ನ್ಯೂಸ್

Pushpa-2 ಕುರಿತು ಹೊರಬಿತ್ತು ಮೇಜರ್​ ಅಪ್ಡೇಟ್​; ಈ ದಿನ Cinema ರಿಲೀಸ್​ ಆಗೋದು ಪಕ್ಕಾ

ಹೈದರಾಬಾದ್​: ಸುಕುಮಾರ್ (Sukumar)​ ನಿರ್ದೇಶನದ ಅಲ್ಲು ಅರ್ಜುನ್​ (Allu Arjun) ನಾಯಕನಾಗಿ ನಟಿಸುತ್ತಿರುವ ಪುಷ್ಪ-2(Pushpa-2) ಚಿತ್ರವು ಈಗಾಗಲೇ ಸಾಕಷ್ಟು ಹೈಪ್​ (Hype) ಕ್ರಿಯೇಟ್​ ಮಾಡಿದ್ದು, ಸಿನಿಮಾ ಬಿಡುಗಡೆಗಾಗಿ (Cinema Release) ಅಭಿಮಾನಿಗಳು (Fans) ಎದುರು ನೋಡುತ್ತಿದ್ದಾರೆ. ಈಗಾಗಲೇ ಚಿತ್ರದ ಹಾಡು ಹಾಗೂ ಫಸ್ಟ್​ ಲುಕ್​ ಟೀಸರ್​ನಿಂದ ಕ್ರೇಜ್​ ಹೆಚ್ಚಿಸಿರುವ ಪುಷ್ಪ (Pushpa) ಚಿತ್ರತಂಡ ಇದೀಗ ಹೊಸದೊಂದು ಅಪ್ಡೇಟ್​ ನೀಡುವ ಮೂಲಕ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದೆ.

ಚಿತ್ರಕ್ಕೆ ಸಂಬಂಧಿಸಿದಂತೆ ಹೊಸದೊಂದು ಪೋಸ್ಟರ್​ ರಿಲೀಸ್​ ಮಾಡಲಾಗಿದ್ದು, ಇದರಲ್ಲಿ ಚಿತ್ರ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿದೆ. ಬಿಡುಗಡೆ ಮಾಡಲಾಗಿರುವ ಪೋಸ್ಟರ್​ನಲ್ಲಿ ನಾಯಕ ನಟ ಅಲ್ಲು ಅರ್ಜುನ್​ ಕಾಣಿಸಿಕೊಂಡಿದ್ದು, ಫಸ್ಟ್‌ ಹಾಫ್‌ ಲಾಕ್‌ ಮತ್ತು ಲೋಡ್‌ ಫುಲ್‌ ಫೈರ್‌ ಎಂದು ಶೀರ್ಷಿಕೆ ನೀಡಲಾಗಿದೆ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಂಡ ರಿವೀಲ್ ಮಾಡದೇ ಇದ್ದರೂ ಪೋಸ್ಟರ್ ಲುಕ್ ನೋಡಿ ಬನ್ನಿ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಇನ್ನೂ ಡಿಸೆಂಬರ್ 6ರಂದು ರಿಲೀಸ್ ಆಗುವ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ.

ಈ ಮೊದಲು ಡಿಸೆಂಬರ್​ 06ರಂದೇ ಚಿತ್ರ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತಾದರೂ ಇನ್ನೂ ಚಿತ್ರೀಕರಣ ಬಾಕಿ ಇದ್ದ ಕಾರಣ ಈ ವರ್ಷವೂ ಫಿಲಂ ರಿಲೀಸ್​ ಆಗೋದು ಡೌಟ್​ ಎಂದು ಹೇಳಲಾಗಿತ್ತು. ಈಗ ಮತ್ತೊಮ್ಮೆ ರಿಲೀಸ್ ಕುರಿತು ಅಧಿಕೃತ ಅಪ್‌ಡೇಟ್ ಸಿಕ್ಕಿರುವುದು ಅಭಿಮಾನಿಗಳಿಗೆ ಖುಷಿ ನೀಡಿದ್ದು, ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

ಇನ್ನೂ ಡಿಸೆಂಬರ್​ 06 ವಿಕ್ಕಿ ಕೌಶಲ್​ ನಟನೆಯ Chhaava ಚಿತ್ರ ಬಿಡುಗಡೆಯಾಗುತ್ತಿದ್ದು, ಬಾಕ್ಸ್​ ಆಫೀಸ್​ನಲ್ಲಿ ಕ್ಲಾಶ್​ ಆಗುವುದು ಪಕ್ಕಾ ಎಂದು ಸಿನಿಮಾ ಪಂಡಿತರು ಭವಿಷ್ಯ ನುಡಿದಿದ್ದಾರೆ. ಇನ್ನೊಂದು ವಿಶೇಷವೇನೆಂದರೆ ಪುಷ್ಪ (Pushpa-2) ಹಾಗೂ Chhaava ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ನಟಿಸಿದ್ದು, ಯಾವ ಚಿತ್ರಕ್ಕೆ ಹೋಗಬೇಕೆಂಬ ಗೊಂದಲದಲ್ಲಿ ಅಭಿಮಾನಿಗಳು ಇದ್ದಾರೆ. ಒಂದು ವೇಳೆ Chhaava ಚಿತ್ರದ ಬಿಡುಗಡೆ ದಿನಾಂಕ ಬದಲಾದರೂ ಆಗಬಹುದು ಎಂದು ಸಿನಿಪಂಡಿತರು ಅಂದಾಜಿಸಿದ್ದಾರೆ.