ನ್ಯೂಸ್

ಮತಗಳ್ಳತನ ಆರೋಪ; ವಂಚನೆ ತಡೆಗಟ್ಟಲು ಚುನಾವಣಾ ಆಯೋಗದಿಂದ 'ಇ-ಸೈನ್' ವ್ಯವಸ್ಥೆ ಜಾರಿ| e-sign

ನವದೆಹಲಿ: ಚುನಾವಣೆ ಸಂದರ್ಭದಲ್ಲಿ ಮತಗಳ್ಳತನ ನಡೆದಿದೆ ಎಂದು ರಾಹುಲ್​ಗಾಂಧಿ ಆರೋಪಿಸಿದ ಬಳಿಕ ಇದೀಗ ಚುನಾವಣಾ ಆಯೋಗ ಹೊಸ ಇ-ಸೈನ್ ವ್ಯವಸ್ಥೆಯೊಂದನ್ನು ಜಾರಿಗೆ ತಂದಿದೆ. ಭಾರತದ ಚುನಾವಣಾ ಆಯೋಗವು (EC) ತನ್ನ ಪೋರ್ಟಲ್ ಮತ್ತು ಅಪ್ಲಿಕೇಶನ್‌ನಲ್ಲಿ ಎಲೆಕ್ಟ್ರಾನಿಕ್ ಸಹಿ (ಇ-ಸೈನ್) ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. ಈ ಹಿಂದೆ ಅರ್ಜಿದಾರರು ಯಾವುದೇ ಪರಿಶೀಲನೆಯಿಲ್ಲದೇ ಫಾರ್ಮ್‌ಗಳನ್ನು ಸಲ್ಲಿಸುತ್ತಿದ್ದರು. ಇದರಿಂದಾಗಿ ವೋಟರ್‌ ಐಡಿ ದುರುಯೋಗವಾಗುವ ಸಾಧ್ಯತೆಯಿತ್ತು. ಆದ್ದರಿಂದ ಈ ವ್ಯವಸ್ಥೆ ಪ್ರಾರಂಭಿಸಲಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ.

ಕರ್ನಾಟಕದ ಆಳಂದ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರೇರಿತ ಅಳಿಸುವಿಕೆಗಳು ನಡೆಯುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಆರೋಪಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಮತದಾರರು ತಿದ್ದುಪಡಿ ಅಥವಾ ನೋಂದಣಿಗಾಗಿ ಅರ್ಜಿ ಸಲ್ಲಿಸುವಾಗ ತಮ್ಮ ಆಧಾರ್‌ ಲಿಂಕ್‌ ಮಾಡಲಾದ ಮೊಬೈಲ್‌ ಸಂಖ್ಯೆಯ ಮೂಲಕ ತಮ್ಮ ಗುರುತನ್ನು ದೃಢೀಕರಿಸಬೇಕು. ಮತದಾರರ ಗುರುತಿನ ಚೀಟಿ (EPIC) ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಮತದಾರರ ಅಳಿಸುವಿಕೆಗೆ ಯಾವುದೇ ವಿನಂತಿಯನ್ನು ಮಾಡಬಹುದು. ಅಳಿಸುವಿಕೆ ವಿನಂತಿಗಳನ್ನು ನೇರವಾಗಿ ಸಲ್ಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಇ-ಸೈನ್' ಕೆಲಸ ಏನು.?

(ಏಜೆನ್ಸೀಸ್)

'ಇ-ಸೈನ್' ವೈಶಿಷ್ಟ್ಯವನ್ನು ಆಗಸ್ಟ್ ಮೊದಲ ವಾರದಲ್ಲಿ ಪ್ರಾರಂಭಿಸಲಾಗಿದ್ದು, ಅರ್ಜಿದಾರರು ಫಾರ್ಮ್ 6 ಬಳಸಿಕೊಂಡು ಹೊಸ ಮತದಾರರಾಗಿ ನೋಂದಾಯಿಸಿಕೊಳ್ಳಬಹುದು. ಅಥವಾ ಮೃತ ವ್ಯಕ್ತಿಯ ಸಂದರ್ಭದಲ್ಲಿ ಫಾರ್ಮ್ 7 (ಮತದಾರರ ಹೆಸರು ಅಳಿಸುವಿಕೆಗೆ ಅರ್ಜಿ) ಬಳಸಿಕೊಂಡು ಹೆಸರನ್ನು ತೆಗೆದುಹಾಕಲು ECINet ಪೋರ್ಟಲ್‌ನಲ್ಲಿ ಮತದಾರರ ಫೋಟೋ ಗುರುತಿನ ಚೀಟಿ (EPIC) ಸಂಖ್ಯೆಯೊಂದಿಗೆ ಫೋನ್ ಸಂಖ್ಯೆಯನ್ನು ಸಂಪರ್ಕಿಸುವ ಮೂಲಕ ಸಾಧ್ಯವಿದೆ. ಅಂದಹಾಗೆ ಅಗತ್ಯವಿರುವ ಮಾಹಿತಿಯನ್ನು ನಮೂದಿಸಿದ ಬಳಿಕ, ಮತದಾರರ ಗುರುತಿನ ಚೀಟಿ ಮತ್ತು ಆಧಾರ್‌ನಲ್ಲಿರುವ ಹೆಸರು ಹೊಂದಿಕೆ ಆಗಿದೆಯೇ, ಆಧಾರ್‌ಗೆ ಮೊಬೈಲ್ ಸಂಖ್ಯೆ ಲಿಂಕ್‌ ಆಗಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಲಿಂಕ್ ಮಾಡಲಾದ ಫೋನ್ ಸಂಖ್ಯೆಗೆ OTP ಕಳುಹಿಸುವ ಮೂಲಕ ಅವರ ಆಧಾರ್ ಅನ್ನು ಪರಿಶೀಲಿಸಲಾಗುತ್ತದೆ. ಈ ದೃಢೀಕರಣವನ್ನು ಪೂರ್ಣಗೊಳಿಸಿದ ಬಳಿಕ, ಬಳಕೆದಾರರನ್ನು EC ಸೈಟ್‌ಗೆ ಮರುನಿರ್ದೇಶಿಸಲಾಗುತ್ತದೆ. ಈ ಪ್ರಕ್ರಿಯೆಯು ನಕಲಿ ಅರ್ಜಿಗಳನ್ನು ಸಹಾಯ ಮಾಡಲಿದೆ.