ನ್ಯೂಸ್

Virility check: ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಪತ್ನಿ ಆತ್ಮಹತ್ಯೆ..ಪತಿಯ ಪುರುಷತ್ವ ಸಾಮರ್ಥ್ಯ ಪರೀಕ್ಷೆಗೆ ಹೈಕೋರ್ಟ್​ ಆದೇಶ

ಪ್ರಯಾಗ್ರಾಜ್: ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿ ಪತಿಯ ಪುರುಷತ್ವ ಸಾಮರ್ಥ್ಯ(Virility check)ವನ್ನು ಪರೀಕ್ಷಿಸಲು ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ. ಅಷ್ಟೇ ಅಲ್ಲ, ನ.12 ರಂದು ತನಿಖಾ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ತಿಳಿಸಿದೆ.

ಹಾಪುರದ ಅರ್ಜಿದಾರರ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಈ ಆದೇಶ ನೀಡಿದ್ದಾರೆ.

ಹಾಪುರ್ ಜಿಲ್ಲೆಯ ಗರ್ಮುಕ್ತೇಶ್ವರ ಪೊಲೀಸ್ ಠಾಣೆಯಲ್ಲಿ ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಕ್ಕಳಾಗಲಿಲ್ಲ ಎಂಬ ಕೊರಗಿನಲ್ಲಿ ಮನನೊಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅರ್ಜಿದಾರ ಪತಿ ಆರೋಪಿಸಿದ್ದರು. ಮಕ್ಕಳಿಲ್ಲದ ಕಾರಣಕ್ಕೆ ಮಹಿಳೆಯರನ್ನು ಯಾವಾಗಲೂ ದೂಷಿಸಲು ಸಾಧ್ಯವಿಲ್ಲ, ಪುರುಷರಲ್ಲಿಯೂ ಪುರುಷತ್ವದ ಕೊರತೆಯಿದೆ ಎಂದು ಹೇಳಿದ ನ್ಯಾಯಾಲಯ ಪುರುಷತ್ವ ಪರೀಕ್ಷೆಗೆ ಆದೇಶಿಸಿದೆ.