ನ್ಯೂಸ್

ಅಲ್ಲು ಅರ್ಜುನ್​ಗೆ 2ನೇ ರಾಷ್ಟ್ರಪ್ರಶಸ್ತಿ ಖಚಿತ! ಐಕಾನ್​ ಸ್ಟಾರ್​ ಗೆಲುವಿನ ಬಗ್ಗೆ ಹಾಟ್​ ಬ್ಯೂಟಿ ಭರವಸೆ | Allu Arjun

Pushpa 2: ಟಾಲಿವುಡ್​ನ ಸ್ಟೈಲಿಶ್ ಸ್ಟಾರ್, ನಟ ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಅಭಿನಯದ 'ಪುಷ್ಪ 2' ದಿ ರೂಲ್ ಚಿತ್ರವು ಸದ್ಯ ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ ಈ ಹಿಂದಿನ ದಾಖಲೆಗಳನ್ನು ಮುರಿಯುತ್ತಿದೆ. ಸುಕುಮಾರ್ ನಿರ್ದೇಶನದ ಚಿತ್ರವು ಕೇವಲ ನಾಲ್ಕು ದಿನಗಳಲ್ಲಿ 821 ಕೋಟಿ ರೂ. ಗಳಿಸಿದೆ. ಆ್ಯಕ್ಷನ್​ ಸೀಕ್ವೆನ್ಸ್​ ಮತ್ತು ಹಾಡಿನಿಂದ ನೋಡುಗರನ್ನು ಮೋಡಿ ಮಾಡಿರುವ ಸಿನಿಮಾ, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ಪ್ಯಾನ್ ಇಂಡಿಯಾ 'ಪುಷ್ಪ 2' ಸಿನಿಮಾದಲ್ಲಿ ಅಲ್ಲು ಅರ್ಜುನ್ ಆ್ಯಕ್ಷನ್​, ಡೈಲಾಗ್ ಮತ್ತು ಜಬರ್ದಸ್ತ್​ ಡ್ಯಾನ್ಸ್​ಗೆ ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್ ಪಡೆದುಕೊಳ್ಳುತ್ತಿದೆ. ಪುಷ್ಪ 1 ಚಿತ್ರಕ್ಕಾಗಿ ಇತ್ತೀಚೆಗಷ್ಟೇ ರಾಷ್ಟ್ರಪ್ರಶಸ್ತಿ ಸ್ವೀಕರಿಸಿದ ನಟನಿಗೆ ಚಿತ್ರರಂಗದ ಗಣ್ಯರಿಂದ ಮತ್ತು ಇತರೆ ಕ್ಷೇತ್ರಗಳಿಂದ ಅಭಿನಂದನೆ ವ್ಯಕ್ತವಾಗಿತ್ತು. ತಮ್ಮ ಎರಡನೇ ಭಾಗದ ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕೆ ಐಕಾನ್​ ಸ್ಟಾರ್​ ದ್ವಿತೀಯ ಬಾರಿ ರಾಷ್ಟ್ರಪ್ರಶಸ್ತಿಗೆ ಮುತ್ತಿಡಲಿದ್ದಾರೆ ಎಂದು ಬಾಲಿವುಡ್​ ಹಾಟ್​ ಬ್ಯೂಟಿ ಊರ್ವಶಿ ರೌಟೇಲಾ ಅಭಿಪ್ರಾಯಿಸಿದ್ದಾರೆ. ​

ಮಲ್ಟಿಪ್ಲೆಕ್ಸ್​ನಲ್ಲಿ ಚಿತ್ರ ವೀಕ್ಷಿಸಿದ ಊರ್ವಶಿ, ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಅದರಲ್ಲೂ ಜಾತ್ರೆಯ ಸೀನ್ ಅನ್ನು ಹಾಡಿ ಹೊಗಳಿದ ನಟಿ, ಅಲ್ಲು ಅರ್ಜುನ್​ ಅವರ ಅಭಿನಯ ಅತ್ಯುತ್ತಮವಾಗಿದೆ. ಸಿನಿಮಾದಲ್ಲಿನ ನಟನೆಗೆ ಎರಡನೇ ರಾಷ್ಟ್ರಪ್ರಶಸ್ತಿ ತಯಾರಾಗುತ್ತಿದೆ. ಇಡೀ ಚಿತ್ರತಂಡಕ್ಕೆ ಅಭಿನಂದನೆ ಎಂದು ನಟಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).