ನ್ಯೂಸ್

ಇನ್ಮುಂದೆ ರೈಲು ಹಾಗೂ ರೈಲ್ವೆ ನಿಲ್ದಾಣದಲ್ಲಿ ವೈದ್ಯಕೀಯ ಸೇವೆ ನೀಡಲು ಚಿಂತನೆ; Train

Train | ಪ್ರಯಾಣಿಕರು ಓಡಾಡುವ ಎಲ್ಲಾ ರೈಲುಗಳು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ವೈದ್ಯಕೀಯ ಪೆಟ್ಟಿಗೆಗಳ ಸೌಲಭ್ಯವನ್ನು ಕಲ್ಪಿಸಲು ರೈಲ್ವೆ ಸಚಿವಾಲಯವು ತೀರ್ಮಾನಿಸಿದೆ. ಔಷಧಿಗಳು ಮತ್ತು ಉಪಯುಕ್ತ ಸಾಮಗ್ರಿಗಳನ್ನು ಸೇರಿದಂತೆ ಇತರ ವಸ್ತುಗಳನ್ನು ಒಳಗೊಂಡಿರುವ ವೈದ್ಯಕೀಯ ಪೆಟ್ಟಿಗೆಗಳನ್ನು ಒದಗಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದಂತೆ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (AIIMS) ಸ್ಥಾಪಿಸಲಾದ ತಜ್ಞರ ಸಮಿತಿಯ ಶಿಫಾರಸುಗಳನ್ನು ಅನುಸರಿಸಲಾಗಿದೆ. ಜೀವ ಉಳಿಸುವ ಔಷಧಿಗಳು ಮತ್ತು ಇತರ ಅಗತ್ಯ ಉಪಕರಣಗಳನ್ನು ಒಳಗೊಂಡಿರುವ ವೈದ್ಯಕೀಯ ಪೆಟ್ಟಿಗೆಗಳನ್ನು ಪರಿಚಯಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ರೈಲು ಟಿಕೆಟ್ ಪರೀಕ್ಷಕರು, ರೈಲು ಗಾರ್ಡ್‌ಗಳು, ಸ್ಟೇಷನ್ ಮಾಸ್ಟರ್‌ಗಳು ಮತ್ತು ಇತರರು ಸೇರಿದಂತೆ ಮುಂಚೂಣಿ ಸಿಬ್ಬಂದಿಗೆ ಪ್ರಥಮ ಚಿಕಿತ್ಸೆಯಲ್ಲಿ ತರಬೇತಿ ನೀಡಲಾಗುತ್ತದೆ ಮತ್ತು ಅವರಿಗೆ ನಿಯಮಿತ ಕೋರ್ಸ್‌ಗಳನ್ನು ನಡೆಸಲಾಗುತ್ತದೆ ಎಂದು ವೈಷ್ಣವ್ ಹೇಳಿದ್ದಾರೆ. ಹತ್ತಿರದ ಆಸ್ಪತ್ರೆಗಳು, ವೈದ್ಯರ ಪಟ್ಟಿ ಮತ್ತು ಅವರ ಸಂಪರ್ಕ ಸಂಖ್ಯೆಗಳು ಎಲ್ಲಾ ರೈಲು ನಿಲ್ದಾಣಗಳಲ್ಲಿ ಲಭ್ಯವಿದೆ, ಗಾಯಗೊಂಡ ಅಥವಾ ಅನಾರೋಗ್ಯ ಪೀಡಿತ ಪ್ರಯಾಣಿಕರನ್ನು ಆಸ್ಪತ್ರೆಗಳಿಗೆ ಹೋಗಲು ಆಂಬ್ಯುಲೆನ್ಸ್ ಸೇವೆಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಕಳೆದ ಐದು ವರ್ಷಗಳಲ್ಲಿ ದೇಶಾದ್ಯಂತ ರೈಲು ನಿಲ್ದಾಣಗಳು ಮತ್ತು ಪ್ರಯಾಣಿಕ ರೈಲುಗಳಲ್ಲಿ ವೈದ್ಯಕೀಯ ತುರ್ತು ಕೇಂದ್ರಗಳನ್ನು ಸ್ಥಾಪಿಸುವ ಕುರಿತು ಸರ್ಕಾರ ಯಾವುದೇ ಅಧ್ಯಯನ ಅಥವಾ ಸಮೀಕ್ಷೆಯನ್ನು ನಡೆಸಿಲ್ಲ ಎಂದು ಬಿಜೆಪಿ ಸಂಸದ ರ್‍ಯಾಗ ಕೃಷ್ಣಯ್ಯ ಅವರು ಪ್ರಶ್ನಿಸಿದರು. ಇದಾದ ನಂತರ ಈ ವಿಚಾರದ ಬಗ್ಗೆ ಸದನಲ್ಲಿ ಚರ್ಚಿಸಲಾಯ್ತು.

ಪ್ರಯಾಣಿಕರು ಈ ಸೌಲಭ್ಯಗಳ ಬಗ್ಗೆ ತಿಳಿದಿರುವುದನ್ನು ಖಚಿತಪಡಿಸಿಕೊಳ್ಳಲು, ಭಾರತೀಯ ರೈಲ್ವೆ ನಿಲ್ದಾಣಗಳಲ್ಲಿ ಮತ್ತು ರೈಲುಗಳ ಒಳಗೆ ಜಾಗೃತಿ ಅಭಿಯಾನಗಳನ್ನು ನಡೆಸಲು ಯೋಜಿಸಿದೆ. ಇವುಗಳಲ್ಲಿ ಸಾರ್ವಜನಿಕ ಪ್ರಕಟಣೆಗಳು, ಪೋಸ್ಟರ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ರೈಲ್ವೆ ವೆಬ್‌ಸೈಟ್‌ಗಳಲ್ಲಿ ವೈದ್ಯಕೀಯ ತುರ್ತು ಮಾಹಿತಿಯ ಬಗ್ಗೆ ಪ್ರಕಟಣೆ ಹೊರಡಿಸಲಾಗುತ್ತದೆ. ಈ ಎಲ್ಲಾ ಕ್ರಮಗಳು ಭಾರತೀಯ ರೈಲ್ವೆ ಜಾಲದಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಆರೋಗ್ಯ ರಕ್ಷಣಾ ಸಿದ್ಧತೆಯನ್ನು ಸುಧಾರಿಸುವ ಉದ್ದೇಶದಿಂದ ಕೆಲಸ ನಿರ್ವಹಿಸುತ್ತವೆ. ಈ ಮೂಲಕ ಸರ್ಕಾರದ ಬದ್ಧತೆಯನ್ನು ತಿಳಿಯಬಹುದು.

(ಏಜೆನ್ಸೀಸ್​)