ಹೈದರಾಬಾದ್: ಸಂಧ್ಯಾ ಥಿಯೇಟರ್ ಕಾಲ್ತುಳಿತದಲ್ಲಿ ಗಾಯಗೊಂಡಿದ್ದ ಶ್ರೀತೇಜ ಅವರನ್ನು ನಿರ್ಮಾಪಕ ಅಲ್ಲು ಅರವಿಂದ್ ಮತ್ತು ದಿಲ್ ರಾಜು ಭೇಟಿ ಮಾಡಿದರು. ಬಳಿಕ ಘಟನೆಯಲ್ಲಿ ಮೃತಪಟ್ಟ ರೇವತಿ ಕುಟುಂಬಕ್ಕೆ ಪುಷ್ಪ2(Pushpa 2) ತಂಡ 2 ಕೋಟಿ ರೂಪಾಯಿ ಪರಿಹಾರ ನೀಡಲಿದೆ ಎಂದು ಘೋಷಿಸಿದ್ದಾರೆ.
ಅಲ್ಲು ಅರವಿಂದ್ ಮತ್ತು ಹಿರಿಯ ನಿರ್ಮಾಪಕ ದಿಲ್ ರಾಜು ಇತರರೊಂದಿಗೆ ಕಾಲ್ತುಳಿತದಿಂದ ಗಾಯಗೊಂಡ ಬಾಲಕ ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ವೈದ್ಯರೊಂದಿಗೆ ಸಮಾಲೋಚಿಸಿದ ನಂತರ ಅಲ್ಲು ಅರವಿಂದ್, ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ. ಈಗ ಅವರು ವೆಂಟಿಲೇಟರ್‌ನಲ್ಲಿ ಇಲ್ಲ. ಸ್ವತಂತ್ರವಾಗಿ ಉಸಿರಾಡಲು ಸಮರ್ಥನಾಗಿದ್ದಾನೆ ಎಂದು ತಿಳಿಸಿ ಸಮಾಧಾನ ವ್ಯಕ್ತಪಡಿಸಿದರು.
ಸಂತ್ರಸ್ತರ ಕುಟುಂಬಕ್ಕೆ 2 ಕೋಟಿ ರೂಪಾಯಿ ನೀಡಬೇಕು. ಅಲ್ಲು ಅರ್ಜುನ್‌ನಿಂದ 1 ಕೋಟಿ ರೂಪಾಯಿ, ಮೈತ್ರಿ ಮೂವಿ ಮೇಕರ್ಸ್‌ನಿಂದ 50 ಲಕ್ಷ ರೂ. ಮತ್ತು ನಿರ್ದೇಶಕ ಸುಕುಮಾರ್‌ರಿಂದ 50 ಲಕ್ಷ ರೂಪಾಯಿ ಒಟ್ಟು 2 ಕೋಟಿ ರೂಪಾಯಿ. ನಾವು ಈ ಹಣವನ್ನು ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷ ದಿಲ್ ರಾಜು ಮೂಲಕ ನೀಡುತ್ತೇವೆ ಎಂದು ಅಲ್ಲು ಅರವಿಂದ್ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ಇದೇ ಸಮಯದಲ್ಲಿ ನೀವು ಹುಡುಗನ ಕುಟುಂಬವನ್ನು ಭೇಟಿ ಮಾಡಿದ್ದೀರಾ ಎಂದು ಅಲ್ಲು ಅರವಿಂದ್ ಅವರನ್ನು ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ಕಾನೂನು ಸಮಸ್ಯೆಗಳಿಂದ ನಾನು ಕುಟುಂಬದೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಪೊಲೀಸರ ಅನುಮತಿ ಮೇರೆಗೆ 10 ದಿನಗಳ ಹಿಂದೆ ಒಮ್ಮೆ ಅವರನ್ನು ಭೇಟಿ ಮಾಡಿದ್ದೆ ಎಂದಿದ್ದಾರೆ. ಡಿಸೆಂಬರ್ 4 ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ‘ಪುಷ್ಪ 2’ ವಿಶೇಷ ಪ್ರದರ್ಶನದ ವೇಳೆ ಕಾಲ್ತುಳಿತದಿಂದ ರೇವತಿ ಎಂಬ ಮಹಿಳೆ ಪ್ರಾಣ ಕಳೆದುಕೊಂಡರು. ಅವರ ಮಗ ಕಾಲ್ತುಳಿತದಿಂದ ಗಂಭೀರ ಸ್ಥಿತಿಗೆ ಆಸ್ಪತ್ರೆಗೆ ದಾಖಲಾಗಿದ್ದರು.(ಏಜೆನ್ಸೀಸ್)