಗಳ ಹೆಸರೇ ಗೊತ್ತಿರಲಿಲ್ಲ! ಆಗಲೇ... 400 ಲಕ್ಸುರಿ ಬ್ಯಾಗ್​ ಕಲೆಕ್ಷನ್​ ಬಗ್ಗೆ ಅಮೀಶಾ ಪಟೇಲ್​ ಮಾತು | Ameesha Patel

Ameesha Patel: ಬೋಲ್ಡ್​ ಲುಕ್​, ಟಾಕ್​ನಿಂದಲೇ ಆಗಾಗ್ಗೆ ಜಾಲತಾಣಗಳಲ್ಲಿ ಸದ್ದು ಮಾಡುವ ಬಾಲಿವುಡ್ ನಟಿ ಅಮೀಶಾ ಪಟೇಲ್​, ಇದೀಗ ತಮ್ಮ ಬಳಿಯಿರುವ ಸುಮಾರು 400ಕ್ಕೂ ಅಧಿಕ ಲಕ್ಸುರಿ ಬ್ರ್ಯಾಂಡೆಡ್​ ಬ್ಯಾಗ್​ಗಳ ಕಲೆಕ್ಷನ್ ಕುರಿತು ಮಾತನಾಡಿದ್ದಾರೆ.

ಕೆಲವು ತಿಂಗಳ ಹಿಂದಷ್ಟೇ, ಫರಾ ಖಾನ್ ಅವರ ವ್ಲಾಗ್‌ ವಿಡಿಯೋದಲ್ಲಿ, ತನ್ನ ಬಳಿ ಸುಮಾರು 400ಕ್ಕೂ ಹೆಚ್ಚು ಡಿಸೈನರ್ ಬ್ಯಾಗ್‌ಗಳಿವೆ ಎಂದು ನಟಿ ಬಹಿರಂಗಪಡಿಸಿದ್ದರು. ಈ ಮೂಲಕ ಹಲವರ ಗಮನವನ್ನು ತನ್ನತ್ತ ಸೆಳೆದಿದ್ದರು. ಕೋಟಿಗಟ್ಟಲೆ ಮೌಲ್ಯದ ಬ್ಯಾಗ್​ಗಳನ್ನು ಖರೀದಿಸಿರುವ ಅಮೀಶಾ, ಇಂತಹ ಲಕ್ಸುರಿ ಕಲೆಕ್ಷನ್​ ಹಿಂದೆ ನಾನು ಹೋಗದೆ ಇದ್ದಿದ್ರೆ, ಇಂದು ಮುಂಬೈನಲ್ಲಿ ಒಂದು ಪೆಂಟ್‌ಹೌಸ್ ಖರೀದಿಸಬಹುದಿತ್ತು ಎಂದು ಹಾಸ್ಯಸ್ಪದವಾಗಿ ಹೇಳಿದ್ದಾರೆ.

ನನ್ನ ಶಾಲಾ ಬ್ಯಾಗ್ ಕೂಡ ಡಿಸೈನರ್!

'ಜೂಮ್' ಸಂದರ್ಶನದಲ್ಲಿ ಮಾತನಾಡಿದ ಹಾಟ್​ಬ್ಯೂಟಿ, "ನನ್ನ ಈ ಕಲೆಕ್ಷನ್​ಗಳು ನನ್ನ ಉತ್ಸಾಹ ಮತ್ತು ಕಠಿಣ ಪರಿಶ್ರಮ ಎರಡರ ಫಲಿತಾಂಶ. ನಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಎಲ್ಲಿ ಖರ್ಚು ಮಾಡಬೇಕೆಂಬುದನ್ನು ತಿಳಿಯುತ್ತೀವಿ. ದಿನದ ಅಂತ್ಯದಲ್ಲಿ, ಅದು ನಿಮ್ಮ ನಿರ್ಧಾರ, ನಿಮ್ಮ ಇಚ್ಛೆ. ಜನರು ತಮ್ಮ ಜೀವನವನ್ನು ಹೇಗೆ ಬದುಕಲು ಬಯಸುತ್ತಾರೆ ಎಂಬುದರ ಮೇಲೆ ನಾನವರನ್ನು ನಿರ್ಣಯಿಸುವುದಿಲ್ಲ. ಬಾಲ್ಯದಿಂದಲೇ ಈ ಫ್ಯಾಶನ್​ ಮೋಹ ನನ್ನಲ್ಲಿ ಬಂದಿತ್ತು. ಶಾಲೆಗೆ ಹೋಗುವಾಗಲೇ ನನ್ನ ಬಳಿ ಡಿಸೈನರ್​ ಬ್ಯಾಗ್​ ಇತ್ತು" ಎಂದು ಹೇಳಿದ್ದಾರೆ.

"ಕೆಲವರು ಈ ಬ್ರ್ಯಾಂಡ್​ಗಳ ಹೆಸರುಗಳನ್ನು ತಿಳಿಯುವ, ಹೇಳುವ ಮೊದಲೇ ನಾನು ಇದನ್ನೆಲ್ಲ ಬಳಸುತ್ತಿದ್ದೆ. ನಾನಿಲ್ಲಿ ಯಾರೊಬ್ಬರ ಕಾರು ಅಥವಾ ಬೈಕ್ ಕಲೆಕ್ಷನ್​ ಬಗ್ಗೆ ನನ್ನ ಅನಿಸಿಕೆಯನ್ನು ಹೇಳಲು ಬಯಸುವುದಿಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ಲೈಕ್​ಗಳು ಇರುತ್ತವೆ. ಅವರ ಹಣದಲ್ಲಿ ತಮಗೆ ಇಷ್ಟಬಂದದ್ದನ್ನು ಖರ್ಚು ಮಾಡುವ ಆಸೆ ಹೊಂದಿರುತ್ತಾರೆ. ನನ್ನ ವಿಷಯದಲ್ಲಿ ಅದು ಬ್ಯಾಗ್ ಆಗಿದೆ" ಎಂದಿದ್ದಾರೆ,(ಏಜೆನ್ಸೀಸ್).